ಮುದೇನೂರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಿಗಳಿಂದ ದಲಿತರಿಗೆ ಅವಮಾನ ಮಾಡಿ, ಕ್ಷೇಮೆ ಕೇಳಿದ ಅಧಿಕಾರಿಗಳು….

Spread the love

ಮುದೇನೂರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಿಗಳಿಂದ ದಲಿತರಿಗೆ ಅವಮಾನ ಮಾಡಿ, ಕ್ಷೇಮೆ ಕೇಳಿದ ಅಧಿಕಾರಿಗಳು….

ಇಂದು ಮುದೇನೂರಿನಲ್ಲಿ ಉಮಾಚಂದ್ರಮೌಳೇಶ್ವರ ಆವರಣದಲ್ಲಿ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಜನಾಂಗದ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಹಿರಿಯ ತಾಲ್ಲೂಕ ಮಟ್ಟದ ದಂಡಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಆರಕ್ಷಕ ವೃತ್ತ ನಿರೀಕ್ಷಕರು ಮತ್ತು ಸಹಾಯಕ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಬಾರದೆ ಇರುವ ಕಾರಣ  ದಲಿತ ಮುಖಂಡ ರಾಜ್ಯ ಸಂಚಾಲಕರಾದ ಆನಂದ ಭಂಡಾರಿ ಹಾಗೂ ಸ್ಥಳೀಯ ದಲಿತ ಮುಖಂಡರು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಯಾವ ಯಾವ ಅಧಿಕಾರಿಗಳು ಬರಬೇಕಾಗಿತ್ತು ಯಾರು ಕೂಡ ಬಂದಿಲ್ಲ. ಅಂತ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಸಾಕ್ಷಿ ನಾವಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ದಲಿತ ಮುಖಂಡ ಆನಂದ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳೆ ದಲಿತರನ್ನು ಅವಮಾನಿಸಿದ್ದಾರೆ. ಎಂದು ದಲಿತ ಮುಖಂಡರಾದ ಹುಸೇನಪ್ಪ ಹಿರೇಮನಿ ಚಂದ್ರಶೇಖರ ಹಿರೇಮನಿ ಮುತ್ತಪ್ಪ ನಡುಲಮನಿ ಶಶಿಧರ್ ನಾಯಕ್ ಹಾಗೂ ಚಿದಾನಂದಪ್ಪ  ಮೂಲಿಮನಿ ಪಾಂಡಪ್ಪ ತೆಗ್ಗಿಹಾಳ ದಲಿತ ಯುವ ಮುಖಂಡ  ಪ್ರಮುಖರು ಇದ್ದರು. ಬೆಳಗ್ಗೆ ಹತ್ತರಿಂದ ಒಂದು ಗಂಟೆವರೆಗೂ ಕಾದರು ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ ಇದಕ್ಕೆ ಕೋಪಗೊಂಡ ಸಮುದಾಯದವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು ಮುದೇನೂರು ಗ್ರಾಮದಲ್ಲಿ ಇಂದು ಆಯೋಜಿಸಿದ್ದ ಅಸ್ಪೃಶ್ಯತೆ ಕಾರ್ಯಕ್ರಮ, ಅಧಿಕಾರಿಗಳ ಗೈರು ಹಾಗೂ ಮಳೆ ಕಾರಣದಿಂದ ಕಾರ್ಯಕ್ರಮವನ್ನು ದಲಿತ ಮುಖಂಡರು ರದ್ದುಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಅಸ್ಪೃಶ್ಯತೆ ಆಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಅಧಿಕಾರಿಗಳಿಂದ ದಲಿತರಿಗೆ ಅವಮಾನವಾಗುತ್ತಿದೆ. ಈ ಹಿಂದೆ ಜುಮಲಾಪೂರ ಗ್ರಾಮದಲ್ಲಿ ಕೂಡ ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮಕ್ಕೆ ಯಾವುದೇ ಅಧಿಕಾರಿಗಳು ಬರದೆ ದಲಿತರನ್ನು ಅವಮಾನಿಸಿದ್ದನ್ನು  ಎಲ್ಲ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೂ ಪದೆ ಪದೆ ಬೇಜವಾಬ್ದಾರಿತನದಿಂದ ಕಾರ್ಯಕ್ರಮ ಆಯೋಜನೆ ಮಾಡಿತ್ತಿರುವದು ಅಧಿಕಾರಿಗಳಿಂದಲೆ ಅಸ್ಪೃಶ್ಯತೆ ಆಚರಣೆ ಆಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ವರದಿ – ಚಂದ್ರುಶೇಖರ ಕುಂಬಾರ

Leave a Reply

Your email address will not be published. Required fields are marked *