ಶಿಕ್ಷಣ ಅರಿವು ಸಾಲ ಯೋಜನೆಯನ್ನು ಯಥಾವತ್ ಜಾರಿಯಾಗುವಂತೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಕರ್ನಾಟಕ ಮಸ್ಕಿ ಘಟಕ ಆಗ್ರಹ…!

Spread the love

ಶಿಕ್ಷಣ ಅರಿವು ಸಾಲ ಯೋಜನೆಯನ್ನು ಯಥಾವತ್ ಜಾರಿಯಾಗುವಂತೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಕರ್ನಾಟಕ ಮಸ್ಕಿ ಘಟಕ ಆಗ್ರಹ…!

ಮಸ್ಕಿ ಡಿ: 2- ಸರ್ಕಾರ ಅರಿವು ಸಾಲ ಯೋಜನೆಯನ್ನು  ಮೊದಲಿನಂತೆ ಯಥಾಸ್ಥಿಯಲ್ಲಿ ಮುಂದುವರಿಸುವಂತೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ ಕರ್ನಾಟಕ ಮಸ್ಕಿ ಘಟಕದ ಸದಸ್ಯರು ಒತ್ತಾಯಿಸಿದರು. ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಹಸಿಲ್ ಕಚೇರಿ ಮುಂಭಾಗದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ ಕರ್ನಾಟಕ ಮಸ್ಕಿ ಘಟಕದ ವತಿಯಿಂದ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕವಿತಾ. ಆರ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು. ನಂತರ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ ಕರ್ನಾಟಕ ಮಸ್ಕಿ ಘಟಕದ ಅಧ್ಯಕ್ಷೆ ನಿಶಾತ್ ಅಕ್ರೂಜ್ ಮಾತನಾಡಿ ಸರ್ಕಾರ ಅಲ್ಪ ಸಂಖ್ಯಾತರ ವಿದ್ಯರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅನೂಕೂಲವಾಲೆಂದು ಈ ಹಿಂದೆ ಅರಿವು ಯೋಜನೆಯನ್ನು ಜಾರಿಗೆ ತಂದಿತ್ತು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಸಾಲ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗು ತ್ತಿತ್ತು ಆದರೆ ಇದೀಗ ಅದರ ವಿಧಾನವನ್ನು ಬದಲಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ತೊಂದರೆಯಾಗುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗಲಿದೆ. ಆದರೆ ಈಗ ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮೊಟಕು ಗೊಳಿಸುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ | ಉನ್ನತ ಮಟ್ಟದ ವಿದ್ಯಾಭ್ಯಾಸ ಸಿಗುವುದು ಅಪರೂಪ ಆದರೆ ಇಂಥ ಸಂದರ್ಭದಲ್ಲಿ ಸರ್ಕಾರ ಅರಿವು ಸಾಲ ಯೋಜನೆಯನ್ನು ಬದಲಾವಣೆ ಮಾಡಿದ್ದರಿಂದ ಬಡ ವಿದ್ಯಾರ್ಥಿಗಳ ವ್ಯಾಸಂಗ ಸರ್ಕಾರವೇ ನಿಲ್ಲಿಸಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಅರಿವು ಸಾಲ ಯೋಜನೆಯನ್ನು ಮೊದಲಿನಂತೆ ಮರುಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಾಜರುನ್ನೀಸ್, ಸುಮಯ್ಯ, ತಂಕಿನ್, ನಿಶಾತ್ ನಾಜೀನ್, ಅಬ್ದುಲ್ ಗನಿಸಾಬ್, ಬಾಹರಲಿ ಸಾಬ್ ಸೇರಿದಂತೆ ಇನ್ನಿತರರಿದ್ದರು.

ವರದಿ : ಎಸ್ ನಜೀರ್ ಮಸ್ಕಿ

Leave a Reply

Your email address will not be published. Required fields are marked *