ಹುಮನಾಬಾದ ಉಪ ಕಾರಾಗೃಹದಲ್ಲಿ ಯೋಗ ತರಬೇತಿ ಉದ್ಘಾಟನೆ.

Spread the love

ಹುಮನಾಬಾದ ಉಪ ಕಾರಾಗೃಹದಲ್ಲಿ ಯೋಗ ತರಬೇತಿ ಉದ್ಘಾಟನೆ.

ಆರೋಗ್ಯ ನಮ್ಮ ಕೈಯಲ್ಲಿದೆ – ನ್ಯಾ.ಸರಸ್ವತಿದೇವಿ. .ಹುಮನಾಬಾದ : ದಿನ ನಿತ್ಯದ ಜೀವನದಲ್ಲಿ ಆರೋಗ್ಯದ ಕಡೆ ನಮ್ಮ ಗಮನ ಇರುವುದಿಲ್ಲ. ಯಾವುದೋ ಕಾರಣಕ್ಕೆ ನೀವಿಲ್ಲಿ ಬಂದಿರುವಿರಿ ಆರೋಗ್ಯದ ಕಡೆ ಗಮನ ಹರಿಸುವುದು ತಮ್ಮ ಕೈಯಲ್ಲಿದೆ ಇದೆ. ನೀವು ಪಾಸೊಟಿವ್ ಆಗಿ ಚಿಂತಿಸಿ ನೆಗಟಿವ್ ಆಗಬೇಡಿ ಚಿಂತಿಸಬೇಡ, ಮಾನಸಿಕವಾಗಿ ಸದೃಢರಾಗಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು, ಜೆ.ಎಂ.ಎಫ್.ಸಿಯ ಗೌರವಾನಿತ್ವ ನ್ಯಾಯಾಧೀಶರಾದ ಸರಸ್ವತಿದೇವಿ ಅವರು ಕರೆ ನೀಡಿದರು ಪಟ್ಟಣದ ಉಪ ಕಾರಾಗೃಹದಲ್ಲಿ ಪರಿಪೂರ್ಣ ಚಾರಿಟೇಬಲ್ ಟ್ರಸ್ಟ(ರಿ) ಮತ್ತು ಕರ್ನಾಟಜ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಬೆಂಗಳೂರ ಸಹಯೋಗದಲ್ಲಿ ಇಪ್ಪತ್ತೊಂದು ದಿನಗಳ ಯೋಗ ತರಬೇತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಳ್ಳೆಯ ನಡತೆ,ಗುಣಾತ್ಮಕ ಚಿಂತನೆಗಳನ್ನು  ಅಳವಡಿಸಿಕೊಳ್ಳಲು ತಿಳಿಸಿದರು. ಪ್ರಧಾನ ದಿವಾಣಿ ನ್ಯಾಯದೀಶರು, ಜೆ.ಎಂ.ಎಫ್.ಸಿಯ ಗೌರವಾನ್ವಿತ ನ್ಯಾಯಾಧೀಶರಾದ ಅಪ್ಪಾಸಾಹೇಬ ಆರ್.ನಾಯಕರು ಮಾತನಾಡಿ   ಒಂದೇ ಕಡೆ ಕುಳಿತು ಕೆಲಸ ಮಾಡಲಾರದೇ ಮಾನಸಿಕಕ್ಕೆ ಒಳಗಾಗುವುದರಿಂದ, ಯೋಗ ತರಬೇತಿ ಕಲಿತು ಮಾನಸಿಕ,ದೈಹಿಕವಾಗಿ ಸಧೃಡರಾಗಬೇಕೆಂದರು ಸಾಹಿತಿ, ಪ್ರಾಧ್ಯಾಪಕಿ ಡಾ.ಜಯದೇವಿ ಗಾಯಕವಾಡ ಅವರು ಮಾತನಾಡಿ ಜೀವನ ಅಮೂಲ್ಯ, ಸಾರ್ಥಕ ಪಡಿಸಿಕೊಳ್ಳಲು ಪುಸ್ತಕ ಓದಿ ತಿಳಿದು, ಯೋಗದ ಮೂಲಕ ಗಟ್ಟಿಗರಾಗಲು ಹೇಳಿದರು. ಯೋಗ ಕುರಿತ ವಿಶೇಷ ಉಪನ್ಯಾಸವನ್ನು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ನೀಡಿ, ನಮ್ಮ ಯೋಗಪರಂಪರೆ ಇಂದಿನದಲ್ಲ.ಹಿಂದೆ ಸಿಂಧೂ ನಾಗರಿಕತೆಯಿಂದ ವೇದ,ಆಗಮ,ಬೌದ್ದ ಧರ್ಮ,ಹಿಂದೂ ಧರ್ಮ ದಲ್ಲಿ ಹಾಸುಹೊಕ್ಕಾಗಿದೆ ಯೋಗದ ಮೂಲಕ ಮಾನಸಿಕ,ದೈಹಿಕ, ಸ್ನಾಯು ಬಲ,ರಕ್ತ ಪರಿಚಲನೆ,ನಿದ್ರೆ, ಹೃದಯ ಬಡಿತ, ಏಕಾಗ್ರತೆ ಉಂಟಾಗುತ್ತದೆ.ಉಚಿತವಾದ ತರಬೇತಿ ಸದುಪಯೋಗಪಡಿಸಲು ಮನವಿ ಮಾಡಿದರು ಅಧ್ಯಕ್ಷತೆ ವಹಿಸಿದ ಕಾರಾಗೃಹದ ಅಧಿಕ್ಷಕ ಭೀಮಾಶಂಕರ ಜಮಾದಾರ ನಮ್ಮ ಇಲಾಖೆಯು ಸಹ ಖೈದಿಗಳ ಮನಸ್ಸು,ಒತ್ತಡದಿಂದ ಹೊರಬರಲು ಅನೇಕಯೋಜನೆ ಹಾಕಿವೆ ತಾವೆಲ್ಲ ಸ್ವಯಂ ಪ್ರೇರಣೆಯಿಂದ ಬಂದು ತರಬೇತಿ ಹೊಂದಬೇಕೆಂದರು.ಕು.ಲಕ್ಷೀ ತ್ಯಾಪಿ ಪ್ರಾರ್ಥಿಸಿದರು, ವಿಜಯಕುಮಾರ ಸ್ವಾಗತಿಸಿದರು,ಸಹಾಯಕ ಜೈಲರ್ ಬಸವರಾಜ ದಯಾಸಾಗರ ನಿರೂಪಿಸಿದರ ,ಸಿದ್ಧಾರ್ಥ ಮಿತ್ರಾ ವಂದಿಸಿದರು..

ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *