ಕುಷ್ಟಗಿ ತಾಲುಕಿನ ಗುಮಗೇರಾ ಗ್ರಾಮದಲ್ಲಿ ಕರ್ನಾಟಕ ಪತ್ರಕರ್ತ ಸಂಘದವತಿಯಿಂದ ನಡೆದ ರಾಜ್ಯ ಸರ್ವ ಸಾಧಾರಣ ಸಭೆಯು ಅದ್ದೂರಿಯಾಗಿ ಜರುಗಿತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಭವನ, ವರದ ಉಮಾಶಂಕರ ಓಂಕಾರೇಶ್ವರ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ಡಿ.೧೧ನೇ ಶನಿವಾರದಂದು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ ಶಿವಪೂಜಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಘಟಕ ವಾರ್ಷಿಕ ಸರ್ವ ಸಾಧಾರಣ ಸಭೆಯು ಅದ್ದೂರಿಯಾಗಿ ಜರುಗಿತು.. ಈ ಸಭೆಯ ಉದ್ಘಾಟಕರಾಗಿ ಕುಷ್ಟಗಿ ಜನಪ್ರೀಯ ಶಾಸಕರಾದ ಅಮರೇಗೌಡ ಬಯ್ಯಾಪುರರವರು ಉದ್ಘಾಟಿಸಿ ಪತ್ರಕರ್ತರಿಗೆ ವಿಶೇಷವಾಗಿ ಸೌಲಭ್ಯಗಳು ದೊರೆಕಿಸುವವಲ್ಲಿ ಶ್ರಮಿಸುತ್ತೆವೆ ಜೊತೆಗೆ, ತಾಲೂಕಿನಾದ್ಯಾಂತ ಇರುವ ಪತ್ರಕರ್ತರಿಗೆ ವಸತಿ ಮತ್ತು ನಿವೇಶನ ಕಲ್ಪಿಸುವ ಪ್ರಯತ್ನ ಮಾಡುತ್ತೆವೆ ಎಂದು ಭರವೇಸೆ ನೀಡಿದರು, ಕುಷ್ಟಗಿ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಅವರಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು., ಈ ಸಭೆಯ ದಿವ್ಯ ಸಾನಿಧ್ಯವನ್ನು ಕುಷ್ಟಗಿ ಮದ್ದಾನಿ ಹಿರೇಮಠದ ಶ್ರೀಕರಿಬಸವ ಶಿವಾಚಾರ್ಯ ಸ್ವಾಮಿಜಿಗಳು, ಸುಕ್ಷೇತ್ರ ಅಂಕಲಿಮಠದ ಶ್ರೀವೀರಭದ್ರ ಮಹಾಸ್ವಾಮೀಜಿಗಳು ವಹಿಸಿಕೊಂಡು ಸಾರ್ವಜನಾಂಗಕ್ಕೆ ಒಳಿತಾಗಲೆಂದರು. ಇನ್ನೂ ವಿಶೇಷ ಆಹ್ವಾನಿತರಾಗಿ ಕುಷ್ಟಗಿ ತಹಸೀಲ್ದಾರ ಸಿದ್ದೇಶ ಎಂ ರವರು ಆಗಮಿಸಿ ಪತ್ರಕರ್ತರಿಗೆ ವಸತಿ ಮತ್ತು ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಗಳು ಸಾಗುತ್ತಿದ್ದಾವೆ. ಜೊತೆಗೆ ತಾಲೂಕಿನಲ್ಲಿ ಹೊಸತಾಗಿ 36 ನ್ಯಾಯಬೆಲೆ ಅಂಗಡಿಗಳಿಗೆ ಅರ್ಜಿಗಳು ಕರೆಯಲಾಗಿದೆ, ನಿಮ್ಮ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ಅರ್ಜಿ ಹಾಕಲು ಸಹ ಸೂಚಿಸಿದರು. ಮುಖ್ಯಅಥಿತಿಗಳಾಗಿ ಕರ್ನಾಟಕ ಸಹಕಾರ ಮಹಾ ಮಂಡಳಿ ಬೆಂಗಳೂರ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ನೂತನ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೆಗೌಡ ಪಿ ಪಾಟೀಲ್, ಕುರಿ ಮತ್ತು ಉಣ್ಣೆ ನಿಗಮ ಬೆಂಗಳೂರ ಅಧ್ಯಕ್ಷ ಶರಣು ತಳ್ಳಿಕೇರಿ, ಕುಷ್ಟಗಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುದೇಶಕುಮಾರ, ಗೌರಿಶ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತಕುಮಾರ ಮುಚಳಂಬಿ, ಮಲ್ಲಿಕಾರ್ಜುನ ಹೊಸಕೇರಾ, ಮಾಲತೇಶ ಅಂಗೂರ, ಮಂಜುನಾಥ ನಾಯಕ, ಮಲ್ಲಿಕಾರ್ಜುನ ಹೊಸ್ಮನಿ, ಮಾಜಿ ಜಿಪಂ ಸದಸ್ಯ ಕೆ ಮಹೇಶ, ಗುಮಗೇರಾ ದಳಪತಿ ಶರಣಗೌಡ ಮಾಲಿಪಾಟೀಲ್, ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಉಮೇಶ ಹಿರೇಮಠ, ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರು ಹಾಗೂ ಕುಷ್ಟಗಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಗುಮಗೇರಾ, ಕೋಶಾಧಿಕಾರಿ W.H ಯಕ್ಕರನಾಳ, ಜಿಲ್ಲಾ ಉಪಾಧ್ಯಕ್ಷರು ಹಾಗೂ ಯಲಬುರ್ಗಾ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಖಾಜಾವಲಿ ಜರಕುಂಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ ಡಂಬಳ, ಕರ್ನಾಟಕ ಪತ್ರಕರ್ತರ ಸಂಘದ ಕುಷ್ಟಗಿ ಪ್ರಧಾನ ಕಾರ್ಯದರ್ಶಿ ಆದಪ್ಪ ಮಾಲಿಪಾಟಿಲ್, ಪಾಲ್ಗೊಳ್ಳಲಿದ್ದು. ಬಳಿಕ ಕರ್ನಾಟಕ ಪತ್ರಕರ್ತರ ಸಂಘದಿಂದ ಸಹಕಾರ ಮಹಾ ಮಂಡಳ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪಿ ಪಾಟೀಲ್, ಮತ್ತು ಕೊಪ್ಪಳ ಜಿಲ್ಲಾ ದಿನ ಪತ್ರಿಕೆ ಸಂಪಾದಕರಾದ ಗಿರೀಶ ಕುಲಕರ್ಣಿ, ವಿ.ಎಸ್ ಪಾಟೀಲ್, ವಿರೇಂದ್ರ ಇರಕಲ್, ಎಚ್.ಎಸ್ ಹರೀಶ, ಅಬ್ದುಲ್ ಕಲೀಲ್ ಉಡೇದ, ಎಸ್ ಎಮ್ ಪಟೇಲ್, ವೆಂಕಟೇಶ ಕೆ, ದೇವು ನಾಗನೂರ, ವೈಬಿ ಜೂಡಿ, ಬಸವರಾಜ ಗುಡ್ಲಾನೂರ ಸೇರಿದಂತೆ ಇತರರಿಗೆ ಸನ್ಮಾನ ಜರುಗಿತು. ಗುಮಗೇರಾ ಗ್ರಾಪಂ ಅಧ್ಯಕ್ಷರಾದ ಲಕ್ಷಮವ್ವ ಹೊಳೆಯಪ್ಪ ತಳವಾರ, ಉಪಾಧ್ಯಕ್ಷರಾದ ಪರಸಪ್ಪ ಎಚ್ ಗಂಗನಾಳ, ಸರ್ವ ಗ್ರಾಪಂ ಸದಸ್ಯರು, ಪಿಡಿಒ ಮತ್ತು ಕರವೇ ರಾಜ್ಯ ಉಪಾಧ್ಯಕ್ಷ ಅಜ್ಜಪ್ಪ ಕರಡಕಲ್, ಕುಷ್ಟಗಿ ಹೈ-ಕ ಯುವ ಶಕ್ತಿ ವೇದಿಕೆ ಅಧ್ಯಕ್ಷ ಬಸವರಾಜ ಗಾಣಗೇರ, ಶಂಕರ ಟಿ ಕಲ್ಲಭಾವಿ ಸೇರಿದಂತೆ ಇತರರು ಉಪಸ್ಥಿತಿಯಲ್ಲಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಜೀವವ ಪಣಕ್ಕಿಟ್ಟು ಶ್ರಮಿಸಿದ ಕೊರೊನಾ ವಾರಿಯರ್ಸಗಳಿಗೆ ಕ.ಪ.ಸಂಘದವತಿಯಿಂದ ಸನ್ಮಾನಿಸಿದರು. ಜೊತೆಗೆ ಹಲವಾರು ದಿನ ಪತ್ರಿಕೆ ಸಂಪಾದಕರು ಹಾಗೂ ಸಾಧಕರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ವರದಿ – ಸಂಪಾದಕೀಯ