ತಾವರಗೇರಾ ಪಟ್ಟಣದ ಎಎಪಿ ವತಿಯಿಂದ ನಾಡಿನ ಸಮಸ್ತ ಜನತೆಗೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಶಯಗಳು…..

Spread the love

ತಾವರಗೇರಾ ಪಟ್ಟಣದ ಎಎಪಿ ವತಿಯಿಂದ ನಾಡಿನ ಸಮಸ್ತ ಜನತೆಗೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಶಯಗಳು…..

ವಿಶ್ವಸಂಸ್ಥೆಯು 1948ರ ಈ ದಿನದಂದು ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟಣೆಯನ್ನು ಹೊರಡಿಸಿ ಈ ಪ್ರಕಟಣೆಯ ಪ್ರಸ್ತಾವನೆಯಲ್ಲಿ ಮಾನವ ಹಕ್ಕುಗಳ ಮಹತ್ವದ ಬಗ್ಗೆ ಪ್ರಸ್ತಾಪಿಸುತ್ತದೆ. ವಿಶ್ವಸಂಸ್ಥೆಯು ಎಪ್ಪತ್ತು ವರ್ಷಗಳ ಹಿಂದೆ ಘೋಷಿಸಲ್ಪಟ್ಟ ಘೋಷಣೆಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದು ಗಮನಾರ್ಹ ವಿಷಯ. ವಿಶ್ವಸಂಸ್ಥೆಯ ಘೋಷಣೆಗಳು  ವರ್ಣ, ಧರ್ಮ, ಲಿಂಗ, ಭಾಷೆ,  ಅಂತಸ್ತು, ಸಾಮಾಜಿಕ ಹಿನ್ನೆಲೆ ಮತ್ತು ರಾಷ್ಟ್ರೀಯತೆ ಹೀಗೆ ವಿವಿಧ ಹಿನ್ನೆಲೆಗಳ ಆಧಾರದ ಮೇಲೆ ಪ್ರಪಂಚದಾದ್ಯಂತ ನಡೆಯುವ ತಾರತಮ್ಯವನ್ನು ಕೊನೆಗಾಣಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಜನರ ಹಕ್ಕುಗಳನ್ನು ನಿರಾಕರಿಸಿದರೆ ಮನುಷ್ಯತ್ವವನ್ನು ನಿರಾಕರಿಸಿದಂತೆ ಎಂದು ನೆಲ್ಸನ್ ಮಂಡೇಲರ ಹೇಳುತ್ತಾರೆ. ಆಫ್ರಿಕಾದಲ್ಲಿ ಕಪ್ಪು ಜನರ ಹಕ್ಕುಗಳಿಗಾಗಿ ನೆಲ್ಸನ್ ಮಂಡೇಲರು ಮತ್ತು ಭಾರತದಲ್ಲಿ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹಾಗೂ ಜಗತ್ತಿನಾದ್ಯಂತ ವಿವಿಧ ಭಾಗಗಳಲ್ಲಿ ಹಲವಾರು ಮಹನೀಯರು ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಇಂತಹ ಮಾನವ ಹಕ್ಕುಗಳ ಬಗ್ಗೆ ವಿಶ್ವ ಮಾನವ ಹಕ್ಕುಗಳ ದಿನದಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾವರಗೇರಾ ಪಟ್ಟಣದ ಎಎಪಿ ಕಾರ್ಯಕರ್ತರು ತಿಳಿಸಿದರು ಜೊತೆಗೆ ನಾಡಿನ ಸಮಸ್ತ ಜನತೆಗೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಶುಭಾಶಯಗಳು..

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *