ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ನೀಡಿ : ಮುರಘರಾಜೇಂದ್ರ ಮಹಾಸ್ವಾಮಿಗಳು…
ಯರಗಟ್ಟಿ : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆ ಒಳ್ಳೆಯ ಸಂಸ್ಕಾರ ನೀಡಿ ಎಂದು ಬಾಗೋಜಿಕ್ಕೊಪ್ಪದ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ರೈನಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಿ. ಶ್ರೀ ಪತ್ರೆಪ್ಪ ಪಟ್ಟಣಶೆಟ್ಟಿ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಅವರ ಕುರಿತು ನಾಗೇಶ್ ಜೆ ನಾಯಕ ಅವರು ಬರೆದ “ಆತ್ಮ ಧ್ಯಾನದ ಬುತ್ತಿ” ಎಂಬ ಪುಸ್ತಕ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಅವರು ಮಾತನಾಡಿದರು. ತಂದೆ ತಾಯಿಗೆ ಗೌರವ ನೀಡುವ ಮೂಲಕ ಅವರನ್ನು ಪೂಜ್ಯನಿಯ ಭಾವದಿಂದ ಕಾಣಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕೀರ್ತಿ ಸಂಪಾದಿಸಬೇಕು ಎಂದರು ಹಾಗೂ ದಿ.ಪತ್ರೆಪ್ಪ ಪಟ್ಟಣಶೆಟ್ಟಿ ಅವರ ನೆನಪು ಅಳಿಯದಂತೆ ಸಾಹಿತ್ಯದಲ್ಲಿ ಬರೆದಿರುವ ಕೆಲಸ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಾಯ್.ಬಿ.ಕಡಕೋಳ, ಜಗದೀಶ್ ಸಂಗನ್ನವರ, ಶಿವಾನಂದ ಬಸಿಡೋಣಿ, ಆನಂದ ಪಾಟೀಲ್, ವಿಠ್ಠಲ ದಳವಾಯಿ, ಬಿ.ಎಂ.ಬಾವಾಖಾನ್, ಇಬ್ರಾಹಿಂ ಚಾಂದಖಾನವರ, ಎಫ್.ಎಲ್.ಮದಹಳ್ಳಿ ಕವಿಗೋಷ್ಠಿ ನೆರವೇರಿಸಿದರು. ಎಂ.ಆರ್.ಹಂಜಿ ಅಧ್ಯಕ್ಷೀಯ ನುಡಿಗಳನ್ನಾಡಿದರು, ಉಪನ್ಯಾಸಕರಾದ ಮಾರುತಿ ಜಾವೂರ ಕೃತಿ ಬಿಡುಗಡೆ ಮಾಡಿದರು, ರಮೇಶ ಮುರಂಕರ ಕೃತಿ ಪರಿಚಯಿಸಿದರು, ನಿವೃತ್ತ ಪ್ರಾಧ್ಯಾಪಕ ಎಸ್ ಆಯ್ ಅಳಗೋಡಿ, ಆರ್ ಎಲ್ ಜೂಗನವರ, ನಾಗೇಶ್ ಜೆ ನಾಯಕ, ಬಸವರಾಜ ಪಟ್ಟಣಶೆಟ್ಟಿ ಮತ್ತು ಬಂಧುಗಳು ಗ್ರಾಮದ ಗುರು ಹಿರಿಯರು ಶಿಷ್ಯಂದಿರು ಇದ್ದರು.
ವರದಿ – ಉಪ-ಸಂಪಾದಕೀಯ