ಅಮ್ ಆದ್ಮಿ ಪಾರ್ಟಿವತಿಯಿಂದ ತಾವರಗೇರಾ ಪಟ್ಟಣದಲ್ಲಿ 4 ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸಾದ್ಯತೆ……..
ಕೊಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದಲ್ಲಿ ನಡೆದ ಅಮ್ ಆದ್ಮಿ ಪಾರ್ಟಿವತಿಯಿಂದ ಜಿಲ್ಲಾದ್ಯಕ್ಷರ ನೇತೃತ್ವದಲ್ಲಿ ತಾವರಗೇರಾ ಪಟ್ಟಣ ಪಂಚಾಯತಿ ಚುನವಾಣೆಯ ಪೂರ್ವಭಾವಿ ಸಭೆಯು ಸರಳವಾಗಿ ಜರುಗಿತು. ಈ ಪೂರ್ವಭಾವಿ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ತಾವರಗೇರಾ ಪಟ್ಟಣದಲ್ಲಿ ಸುಮಾರು 18 ವಾರ್ಡಗಳಿದ್ದು, ಈ 18 ವಾರ್ಡಗಳ ಪೈಕಿ 4 ಅಭ್ಯರ್ಥಿಗಳು ತಾವರಗೇರಾ ಪಟ್ಟಣ ಪಂಚಾಯತಿಯ ಚುನಾವಾಣೆಕೆ ಅಖಾಡಕ್ಕೆ ಇಳಿಯಲು ತಿಮಾರ್ನಿಸಿದ್ದು, ಪಟ್ಟಣದಲ್ಲಿ ಪ್ರತಿ ಸಾರಿ ಕಾಂಗ್ರೆಸ್ ಮತ್ತು ಬಿಜೆಪಿಯ ಪೈಪೋಟಿಯಲ್ಲಿ ಒಬ್ಬರು ಜಯಶಾಲಿ ಸಾದಿಸುತ್ತಿದ್ದು ಸರ್ವೆ ಸಾಮಾನ್ಯವಾಗಿದ್ದು. ವೋಟರ್ಸಗಳಿಗೆ ಅದೇರಾಗ, ಅದೇಹಾಡು ಹಾಗಿದ್ದು. ಸದ್ಯ ತಾವರಗೇರಾ ಪಟ್ಟಣದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಆಮ್ ಆದ್ಮಿ ಪಾರ್ಟಿ ವತಿಯಿಂದ ಯುವಕರು ಸುಮಾರು 4 ವಾರ್ಡಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಯಲು ತಿರ್ಮಾನಿಸಿದ್ದು ವಿಶೇಷವಾಗಿದೆ. ತಾವರಗೇರಾ ಪಟ್ಟಣದಲ್ಲಿ ಈ ಜೆಸಿಬಿಗಳಿಗೆ ನಡುಕ ಸೃಷ್ಠಿಸಿದ್ದು, ಒಟ್ಟಿನಲ್ಲಿ ತಾವರಗೇರಾ ಪಟ್ಟಣದ ಅಭಿವೃದ್ಧಿಗಾಗಿ ಪಣತೊಟ್ಟ ಆಮ್ ಆದ್ಮಿ ಪರ್ಟಿಯ ಯುವಕರು. ತಾವರಗೇರಾ ಪಟ್ಟಣದ ಅಭಿವೃದ್ದಿ ಹಾಗೂ ಬ್ರಷ್ಠಾಚಾರ ಮುಕ್ತಿಗೊಳಿಸಲು ಪಣತೊಟ್ಟಿರುವುದಂತ್ತು ಸತ್ಯವಾಗಿದೆ, ಉಳಿದ ವಾರ್ಡಗಳಿಗೆ ಅಭ್ಯರ್ಥಿಗಳನ್ನು ಹುಡುಕುತ್ತಿದ್ದು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಅಭ್ಯರ್ಥಿಗಳು ದೊರೆತಲ್ಲಿ ಎಲ್ಲಾ ವರ್ಗಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾದ್ಯಕ್ಷರಾದ ಹುಸೇನಸಾಬ ಗಂಗನಾಳರವರು ತಿಳಿಸಿದ್ದರು. ಜೊತೆಗೆ ನಿಷ್ಠವಂತ ಕಾರ್ಯಕರ್ತರು ನಮ್ಮ ಪಾರ್ಟಿಗೆ ಸೇರಿಕೊಳ್ಳುವವರು ಈ ನಂಬರ ಗೆ ಮಿಸ್ಡ್ ಕಾಲ್ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು. ಆಮ್ ಆದ್ಮಿ ಪಾರ್ಟಿಯ ಮುಖಂಡರುಗಳಾದ ಆರ್ ಬಿ ಅಲಿಆದಿಲ್, ಮಂಜುನಾಥ ಎಸ್.ಕೆ. ಶ್ಯಾಮರಾಜ ದಾಸನೂರ, ಚಂದ್ರು ಮೆಣೇದಾಳ, ಶೇಖರ ನಾರಿನಾಳ, ಸೋಮನಾಥ ಸಂಗನಾಳ, ರವಿ ಆರೇರ್, ಖಾಜಾಖಾನ್, ಸಂಗಪ್ಪ ಸುಣಗಾರ, ಮೈಬೂಬು ಎಲಿಗಾರ್, ಹಾಗೂ W.P.I. ಹೋಬಳಿ ಘಟಕದ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡರವರು ಉಪಸ್ಥಿತರಿದ್ದರು..
ವರದಿ – ಉಪ-ಸಂಪಾದಕೀಯ