ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)  ತಾಲೂಕು ಸಮಿತಿ ಲಿಂಗಸ್ಗೂರು ಇವರಿಂದ ಸಹಾಯಕ ಆಯುಕ್ತರು, ಲಿಂಗಸ್ಗೂರು ಇವರ ಮೂಲಕ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರು ಮುಖ್ಯಮಂತ್ರಿಗಳು ಇವರಿಗೆ….

Spread the love

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ)  ತಾಲೂಕು ಸಮಿತಿ ಲಿಂಗಸ್ಗೂರು ಇವರಿಂದ ಸಹಾಯಕ ಆಯುಕ್ತರು, ಲಿಂಗಸ್ಗೂರು ಇವರ ಮೂಲಕ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರು ಮುಖ್ಯಮಂತ್ರಿಗಳು ಇವರಿಗೆ….

ಅಲ್ಪಸಂಖ್ಯಾತರ ಮೇಲೆನ ಧಾಳಿಗಳನ್ನು ಖಂಡಿಸಿ, ಸಂವಿಧಾನ ಬದ್ದ ರಕ್ಷಣೆ ನೀಡಲು ಹಾಗು ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಡಿಸೆಂಬರ್ 1, 2021 ಪ್ರತಿಭಟನೆ . ರಾಜ್ಯದಲ್ಲಿ  ಕೋಮುವಾದಿ ಶಕ್ತಿಗಳು ತಮ್ಮ ದ್ವೇಷವನ್ನು ಮುಂದುವರೆಸುವುದರ ಭಾಗವಾಗಿ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಮತ್ತು ಅವುಗಳನ್ನು ಪ್ರಚೋದಿಸುವ ಕೆಲಸವನ್ನು ಮುಂದುವರೆಸಿವೆ. ಅಂತಹ ಸುಳ್ಳುಗಳನ್ನು ನಿಜವೆಂದು ಬಿಂಬಿಸುವ ಮೂಲಕ  ಕಾನೂನುಗಳನ್ನು ಕೈಗೆತ್ತಿಕೊಂಡು ಧಾಳಿ ನಡೆಸುವ ದುಷ್ಕೃತ್ಯದಲ್ಲಿ ತೊಡಗಿವೆ. ಈ ರೀತಿ, ಇಂತಹ ಶಕ್ತಿಗಳಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಭಯವಿಲ್ಲದೇ ಇರುವುದರಿಂದ, ಕಾನೂನುಬದ್ಧವಾಗಿ ವ್ಯಾವಹರಿಸದೇ, ತಾವೇ ಶಾಸಕಾಂಗ  ಮತ್ತು ತಾವುಗಳೇ ಕಾರ್ಯಾಂಗ ಹಾಗೂ ಕೊನೆಗೆ ತಾವೇ ನ್ಯಾಯಾಂಗ ಎಂಬಂತೆ ವರ್ತಿಸಿ, ತಾವೇ ತೀರ್ಪು ನೀಡಿ ಶಿಕ್ಷಿಸುವ ಪುಂಡಾಟಿಕೆಯ ಗುಂಪುಗಳು  ಹೆಚ್ಚುತ್ತಿವೆ.  ಅನೇಕ ಸಂದರ್ಭಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ, ಈ ರೀತಿಯ ಸುಳ್ಳು ಅರೋಪಗಳನ್ನು ಸೃಷ್ಟಿಸುವ ತಂಡಗಳು ಕೋಮುವಾದಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದೇವೆ.  ಇಂತಹ ಘಟನೆಗಳಲ್ಲಿ ಕೋಮುವಾದಿ ದುಷ್ಕೃತ್ಯಗಳನ್ನು ಎಸಗುತ್ತಿರುವವರು ತಪ್ಪಿಸಿಕೊಂಡು, ಸಂತ್ರಸ್ತರು ಮತ್ತು ಅವರನ್ನು ಬೆಂಬಲಿಸುವವರನ್ನು, ಸುಳ್ಳು ಕೇಸುಗಳಲ್ಲಿ ಕರಾಳ ಕಾನೂನುಗಳ ಅಡಿಯಲ್ಲಿ ಸಿಲುಕಿಸುವ ಕೆಲಸ ನಡೆಯುತ್ತಿದೆ. ಸಂವಿಧಾನ ಬದ್ದವಾಗಿ ನಡೆದುಕೊಳ್ಳಬೇಕಾದ ಸರ್ಕಾರ, ಸ್ಥಳಿಯ ಆಡಳಿತ, ಪೊಲೀಸ್ ಇಲಾಖೆಯೂ ಸಹ ಸ್ಥಳೀಯ ಒತ್ತಡಗಳಿಗೆ ಒಳಗಾಗಿ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಗಲುಭೆ ಸೃಷ್ಟಿಸಲೆಂದು ಇರುವ ಈ ಗುಂಪುಗಳು, ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ತುಮಕೂರು , ಕೋಲಾರ, ಕೊಡಗು, ಮಂಗಳೂರು ಜಿಲ್ಲೆಗಳಲ್ಲಿ  ಇಂತಹ ಪ್ರಕರಣಗಳನ್ನು ನಡೆಸಿವೆ. ಇವು ನಡೆದ ಊರಿನ  ಶಾಂತಿ-ಸೌರ್ಹಧತೆಯನ್ನು ಕೆಡಿಸುತ್ತಿವೆ. ಕಾನೂನು ಕೈಗೆತ್ತಿಕೊಳ್ಳುತ್ತಿರುವ ಈ ಗುಂಪುಗಳನ್ನು ನಿಯಂತ್ರಿಸಬೇಕು ಹಾಗೂ ಅಲ್ಪಸಂಖ್ಯಾತರ ಮೇಲಿನ ಇಂತಹ ದ್ವೇಷಮಯ ದಾಳಿಗಳನ್ನು ಸಂವಿಧಾನದ ಮೇಲಿನ ದಾಳಿ ಎಂದು ಪರಿಗಣಿಸುವಂತೆ ಸಿಪಿಐ [ಎಂ] ಅಗ್ರಹ ಪೂರ್ವಕವಾಗಿ ಒತ್ತಾಯಿಸುತ್ತದೆ. ಮತಾಂತರದ ನೆಪ ಒಡ್ಡಿ,  ಕೈಸ್ತರ ಧಾರ್ಮಿಕ ಅರಾಧನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಹಿಂಸೆಗೆ ಒಳಗಾದ ಬಹುತೇಕ ಜನರು, ಅಧಿವಾಸಿಗಳು ಮತ್ತು ದಲಿತರಾಗಿದ್ದಾರೆ. ಗೋರಕ್ಷಣೆ, ಲವ್ ಜಿಹಾದ್ ಗಳೆಂಬ ದುಷ್ಕೃತ್ಯದ ಹೆಸರಲ್ಲಿ ಮುಸ್ಲಿಂ ಅಲ್ಪ ಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮುಂದುವರಿಯುತ್ತಿವೆ. ಮಸೀದಿಗಳನ್ನು ಹಾಳುಗೆಡವುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ, ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ. ಅಲ್ಲದೇ ಸೌಹಾರ್ಧತೆಯ ಕೇಂದ್ರಗಳಾಗಬೇಕಾದ ಇವುಗಳನ್ನು ಕೋಮು ವಿಭಜನೆ ತರುವ, ಪರಸ್ಪರ ನಂಬಿಕೆ, ವಿಶ್ವಾಸಗಳು ಇಲ್ಲದಂತೆ ಪರಿವರ್ತಿಸಿ ಭಯ ನಿರ್ಮಾಣ ಮಾಡುವ ಕೇಂದ್ರಗಳನ್ನಾಗಿಸುತ್ತಿವೆ. ಇಂತಹ ಪ್ರಯತ್ನಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ.ದೇಶದ ಅಲ್ಪಸಂಖ್ಯಾತರ ಆರ್ಥಿಕ- ಸಾಮಾಜಿಕ, ಮತ್ತು ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಭಾರತ ಸರ್ಕಾರ ನೇಮಿಸಿದ್ದ ಡಾ| ರಾಜೇಂದ್ರ ಸಾಚಾರ್ ಸಮಿತಿಯು ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸ್ಥಿತಿ ಅತೀ ಕೆಟ್ಟದಾಗಿದೆ ಎಂಬುದನ್ನು ದಾಖಲೆಗಳ ಸಮೇತ ತನ್ನ ವರದಿಯಲ್ಲಿ ತಿಳಿಸಿದೆ. ಇದರ ಸುಧಾರಣೆಗೆ ಕೆಲಸ ಮಾಡಬೇಕಾದ ಸರ್ಕಾರ, ಮುಸ್ಲಿಂ ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವುದನ್ನು ಸಿಪಿಐ [ಎಂ] ಖಂಡಿಸುತ್ತದೆ. ಮತ್ತು ಇದನ್ನು ಮುಂದುವರಿಸಲು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತದೆ. ಮಾತ್ರವಲ್ಲಾ, ತಮ್ಮ ಸರ್ಕಾರ ಅಲ್ಪಸಂಖ್ಯಾತರು, ದಲಿತರು ಮತ್ತಿತರರ ಆಹಾರದ ಹಾಗೂ ಬದುಕುವ ಹಕ್ಕುಗಳ ಮೇಲೆ ಮತ್ತು ರಾಜ್ಯದ ಎಲ್ಲಾ ಹೈನುಗಾರರು, ಹೈನೋದ್ಯಮ ಹಾಗೂ ಮಾಂಸೋದ್ಯಮದ ಮೇಲೆ ಧಾಳಿ ನಡೆಸಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ನೀಡುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020ನ್ನು ಜಾರಿಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದರಿಂದ ಉದ್ಯೋಗ ಕಳೆದುಕೊಂಡ ಮತ್ತು ಆರ್ಥಿಕ ನಷ್ಠ ಹೊಂದಿದ ಲಕ್ಷಾಂತರ ಖುರೇಷಿಗಳಿಗೆ ಯಾವುದೇ ಪರಿಹಾರಗಳನ್ನು ನೀಡಿರುವುದಿಲ್ಲ ತಕ್ಷಣವೇ ಪರಿಹಾರ ನೀಡಬೇಕು ಎಂದು ಸಿಪಿಐಎಂ ಒತ್ತಾಯಿಸುತ್ತದೆ.  ಹಕ್ಕೊತ್ತಾಯಗಳು

1] ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು . ಅವರ ಮೇಲಿನ ಕೋಮು ಹಿಂಸಾಚಾರವನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.2] ಕೋಮು ಹಿಂಸಾಚಾರವನ್ನು ಸೃಷ್ಟಿಸುವ ಪುಂಡಾಟಿಕೆಯ ಗುಂಪುಗಳ ಮೇಲೆ ಹದ್ದಿನ ಕಣ್ಣಿಟ್ಟು ಅವುಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣವಾಗಿ ಕ್ರಮ ವಹಿಸಬೇಕು. 3] ಕೋಮುದ್ವೇಷದ ಹಿಂಸಾಚಾರದಲ್ಲಿ ಹಿಂಸೆಗೊಳಗಾದ ಎಲ್ಲರಿಗೂ ಸೂಕ್ತ ಪರಿಹಾರ ಮತ್ತು ಪ್ರಾಣ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸರಕಾರಿ ಉದ್ಯೋಗ ಒದಗಿಸಬೇಕು. 4) ಡಾ| ರಾಜೇಂದ್ರ ಸಾಚಾರ್ ಸಮಿತಿಯ ಶಿಪಾರಸ್ಸಿನಂತೆ ಅಲ್ಪಸಂಖ್ಯಾತರ ಆರ್ಥಿಕ- ಸಾಮಾಜಿಕ, ಮತ್ತು ಶೈಕ್ಷಣಿಕ, ಅಭಿವೃದ್ಧಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಬೇಕು. ರಾಜ್ಯ ಸರ್ಕಾರ ನಿಲ್ಲಿಸಿರುವ ವಿದ್ಯಾರ್ಥಿವೇತನವನ್ನು ಪುನರ್ ಅರಂಭಿಸಬೇಕು.5] ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020ನ್ನು ಕೂಡಲೇ ವಾಪಾಸ್ ಪಡೆಯಬೇಕು. ಇದರಿಂದಾಗಿ ಉದ್ಯೋಗ ಕಳೆದುಕೊಂಡ ಹಾಗೂ ಆರ್ಥಿಕ ನಷ್ಠ ಹೊಂದಿದ ಖುರೇಷಿಗಳಿಗೆ ತಲಾ ಕನಿಷ್ಠ ಲಕ್ಷ ರೂ.ಗಳ ಪರಿಹಾರ ಮತ್ತು ಹೊಸ ಉದ್ಯೋಗದಲ್ಲಿ ತೊಡಗಲು ಸಹಾಯ ಧನದ ಆರ್ಥಿಕ ನೆರವನ್ನು ಪ್ರಕಟಿಸಬೇಕು.ವಂದನೆಗಳೊಂದಿಗೆ ,ರಮೇಶ ವೀರಾಪೂರು  ಕಾರ್ಯದರ್ಶಿ, CPI [M] ತಾಲೂಕು ಸಮಿತಿ ಲಿಂಗಸ್ಗೂರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *