ಹುಮನಾಬಾದ: ಸಂವಿಧಾನ ಶಿಲ್ಪಿ, ಡಾ.ಅಂಬೇಡ್ಕರ್ ಮಹಾಪರಿ ನಿರ್ವಾಣ ಆಚರಣೆ.
ಬೋಧಸತ್ವ,ಮಹಾಮಾನವತಾವಾದಿ,ಆರ್ಥಿಕವಾಗಿ,ಸಾಮಾಜಿಕವಾಗಿ,ಸರ್ವರಿಗೂ ಸಮಪಾಲು,ಸಮಬಾಳು ಸಾಮಾಜಿಕನ್ಯಾಯ ಎತ್ತಿ ಹಿಡಿಯುವ ಕಾರ್ಯಮಾಡಿದ ಬಾಬಾಸಾಹೇಬ ಅಂಬೇಡ್ಕರ್ ಕೇವಲ ಒಂದೇ ಜಾತಿಗೆ ಸೀಮಿತರಾಗದೇ ಮನುಕುಲದ ಉದ್ದಾರಕರೆಂದು ಸಾಹಿತಿ ಸಹಾಯಕ ಜೈಲರ ಡಾ.ಬಸವರಾಜ ದಯಾಸಾಗರ ನುಡಿದರು. ಪಟ್ಟಣದ ಧರಿನಾಡು ಕನ್ನಡ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ ಕರುನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಉಮೇಶ ಬಾಬು ಮಠದ ಅಂಬೇಡ್ಕರ್ ಅವರ ವಿಚಾರಧಾರೆ ಅನುಸರಿಕೊಂಡರೆ ಜಗತ್ತು ಸುಧಾರಣೆಯೆಂದರು.ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ನಮ್ಮದೇಶ ಅಂಬೇಡ್ಕರ್ ರನ್ನು ಅರಿಯದಿದ್ದರು ವಿಶ್ವ ಒಪ್ಪಿಕೊಂಡಿದೆ ಜಾಗತಿಕ ಮಟ್ಟದ ವಿಚಾರಧಾರೆ ಹೊಂದಿದ ಚಿಂತಕರೆಂದರು ಧರಿನಾಡು ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು ಲಕ್ಷ್ಮೀ ಬುದ್ದವಂದನೆ ನೆರವೇರಿಸಿದರು .ವಿಜಯಕುಮಾರ ನಿರೂಪಿಸಿದರು. ಚೈತೃ ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ