ಡಾ. ಹೊಸಮನಿ ಅವರಿಗೆ ಅಮೃತ ಪುತ್ರ ಪ್ರಶಸ್ತಿ ಪ್ರದಾನ…….
ಕವಿದ್ವನಿ ಟ್ರಸ್ಟ್ ಹಾಗೂ ಮಹಾಂತ ಜ್ಯೋತಿ ಟ್ರಸ್ಟ್ನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಡಾ. ಸತೀಶ್ ಕುಮಾರ್ ಹೊಸಮನಿ ನಿರ್ದೇಶಕರು ಸಾರ್ವಜನಿಕ ಇಲಾಖೆ ಬೆಂಗಳೂರು ಇವರಿಗೆ ಅಮೃತ ಪುತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಂಥಾಲಯ ಇಲಾಖೆಯಲ್ಲಿ ಸಮಗ್ರ ಸುಧಾರಣೆ ಹಾಗೂ ಬದಲಾವಣೆ ತಂದು ರಾಷ್ಟ್ರ ಮಟ್ಟದಲ್ಲಿ ಆದರ್ಶ ಬದಲಾವಣೆ ತಂದಿರುವರು. 2ಕೋಟಿ ಇ-ಗ್ರಂಥಾಲಯ ಸದಸ್ಯರು ಆಗಿರುವರು ಅಷ್ಟೇ ಅಲ್ಲದೇ 60ಕೋಟಿ ಜನರು ವೀಕ್ಷಿಸಿದ್ದು ಇಲಾಖೆ ವತಿಯಿಂದ ಡಿಜಿಟಲ್ ಗ್ರಂಥಾಲಯ ಮಾಡಿದ ಸಾಧನೆ ಕಂಡು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಲ ಪ್ರತಿಭೆ .ಕು ಪ್ರಣವ್ ನಾಗರಾಜ್ ಅವರ ಸಂಗೀತ ನೃತ್ಯ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಕಂಡು ಬೆಳೆಯುವ ಪೈರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಮೃತ ಪುತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲ್ಬುರ್ಗಿ ಜಿಲ್ಲೆಯ ಕಸಾಪ ನೂತನ ಅಧ್ಯಕ್ಷರಾಗಿ ಆಯ್ಕೆ ವಿಜಯ್ ಕುಮಾರ್ ತೆಗಳತಿಪ್ಪಿ ಅವರನ್ನು ವಿಶೇಷ ಸನ್ಮಾನಿಸಲಾಯಿತು. ಹಾಗೆ ಗೌರವ ಕಾರ್ಯದರ್ಶಿ ಶ್ರೀ ಸುರೇಶ್ ಬಡಿಗೇರ ಶಿವರಾಜ್ ಅಂಡಗಿ ಹಾಗೂ ಕೋಶಾಧ್ಯಕ್ಷ ರಾದ ಛಪ್ಪರ ಬಂದಿ ಅವ್ರಿಗೂ ಗೌರವ ವಂದನೆ ಸಲ್ಲಿಸಲಾಯಿತು. ಈ ಸಮಾರಂಭದಲ್ಲಿ ಸದ್ಗುರು ಬಸವ ಪ್ರಭು ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಖ್ಯಾತ ಸಾಹಿತಿ ಸಿದ್ಧರಾಮ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ ಗಂಗಾ ಪೂಜಾರ್ ಹಾಗೂ ಬೀದರ ಜಿಲ್ಲಾ ಸಾಹಿತಿ ರಮೇಶ್ ಬಿರಾದಾರ್ ಆಗಮಿಸಿದ್ದರು. ಅಮೃತ ಸ್ವಾತಂತ್ರ್ಯ ಕವಿಗೋಷ್ಠಿ ಡಾ. ಸದಾನಂದ ಪೇರ್ಲ್ ಉದ್ಘಾಟಿಸಿ ಮಾತನಾಡಿದರು.ಸುಮಾರು30ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕವಿದ್ವನಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಕವಿತಾ ಮಳಗಿ. ಶ್ರೀಮತಿ ವಿಜಯಲಕ್ಷ್ಮಿ ಜವಳಗಿ ಹಾಗೂ ಮಹಾಂತ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಪ್ರೋ. ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು. ನಾಗಲಿಂಗಯ್ಯಾ ಮಠಪತಿ ನಿರೂಪಿಸಿದರು. ವಿನೋದ್ ಕುಮಾರ್ ಹಂಗರಾಗಿ ಸ್ವಾಗತಿಸಿದರು. ಶ್ರೀಮತಿ ರಾಜೇಶ್ವರಿ ಜವಳಗಿ ವಂದಿಸಿದರು.
ವರದಿ – ಮಹೇಶ ಶರ್ಮಾ