ತಾವರಗೇರಾ ಪಟ್ಟಣದಲ್ಲಿ ಆಮ್ ಆದ್ಮಿ ಪಾರ್ಟಿವತಿಯಿಂದ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು,
ತಾವರಗೇರಾ ಪಟ್ಟಣದ ತಾವರಗೇರಾ ನ್ಯೂಸ್ ಪತ್ರಿಕೆ ಕಾರ್ಯಲಯದ ಹತ್ತಿರ ಇಂದು ನಡೆದ ಆಮ್ ಆದ್ಮಿ ಪಾರ್ಟಿವತಿಯಿಂದ ತಾವರಗೇರಾ ಪಟ್ಟಣದ ಚುನಾವಣಾ ನಿಮಿತ್ಯವಾಗಿ ಪೂರ್ವಭಾವಿ ಸಭೆಯು ಯಶಸ್ವಿಯಾಗಿ ಈ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ರಾಜ್ಯ ಸಂಘಟನಾ ಮುಖ್ಯಸ್ಥರಾದ ವಿಜಯ್ ಶರ್ಮ ಅವರು ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್, ಬೆಂಗಳೂರು ನಗರ ಘಟಕದ ಪ್ರಮುಖ ಶ್ರೀಧರ್, ಹಾಗೂ ಜಿಲ್ಲಾ ಅಧ್ಯಕ್ಷರಾದ ಹುಸೇನಸಾಬ ಗಂಗನಾಳ ಜೊತೆಗೆ ತಾವರಗೇರಾ ಪಟ್ಟಣದ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳು ಸೇರಿದ್ದು. ಈ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಸುಮಾರು 3 ಜನರು ಕಣಕ್ಕಿಳಿಯುತ್ತಿದ್ದು. ಈ ಪೂರ್ವಭಾವಿ ಸಭೆಯ ಕುರಿತು ರಾಜ್ಯ ುಪಾಧ್ಯಕ್ಷರಾದ ವಿಜಯ ಶರ್ಮರವರು ವಿಶೇಷವಾಗಿ ಆಮ್ ಆದ್ಮಿ ಪಕ್ಷದ ಕುರಿತು. 1) ಮುಂದಿನ ದಿನಮಾನಗಳಲ್ಲಿ ಪಕ್ಷದವತಿಯಿಂದ ತಾವರಗೇರಾ ಪಟ್ಟಣದಲ್ಲಿ ರ್ಯಾಲಿ ಹಮ್ಮಿಕೊಳ್ಳುಬೇಕು.. 2) ಈ ಕೂಡಲೆ ಪಕ್ಷದವತಿಯಿಂದ ಪ್ರೇಸ್ ಮೀಟ್ ಮಾಡಬೇಕು. 3) ಪ್ರತಿ ವಾರ್ಡನಲ್ಲಿ ಅಭ್ಯರ್ಥಿಗಳನ್ನು ಹುಡುಕುವುದು 4) ಜೊತೆಗೆ ಪಟ್ಟಣ ಮೂರು ವಾರ್ಡಗಳಲ್ಲಿ ಸ್ಪರ್ಧೆಗೆ ಭಾಗಿಯಾಗುವವರು ಸ್ವಾತಂತ್ರ್ಯವಾಗಿ ನಿಲ್ಲಬೇಕು, ಹಾಗೂ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುವಂತ ವ್ಯಕ್ತಿಗಳಾಗಬೇಕು, 5) ಪಕ್ಷ ಸಂಘಟನೆಗೆ ಯುವಕರು ಒಂದಾಗಬೇಕು, ಬ್ರಷ್ಟಾಚಾರ ಮುಕ್ತ ರಾಜಕೀಯ ಮಾಡಬೇಕು ಎಂದರು, ಜೊತೆಗೆ ತಾವರಗೇರಾ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಆಮ್ ಆದ್ಮಿ ಪಕ್ಷದವತಿಯಿಂದ ಸಾರ್ವಜನಿಕರನ್ನು ಉದ್ದೇಶಿಸಿ ಈ ಪಕ್ಷದ ಕುರಿತು ತಿಳಿ ಹೇಳಿದರು. ಈ ಕಾರ್ಯಕ್ರಮದಲ್ಲಿ ತಾವರಗೇರಾ ಪಟ್ಟಣದ ಆಮ್ ಆದ್ಮಿ ಪಕ್ಷದ ಮುಖಂಡರಾದ ಮಂಜುನಾಥ ಎಸ್.ಕೆ. ಆರ್.ಬಿ.ಅಲಿಆದಿಲ್, ಶ್ಯಾಮರಾಜ ದಾಸನೂರು, ಚಂದ್ರು ಮೇಣೆದಾಳ, ರವಿ ಕುಮಾರ ನಾಲತವಾಡ್, ರವಿ ಆರೇರ್, ಖಾಜಾನಾಯಕ, ಸೋಮನಾಥ ಸಂಗನಾಳ, ಮೈಬೂಬ ಎಲಿಗಾರ್, ಜೊತೆಗೆ W.P.I. ಪಕ್ಷದ ಹೋಬಳಿ ಅದ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ – ಉಪ-ಸಂಪಾದಕೀಯ