ಬೆಂಗಳೂರಿನ ಯಲಹಂಕ ದ ಅಟ್ಟೂರು ಗ್ರಾಮದಲ್ಲಿನ ಶ್ರೀ ಕಾಳಿಕಾಂಭ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ…..
(ಧಾರ್ಮಿಕ ದತ್ತಿ ಇಲಾಖೆ )ಈ ದೇವಸ್ಥಾನವು ಸುಮಾರು 300 ವರ್ಷದ ಇತಿಹಾದವಿದ್ದು ಶ್ರೀ ವಿಜ್ಞೇಶ್ವರ ವೀರಭದ್ರೇಶ್ವರ ಸ್ವಾಮಿ ಹಾಗು ಕಾಳಿಕಾದೇವಿ ಅಮ್ಮನವರು ಧಕ್ಷಿಣಾಭಿ ಮುಖವಾಗಿ ಇರುವುದೇ ವಿಶೇಷ ಹಾಗು ದೇವಸ್ಥಾನದ ಹೊರಗೆ ಬನ್ನಿಮರ ಇರುವುದು ವಿಶೇಷ .ಈ ದೇವಸ್ಥಾನವನ್ನು ಮುಜುರಾಯಿ ಇಲಾಖೆ ವಶದಲ್ಲಿದ್ದರು ಯಾವುದೇ ಜೀರ್ಣೋದ್ದಾರದ ಕೆಲಸ ಆಗಿಲ್ಲ .ಈ ದೇವಸ್ಥಾನವನ್ನು ವೃಷಬೇಂದ್ರಾಚಾರ್ ರವರು ಮನೆದೇವರೆಂದು ಶಿಥಿಲಗೊಂಡಿದ್ದ ದೇವಸ್ಥಾನವನ್ನು ಸ್ವಚ್ಛಮಾಡಿ 50 ವರ್ಷದಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು ಅವರು ಧೈವಾದಿನದನಂತರ ಅವರ ಮಕ್ಕಳಾದ ನಾಗರಾಜಾಚಾರ್, ವೀರಾಚಾರ್ ,ಸುರೇಂದ್ರಚಾರ್ ನಡೆಸಿಕೊಂಡು ಬರುತ್ತಿದ್ದಾರೆ .ಯಾವುದೇ ಆದಾಯವು ಇಲ್ಲದೆ ಮನೆದೇವರಾದ ಶ್ರೀ ಕಾಳಿಕಾಂಭ ವೀರಭದ್ರೇಶ್ವರಸ್ವಾಮಿ ದೇವಸ್ಥಾನವನ್ನು ಪೂಜಿಸಿಕೊಂಡು ಬರುತ್ತಿದ್ದಾರೆ .ದೇವಸ್ಥಾನವು ಮಳೆಯಿಂದ ಸೋರುತ್ತಿದ್ದು ಬೇರುಗಳು ಗೋಡೆಯಲ್ಲಿ ಬಿರುಕು ಬಿಟ್ಟಿವೆ,ಗೋಪುರವು ಭಿನ್ನವಾಗಿದೆ .ಪ್ರತಿ ಮಂಗಳವಾರ ಶುಕ್ರವಾರ ಪಂಚಾಮೃತ ಅಭಿಷೇಕ ಹಾಗು ಭಜನೆ ಕಾರ್ಯಕ್ರಮ ಇರುತ್ತದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯು ದೇವಸ್ಥಾನದ ಜೀರ್ಣೋದ್ಧಾರ ದ ಕೆಲಸ ನಡೆಸಬೇಕಾಗಿ ಗ್ರಾಮಸ್ಥರಿಂದ ವಿನಂತಿ …
ವರದಿ ~ಮೌನೇಶ್ ರಾಥೋಡ್ ಬೆಂಗಳೂರು