ವಾಘಮಾರೆ ಕ್ರೀಯಾಶೀಲ ಕಲಾವಿದ: ಡಾ.ಅರುಣಕುಮಾರ.
ಹುಮನಾಬಾದ: ಕಲೆ ಜೀವಂತವಿರಬೇಕಾದರೆ ಕಲಾವಿದ ಕ್ರಿಯಾಶೀಲರಾಗಿರಬೇಕು ಅಂದಾಗ. ಕಲೆ ಉಳಿಯುತ್ತದೆ. ಗೋಂಧಳಿ ಕಲೆಯನ್ನು ಉಳಿಸಿ ಬೆಳೆಸುವುದರ ಜೋತೆ ತಮ್ಮ ಪ್ರತಿಭೆಯನ್ನು ಸಾರ್ವಜನಿಕವಾಗಿ ದುಡಿಸಿಕೊಂಡ ಅಪರೂಪದ ಪ್ರತಿಭೆ ವಾಘಮಾರೆ ಅವರದು ಎಂದು ಇತಿಹಾಸ ಹಿರಿಯ ಪ್ರಾಧ್ಯಾಪಕ ಡಾ.ಅರುಣಕುಮಾರ ನರೋಣಕರ ನುಡಿದರು. ನಗರದ ಸಾಕ್ಷಿ ಪ್ರತಿಷ್ಠಾನ,ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು,ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು,ಕರ್ನಾಟಕ ಜಾನಪದ ಪರಿಷತ್ತು,ಮತ್ತು ಧರಿನಾಡು ಕನ್ನಡ ಸಂಘ,ಪರಿಪೂರ್ಣ ಚಾರಿಟೆಬಲ್ ಟ್ರಸ್ಟ ಹುಮನಾಬಾದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹಿರಿಯ ಜಾನಪದ ಗೋಂಧಳಿ ಕಲಾವಿದ ಶ್ರೀ ಸಿದ್ರಾಮ ದಾದಾರಾವ್ ವಾಘಮಾರೆ ಅವರ ೬೦ ನೆಯ ಷಷ್ಠ್ಯಬ್ದಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕಲೆ, ಕಲಾವಿದರನ್ನು ಬೆಳೆಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕು, ಅಂದಾಗ ಮಾತ್ರ ಕಲಾವಿದರ ಕಲೆ ನಮ್ಮ ಎದುರಿಗೆ ನಿಲ್ಲಲು ಸಾಧ್ಯ ಎಂದು ಹೇಳಿದರು. ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲರು ರಚಿಸಿದ ಅಂಬೇಡ್ಕರ್ ಬೆಳಕಿನಲ್ಲಿ ಪುಸ್ತಕವನ್ನು ಹಿರಿಯ ಜನಪದ ಗೋಂಧಳಿ ಕಲಾವಿದ ಸಿದ್ರಾಮ ವಾಘಮಾರೆ ಲೋಕಾರ್ಪಣೆ ಗೊಳಿಸಿ ನಮ್ಮ ನಡುವಿನ ಸಾಹಿತಿ ಪಾಟೀಲರ ಸಾಹಿತ್ಯ ಸೇವೆ ಅಮರವಾಗಿದೆ.ಪ್ರತಿಭಾಂತ ಕವಿ,ಕಲಾವಿದರು ಸಾಹಿತಿಗಳನ್ನು ಬೆಳಕಿಗೆ ತರುವದಲ್ಲದೇ ನಿರಂತರವಾಗಿ ಸಾಹಿತ್ಯ ರಚಿಸುತ್ತಿದ್ದಾರೆ. ಬಸವ, ಅಂಬೇಡ್ಕರ ಅವರ ಚಿಂತನೆ ನಾವಿಲ್ಲಿ ಕಾಣಬಹುದೆಂದರು ಸಾಹಿತಿ ಬಸವರಾಜ ದಯಾಸಾಗರ,ಮಹಿಳಾ ಸಾಹಿತಿ ಡಾ.ಜಯದೇವಿ ಗಾಯಕವಾಡ ಡಾ.ಗವಿಸಿದ್ಧಪ್ಪ ಪಾಟೀಲ,ಉಬಾಮಾ ಮಾತನಾಡಿದರು.ಕಾರ್ಯದರ್ಶಿ ಗುಂಡಪ್ಪ ದೊಡ್ಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಯಿನುದ್ದಿನ್ ಮೌಂಸ್,ಸಂಗೀತಾ ಬಿ.ದಯಾಸಾಗರ,ಯಂಕಮ್ಮ ವಾಘಮಾರೆ, ಶಿವಕುಮಾರ ಪರೀಟ್,ಮನೋಹರ ಗರೋಡಕರ, ಧನರಾಜ ಮೇತ್ರೆ,ವಿ.ಎನ್.ಜಾಧವ,ನಾಗೇಶ ವಾಘಮಾರೆ , ಮತ್ತಿತರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಬಸವರಾಜ ದಯಾಸಾಗರ ಮತ್ತು ಉಮೇಶಬಾಬು ಮಠದ ಅವರನ್ನು ಗೋಂಧಳಿ ಸಮಾಜ ಸಂಘಟನೆಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕು.ಲಕ್ಷೀ ತ್ಯಾಪಿ ಪ್ರಾರ್ಥಿಸಿದರು.ಜಾನಪದ ಪರಿಷತ್ತಿನ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ ಸ್ವಾಗತಿಸಿದರು, ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ ನಿರೂಪಿಸಿದರು. ವಿಜಯಕುಮಾರಿ ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ.