ಕೂಡ್ಲಿಗಿ:ವಿವಿದ ಸೌಲಭ್ಯಗಳಿಗಾಗಿ ಸಿಐಟಿಯು ಹಕ್ಕೊತ್ತಾಯ-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿಐಟಿಯು ನೇತೃತ್ವದಲ್ಲಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕೂಡ್ಲಿಗಿ ಘಟಕ.ಕಾರ್ಮಿಕರಿಗಾಗಿ ಮಂಡಳಿ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಜಾರಿತರಬೇಕು,ಹಾಗೂ ಬಾಕಿ ಇರುವ ಸಾವಿರಾರು ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು.ರಾಜ್ಯ ಕಮಿಟಿ ಸಭೆಯಲ್ಲಿ ನಿರ್ಣಯಿಸಲಾಗಿರುವ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಕಟ್ಟಡ ಕಾರ್ಮಿಕ ರಾಷ್ಟ್ರೀಯ ಮಂಡಳಿ ದೇಶವ್ಯಾಪಿ ಡಿ 2 ಮತ್ತು 3ರಂದು ಎರೆಡು ದಿನಗಳ ಪ್ರತಿಭಟನೆಗೆ ಕರೆಕೊಟ್ಟಿರುವ ಹಿನ್ನಲೆಯಲ್ಲಿ. ಕೂಡ್ಲಿಗಿ ಪಟ್ಟಣದಲ್ಲಿ ಸಿಐಟಿಯು ಹಾಗೂ ಸಿಡಬ್ಲ್ಯೂ ಎಫೈ ನೇತೃತ್ವದಲ್ಲಿ ,ಕಾರ್ಮಿಕರು ಎರೆಡು ದಿನಗಳಕಾಲ ತಮ್ಮ ಹಕ್ಕೊತ್ತಾಯಕ್ಕಾಗಿ ಪ್ರತಿಭಟನೆ ನಡೆಸಿದರು.ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ ,ಕಾರ್ಮಿಕರು ಪ್ರತಿಭಟನೆ ನಡೆಸಿ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಗೆ.ತಮ್ಮ ಹಕ್ಕೊತ್ತಾಯ ಪತ್ರವನ್ನು ಕೂಡ್ಲಿಗಿ ಕಾರ್ಮಿಕ ಇಲಾಖಾಧಿಕಾರಿ ಮೂಲಕ ನೀಡಿದ್ದಾರೆ,ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಮಿಕರು ಪ್ರತಿಭಟನೆಲ್ಲಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428