ಬೆಳಗಾವಿ ಜಿಲ್ಲೆ ಅಥಣಿ ತಾಲೂಕು  ಹಿಪ್ಪರಗಿ ಬ್ಯಾರೇಜ್ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ.?

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು  ಹಿಪ್ಪರಗಿ ಬ್ಯಾರೇಜ್ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ.?

ಅಥಣಿ ಪೊಲೀಸ ಸರಹದ್ದಿನ ಹಿಪ್ಪರಗಿ ಬ್ಯಾರೇಜ್ ನಲ್ಲಿ ದಿನಾಂಕ 30/11/2021 ಸಮಯ 09.15 ಗಂಟೆಗೆ ರಕ್ಷಣಾ ಕರೆ  ಸಂಖ್ಯೆ 16/2021ಕ್ಕೆ ರಲ್ಲಿ  ಅಥಣಿ ಅಗ್ನಿಶಾಮಕ ಠಾಣೆಗೆ  ಹಿಪ್ಪರಗಿ ಬ್ಯಾರೇಜ್. ಹತ್ತಿರ  ಕ್ಲಸ್ಟ್ ಗೇಟ 12 ರಿಂದ 22 ನಂಬರಿನ ಗೇಟುಗಳು ಅಥಣಿ ಪೊಲೀಸ್ ಠಾಣೆಯ ಸರಹದ್ದಿನ ವ್ಯಾಪ್ತಿಯಲ್ಲಿ ಇರುತ್ತವೆ ಅಥಣಿ ಪೊಲೀಸ್ ಠಾಣೆಯಿಂದ ಆರಕ್ಷಕರು ನೇರವಾಗಿ ಠಾಣೆಗೆ ಬಂದು ವಿಷಯ ತಿಳಿಸಿ ತಕ್ಷಣ ರಕ್ಷಣಾ ಕರೆಗೆ  ಅಧಿಕಾರಿ ಸಿಬ್ಬಂದಿ ಯವರು ಘಟನಾ ಸ್ಥಳಕ್ಕೆ ಜಲ ವಾಹನದೊಂದಿಗೆಸ ತೆರಳಿ ಶ್ರೀಮತಿ 45 ಮಹಿಳೆಯನ್ನು ಜೀವಂತವಾಗಿ ಹಗ್ಗ ಹಾಗೂ ಕಬ್ಬಿಣದ ತೊಟ್ಟಿಲಿನಿಂದ ಮೇಲಕ್ಕೆತ್ತಿ ಸುರಕ್ಷಿತವಾಗಿ ರಕ್ಷಣೆ ಮಾಡಿ ಸಂಬಂಧಪಟ್ಟವರಿಗೆ ಪೊಲೀಸರ ಸಮ್ಮುಖದಲ್ಲಿ ಒಪ್ಪಿಸಿ ಬರಲಾಯಿತು ಈ ರಕ್ಷಣಾ ಕರೆಯಲಿ ಭಾಗಿಯಾದ ಸಿಬ್ಬಂದಿ ವಿವರಗಳು ಶ್ರೀ. ಅಗ್ನಿಶಾಮಕ ಠಾಣಾಧಿಕಾರಿ ರಾಜು ತಳವಾರ್ ಅಗ್ನಿಶಾಮಕ ಚಾಲಕ, ಶ್ರೀ ಮಲ್ಲಿಕಾರ್ಜುನ ಕುಂಬಾರ್, ಇನ್ನೋರ್ವ ಅಗ್ನಿಶಾಮಕ ಚಾಲಕ ಶ್ರೀ ಗಜಾನನ ಮದಬಾವಿ ಅಗ್ನಿಶಾಮಕರಾದ. ಶ್ರೀ ಶಿವಾನಂದ ಪೂಜಾರಿ, ಶ್ರೀ. ಸಂಜೀವ ಚೌಗಲಾ ,.     ಶ್ರೀ ರವೀಂದ್ರ .ಸಂಗಮ್. ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಅಥಣಿ(ಬೆಳಗಾವಿ): ಹಿಪ್ಪರಗಿ ಬ್ಯಾರೇಜ್ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ. ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆರಾಮದುರ್ಗ ಮೂಲದ ಮಹಿಳೆ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಅಣೆಕಟ್ಟೆ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಅಲ್ಲಿಯೇ ಇದ್ದ ಜನರು ಕೂಡಲೇ ಅಥಣಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ 100 ಅಡಿ ಆಳದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಬಳಿಕ ಮಹಿಳೆಯನ್ನು ಅಥಣಿ ಸಾರ್ವಜನಿಕ ಆಸ್ಪತ್ರೆ ದಾಖಲು ಮಾಡಿದ್ದಾರೆ.ಕೌಟುಂಬಿಕ ಕಲಹದಿಂದ ನೊಂದಿದ್ದ ಮಹಿಳೆ ಹಿಪ್ಪರಗಿ ಬ್ಯಾರೇಜ್ ಮೇಲಿನಿಂದ 100 ಅಡಿಯ ಆಳದ ನದಿಗೆ ಬಿದ್ದಿದ್ದಾರೆ. ಬಳಿಕ ಆಕೆ ಅಣೆಕಟ್ಟಿನ ಬಾಗಿಲಿನ ಗೇಟ್ ಹಿಡಿದು ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಮಹಿಳೆ ಪ್ರಾಣ ಉಳಿದಿದೆ.

ವರದಿ- ಮಹೇಶ ಶರ್ಮಾ

Leave a Reply

Your email address will not be published. Required fields are marked *