ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ..
ಬೆಂಗಳೂರು :ಇತ್ತೀಚಿಗೆ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ರುವ ನಕ್ಷತ್ರ ಸಭಾಂಗಣ ದಲ್ಲಿ ನಡೆಯಿತು. ಶ್ರೀ ಶ್ರೀ ಡಾ. ಮಹರ್ಷಿ ಗಗನ ಗುರುದತ್ತ ಗುರೂಜಿಯವರ ಸಾನಿಧ್ಯದಲ್ಲಿ, ಮುಖ್ಯ ಅತಿಥಿಗಳಾದ ಚೆನ್ನಪಟ್ಟಣ ಡಿ. ವೈ. ಎಸ್. ಪಿ. ರಮೇಶರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಭಾಷೆ ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅಗತ್ಯ,ಪ್ರತಿಯೊಬ್ಬ ನಾಗರೀಕರಿಗೂ ಭಾಷೆಯ ಬಗ್ಗೆ ಅಭಿಮಾನವಿರಬೇಕು, ಶಿಕ್ಷಣ ವನ್ನು ಕನ್ನಡ ಭಾಷೆಯಲ್ಲಿಯೇ ಪ್ರಾರಂಭ ಮಾಡಿದರೆ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಹಾಗೂ ಬೆಳೆಸುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕಾಗಿದೆ. ಎಂದು ಹೇಳಿದರು. ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಸಂಸ್ಥಾಪಕಾಧ್ಯಕ್ಷರಾದ ಶ್ರೀಮತಿ ಸುಜಾತ ರವರು ಮಾತನಾಡಿ ಪ್ರತಿ ಕನ್ನಡಿಗನ ಕರುನಾಡಿನ ಹೆಮ್ಮೆಯ ದಿವಸ ಕನ್ನಡ ರಾಜ್ಯೋತ್ಸವ ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ನಾವು 66ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಒಗ್ಗಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ, ಅರಿಶಿನ ಕುಂಕುಮದ ಸಂಕೇತ ಕರ್ನಾಟಕ ಹಳದಿ ಕೆಂಪು ಮಿಶ್ರೀತ ಧ್ವಜವನ್ನು ಹಾರಿಸುತ್ತ, ಕುವೆಂಪು ರವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಸೇರಿದಂತೆ ನಾಡಿನ ಹಿರಿಮೆಯನ್ನು ಬಿಂಬಿಸುವ ಗೀತೆಗಳ ಮೂಲಕ ನಾವೆಲ್ಲರೂ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ನರಸಿಂಹ ಮೂರ್ತಿ, ಅಂಬರ ಎಲಿಗೆನ್ಸ್ ಮುಖ್ಯಸ್ಥರಾದ ವಿ. ಎಂ. ಅಭಿಷೇಕ್, ವಿಜಯಲಕ್ಷ್ಮಿ ಅಗರಬತ್ತಿ ಬೆಂಗಳೂರು ಮುಖ್ಯಸ್ಥರಾದ ರಮೇಶ್, ಎಸ್. ಎಂ. ಜೋಶಿ.ಇಂಡಸ್ಟ್ರಿಯಲಿಸ್ಟ್, ಸಮಾಜ ಸೇವಕರು ಹಿರಿಯರು ನೀಲಕಂಠ ಅಡಿಗ, ಪರಿಸರ ಪ್ರೇಮಿ ಸಿಂಹಾದ್ರಿ, ಟ್ರಸ್ಟಿನ ನಿರ್ದೇಶಕರುಗಳು ಹಾಗೂ ಸ್ವಯಂ ಸೇವಕರುಗಳು ಪಾಲ್ಗೊಂಡಿದ್ದರು. ಸಾಂಸೃತಿಕ ಕಾರ್ಯಕ್ರಮ ಜರುಗಿದವು.
ವರದಿ – ಮಹೇಶ ಶರ್ಮಾ