ಕಳ್ಳತನ ವಾಗಿದ್ದ ಟ್ರಾಲಿಗಳನ್ನು ಪೊಲೀಸರು ಪತ್ತೆ ಹಚ್ಚಿ , ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಾವರಗೇರಾ ಪೊಲೀಸ್ ಪಡೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೋಲಿಸ್ ಪಡೆಯ ಯಶಸ್ವಿ ಕಾರ್ಯಚರಣೆ. ಕೇವಲ ಮೂರು ದಿನಗಳ ಹಿಂದೆ ತಾವರಗೇರಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳತನ ವಾಗಿದ್ದ ಟ್ರಾಲಿ ಗಳನ್ನು ಸೋಮವಾರ ಇಲ್ಲಿಯ ಪೊಲೀಸರು ಪತ್ತೆ ಹಚ್ಚಿ, ಮೂರು ಜನ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧನೂರು , ಕುಷ್ಟಗಿ, ಕನಕಗಿರಿ, ಸಂಗನಾಳ, ಕಾರಟಗಿ ಮುಂತಾದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಟ್ರಾಕ್ಟರ್ ಟ್ರಾಲಿ ಕಳ್ಳತನ ವಾದ ಬಗ್ಗೆ ಆಯಾ ಭಾಗದ ಠಾಣೆ ಗಳಲ್ಲಿ ದೂರು ಸಲ್ಲಿಸಲಾಗಿತ್ತು. ದೂರನ್ನು ಆಧರಿಸಿ ಸಧ್ಯ ಮೂರು ಟ್ರಾಲಿ ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು , ಕೊಂಡು ನಾಲ್ಕು ಜನ ಆರೋಪಿತರಾದ ವಿರುಪಣ್ಣ ಹೆರೂರ ಸಾ.ಕಲ್ಮಂಗಿ, ಮೆಹಬೂಬಸಾಬ ಮೈಲಾಪೂರ, ಯಮನೂರಪ್ಪ ಕೊಳಬಾಳ ಸಾ.ಮೈಲಾಪೂರ, ಸಿದ್ಧಲಿಂಗ ಆಕಳಕುಂಪಿ ಸಾ.ಮೈಲಾಪೂರ, ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕಳಿಸಲಾಗಿದೆ. ಮುಖ್ಯ ಆರೋಪಿ ಭೋಗೀಶ ತಳವಾರ ಸಾ. ಸಂಕನಾಳ ಎಂಬ ವ್ಯಕ್ತಿ ತಪ್ಪಿಸಿ ಕೊಂಡಿದ್ದು, ಅವನ ಪತ್ತೆಗೆ ವ್ಯಾಪಕವಾಗಿ ಬಲೆ ಬೀಸಲಾಗಿದೆ. ಅವನು ಸಿಕ್ಕ ಮೇಲೆ ಮತ್ತಷ್ಟು ಟ್ರಾಲಿಗಳ ಕಳ್ಳತನದ ವಿಷಯ ಬಯಲಿಗೆ ಬರಲಿದೆ.ಎಂದು ಗಂಗಾವತಿ ಡಿ.ವಾಯ್.ಎಸ್. ಪಿ ಆರ್ ಎಸ್ ಉಜ್ಞನಿಕೊಪ್ಪ ಸುದ್ದಿಗಾರರಿಗೆ ತಿಳಿಸಿದರು. ಒಂದೊಂದು ಟ್ರಾಲಿಯನ್ನು ಒಂದುವರೆ ಲಕ್ಷ ದಿಂದ ಎರಡು ಲಕ್ಷ ರೂಗಳ ವರೆಗೆ ಮಾರಾಟ ಮಾಡಲಾಗಿತ್ತು. ಎಂದು ಹೇಳಿದರು. ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪಿಎಸ್ಐ ವೈಶಾಲಿ ಝಳಕಿ, ಎ.ಎಸ್. ಐ. ಮಲ್ಲಪ್ಪ ವಜ್ರದ, ಸಿಬ್ಬಂದಿ ಮಹಾಂತೇಶ, ಗುಂಡಪ್ಪ, ಬಸವರಾಜ, ಆನಂದ, ಹನಮಗೌಡ , ಮಂಜುನಾಥ್ , ಕರಿಯಪ್ಪ, ಗೀತಮ್ಮ ಇದ್ದರು. ತಾವರಗೇರಾ ಠಾಣೆಯಲ್ಲಿ ,ಕಳ್ಳತನ ವಾಗಿದ್ದ ಟ್ರಾಲಿಗಳ ಮುಂದೆ ಪೊಲೀಸ್ ಇಲಾಖೆ ಅಧಿಕಾರಿಗಳಾದ ಡಿವಾಯ್ಎಸ್ಪಿ ಆರ್. ಎಸ್. ಉಜ್ಜನಿಕೊಪ್ಪ , ಸಿ.ಪಿ.ಐಗಳಾ ಎಸ್. ಆರ್.ನಿಂಗಪ್ಪ, ಪಿ.ಎಸ್.ಐ ಗಳಾದ ವೈಶಾಲಿ ಝಳಕಿ, ಎಎಸ್ಐ ಮಲ್ಲಪ್ಪ ವಜ್ರದ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ – ಉಪ –ಸಂಪಾದಕೀಯ