ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ವಿಧಾನ ಪರಿಷತ್ ರಚನೆ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರ…..

Spread the love

ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ವಿಧಾನ ಪರಿಷತ್ ರಚನೆ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರ……

ಸೂಕ್ತ ಸಲಹೆ ಪಡೆದುಕೊಂಡು ಪ್ರಜಾ ತಂತ್ರದ ತಾಯಿ ಬೇರು ಗ್ರಾಮ ಪಂಚಾಯಿತಿಯನ್ನು ತಳ ಮಟ್ಟದಿಂದ ಅಭಿವೃದ್ದಿ ಪಡಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸರ್ಕಾರದ ಸಕಲ ಸವಲತ್ತುಗಳು ತಲುಪುವಂತೆ ಮಾಡುವುದು, ಆರ್ಥಿಕ ಸಬಲರನ್ನಾಗಿಸುವುದು, ದೇಶದ ದಶ ದಿಕ್ಕುಗಳನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಿ ಯೋಜನೆಗಳನ್ನು ಸಮಗ್ರವಾಗಿ ಜಾರಿಗೊಳಿಸುವುದು, ನಮ್ಮನ್ನಾಳುವ ಸರ್ಕಾರವು ತಪ್ಪಿನ ಹೆಜ್ಜೆ ಇಟ್ಟಾಗ ಎಚ್ಚರಿಕೆಯ ಸಂದೇಶ ರವಾನಿಸುವುದು ಹಿಂದಿನ ಉದ್ದೇಶವಾಗಿದೆ. ವಿಧಾನ ಪರಿಷತ್ ಎಂದರೆ ಪ್ರಬುದ್ದರ ಸಮೂಹ ಸಂಗಮ, ಹಲವಾರು ಹೊಸ ಹೊಸ ಚಿಂತನೆಗಳ ಒರೆಹಚ್ಚಿ ಚಿಂತಕರ ಛಾವಡಿ ಎಂದು ಬಿಂಬಿತವಾಗಿದೆ. ಇಂತಹ ವಿಶಿಷ್ಟ ಸ್ಥಾನಮಾನವುಳ್ಳ ಕ್ಷೇತ್ರಕ್ಕೆ  ಮಲೆನಾಡ ಹೆಬ್ಬಾಗಿಲ ನಮ್ಮ ಶಿವಮೊಗ್ಗದಿಂದ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಡಿ.ಎಸ್.ಅರುಣ್ ಅವರು ಆಯ್ಕೆಯಾಗಿದ್ದಾರೆ ಎಂಬುದು ಅತೀವ ಸಂತೋಷದ ಸಂಗತಿ.ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರವು ಶಿವಮೊಗ್ಗ ಜಿಲ್ಲೆ ಮತ್ತು ದಾವಣಗೆರೆಯ ಆಯ್ದ ತಾಲ್ಲೂಕುಗಳು ಒಳಗೊಂಡಿದ್ದು, ಇಂದು ಚನ್ನಗಿರಿ ತಾಲ್ಲೂಕು ಮಂಡಲದ #ಹೊನ್ನೇಬಾಗಿ ಮಹಾ ಶಕ್ತಿ ಕೇಂದ್ರದ ಹೂದಿಗೆರೆ, ಅಗರ ಬನಹಟ್ಟಿ, ಅಜ್ಜಿಹಳ್ಳಿ, ಅರೋನಹಳ್ಳಿ, ಜೊಳದಾಳು, ಹೊನ್ನೆಬಾಗಿ, ಪಾಂಡುಮಟ್ಟಿ, ಗರಗ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿ ಅಭ್ಯರ್ಥಿ ಶ್ರೀ ಡಿ.ಎಸ್.ಅರುಣ್ ಅವರೊಂದಿಗೆ ಪ್ರಚಾರ ಸಭೆ ನಡೆಸಲಾಯಿತು.ಈ ಸಮಯದಲ್ಲಿ ಅಭ್ಯರ್ಥಿಯ ಕುರಿತು ಮಾತನಾಡಿ, ಅರುಣ್ ಅವರು ನಿಮ್ಮ ಅಭೂತ ಪೂರ್ವ ಬೆಂಬಲದಿಂದ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವ ಮೂಲಕ ವಿಧಾನ ಪರಿಷತ್ ಶಾಸಕರಾಗಿ ಮೇಲ್ಮನೆಗೆ ಕಳುಯಿಸಬೇಕಿದೆ ಎಂದು ಮನವಿ ಮಾಡಿದರು. ಪ್ರಮುಖವಾಗಿ ಈ ಮಾತು ಒತ್ತಿ ಹೇಳಲು ನಿರ್ದಿಷ್ಟ ಕಾರಣವಿದೆ ಜೊತೆಗೆ ವಿಶೇಷವಾಗಿ ನೀವು ಅವರ ಕುರಿತು ಹೆಮ್ಮೆ ಪಡಬೇಕು. ಏಕೆಂದರೆ ಯಾವುದೇ ವ್ಯಕ್ತಿಗೆ ಒಂದು ಜವಾಬ್ದಾರಿ ದೊರೆಯುತ್ತದೆ ಎಂದರೆ ಅದರ ಕುರಿತು ಅಧ್ಯಯನ ನಡೆಸಬೇಕು ಆಗ ಮಾತ್ರ ಯಶಸ್ಸು ದೊರಕಲು ಸಾಧ್ಯ ಈ ವಿಚಾರದಲ್ಲಿ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿರುವ ಅವರು ಬಹಳಷ್ಟು ಪೂರ್ವ ಪರ ಯೋಜನೆಗಳ ಪಟ್ಟಿ ಮಾಡಿಕೊಂಡು ಬರುವ ದಿನಗಳಲ್ಲಿ ಜಾರಿಗೊಳಿಸಲು ಸಜ್ಜಾಗಿದ್ದಾರೆ, ಇಚ್ಛಾಶಕ್ತಿ ಇದ್ದರೆ ಮಾತ್ರ ಇವೆಲ್ಲವೂ ಸಾಧ್ಯ ಎಂದು ಸದಸ್ಯರನ್ನು ಉದ್ದೇಶಿಸಿ ಮಾತ ಬೇಟೆ ನಡೆಸಲಾಯಿತು.ಅಭ್ಯರ್ಥಿ ಮಾತನಾಡಿ, ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸುವ ಮೂಲಕ ಶಾಸಕರಾಗಿ ಆಯ್ಕೆಗೊಂಡ ನಂತರದ ದಿನಗಳಲ್ಲಿ ನನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಪರಸ್ಪರರಲ್ಲಿ ಒಮ್ಮತ ಮೂಡಲು ತಾಲ್ಲೂಕು ಮಟ್ಟದ ಕ್ರೀಡಾ ಕೂಟ ಆಯೋಜನೆ ಮಾಡಬೇಕು ಎಂದು ಆಲೋಚನೆ ಮಾಡಿದ್ದೇನೆ ಎಂದರು. ನನ್ನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳನ್ನು ಡಿಜಿಟಲ್ ಇಂಡಿಯಾ ಯೋಜನೆ ವ್ಯಾಪ್ತಿಗೆ ತಂದು ಸಮರ್ಪಕವಾಗಿ ಜಾರಿಗೊಳಿಸಲು ಯೋಚಿಸಿದ್ದು, ಹಳ್ಳಿಗಳಿಂದ ನಗರಗಳಿಗೆ ತೆರಳಿ ವಿಧವಾ ವೇತನ, ಸುಕನ್ಯಾ ಸಮೃದ್ಧಿ ಯೋಜನೆ, ಜನನ ಮರಣ ಪ್ರಮಾಣ ಪತ್ರ ಇನ್ನು ಹಲವಾರು ಯೋಜನೆಗಳು ಗ್ರಾಮ ಪಂಚಾಯಿತಿಗಳಲ್ಲಿ ಜನ ಸಾಮಾನ್ಯರಿಗೆ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಚನ್ನಗಿರಿ ಶಾಸಕರಾದ ಶ್ರೀ ವಿರೂಪಾಕ್ಷಪ್ಪ ಅವರು, ಅಭ್ಯರ್ಥಿ ಶ್ರೀ ಅರುಣ್. ಡಿ.ಎಸ್ ಅವರು ವಿಧಾನ ಪರಿಷತ್ ಶಾಸಕರುಗಳಾದ ಶ್ರೀ ಆಯನೂರು ಮಂಜುನಾಥ್ ಅವರು ಹಾಗೂ ಶ್ರೀ ರುದ್ರೇಗೌಡ ಅವರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಕವಿತಾ ಕಲ್ಲೇಶ್ ಅವರು ಹಾಗೂ ತಾಲ್ಲೂಕಿನ ಹಲವಾರು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *