ಬೆಳೆ ಪರಿಹಾರದ ಅರ್ಜಿಗೆ ಕಂದಾಯ ಕಟ್ಟಲೇಬೇಕೆಂದು ಸೋಮವಾರಪೇಟೆ ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ .ಇದಕ್ಕೆ ಶಿವರಾಮೇಗೌಡರ ಕರವೇ ಕಾರ್ಯಕರ್ತರ ವಿರೋಧ .ಇಂಥ ಅಧಿಕಾರಿಗಳ ಮೇಲೆ ಕೊಡಗು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಮನವಿ .
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸೋಮವಾರಪೇಟೆ ಹೋಬಳಿಗೆ ಸೇರುವ ರೈತರು ಸಂಕಷ್ಟದಲ್ಲಿರುವಾಗ ಮಳೆ ಬಂದು ಎಲ್ಲಾ ಬೆಳೆಗಳನ್ನು ಮಳೆಗೆ ಸಿಕ್ಕಿ ತೊಂದರೆಗೆ ಈಡಾದ ಬೆಳೆಗಾರರಿಗೆ ಸರಕಾರದಿಂದ ಪರಿಹಾರದ ಕೊಡಲು ನಿರ್ಧರಿಸುತ್ತಾರೆ . ಈ ಅರ್ಜಿಗಳನ್ನು ಕೊಡಲು ಬೇಕಾದ ದಾಖಲೆಗಳು ಕೊಟ್ಟರೂ ಸಹ ಕಂದಾಯ ರಸೀದಿ ಕಡ್ಡಾಯ ಬೇಕೇ ಬೇಕು ಎನ್ನುತ್ತಿದ್ದಾರೆ ಸೋಮವಾರಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳು ರೈತರು ಕಷ್ಟದಲ್ಲಿರುವಾಗ ಕಂದಾಯ ಕಡ್ಡಾಯಗೊಳಿಸಿರುವ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದಾಗ ಅಧಿಕಾರಿಗಳು ಈಗ ರೈತರು ಕಷ್ಟದಲ್ಲಿರುವಾಗ ಕಂದಾಯ ಅಧಿಕಾರಿಗಳು ಕಂದಾಯ ಕಟ್ಟಲೇ ಬೇಕೆಂಬ ಆದೇಶ ಸರಕಾರದಿಂದ ಇಲ್ಲದಿದ್ದರೂ ಸೋಮವಾರಪೇಟೆ ಅಧಿಕಾರಿಗಳು ಕಷ್ಟದಲ್ಲಿರುವ ರೈತರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಇದನ್ನು ಕೊಡಗು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸೋಮವಾರಪೇಟೆ ತಾಲ್ಲೂಕು ತಹಸೀಲ್ದಾರರು ಈ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರು ಫ್ರಾನ್ಸಿಸ್ ಡಿಸೋಜಾ .9449255831 ಮತ್ತು 9686095831
ವರದಿ – ಸೋಮನಾಥ ಹೆಚ್ ಎಮ್