ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತ ಸಂವಿಧಾನ- ಡಾ.ಗೌತಮ.   

Spread the love

ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತ ಸಂವಿಧಾನಡಾ.ಗೌತಮ.   

 

ಹುಮನಾಬಾದ: ಪ್ರಪಂಚದ ಹಲವು ದೇಶಗಳಲ್ಲಿ ಸಂವಿಧಾನವಿದ್ದರು ಸಹ  ಭಾರತ ದೇಶದ ತನ್ನದೇ ಆದ ವಿಶಿಷ್ಟ ಗೌರವ ಸ್ಥಾನಮಾನವಿದೆ ಎಂದು ಡಾ.ಗೌತಮರವರು ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಕೊಟ್ಟ ಕೀರ್ತಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ನಿರ್ವಹಣಾ ಶಾಸ್ತ್ರ ಪ್ರಾಧ್ಯಾಪಕ ಡಾ.ಗೌತಮ ನುಡಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದವರು ಮಾತನಾಡಿ ಡಾ.ಅಂಬೇಡ್ಕರ್ ಅವರು ಕಷ್ಟ ಪಟ್ಟು ಸಂವಿಧಾನ ರಚಿಸಿದ್ದಾರೆ. ಇದನ್ನು ಉಳಿಸಿ ಬೆಳೆಸಿಕೊಂಡು ಬರಬೇಕು.  ಸಂವಿಧಾನ ಸಮರ್ಪಣೆಯಾಗಿ ಎಪ್ಪತ್ತೊಂದು ವರ್ಷವಾಗಿದೆ. ಆ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನ ಓದಬೇಕೆಂದರು. ಡಾ.ಶಾಂತಕುಮಾರ ಬನಗುಂಡಿ ಸ್ವಾಗತಿಸಿದರು. ಡಾ.ಜಯದೇವಿ ಗಾಯಕವಾಡ ನಿರೂಪಿಸಿ, ರಾಜಕುಮಾರ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ರೂತಾ,ಡಾ.ಶಾಂತಕುಮಾರ ಬನಗುಂಡಿ,ಡಾ.ರಾಜಾಬಾಯಿ,ಅಶ್ವಿನಿ, ದಿಲಿಪಕುಮಾರ ಪತಂಗೆ,ಶಿವಾಜಿ ರಾಠೋಡ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *