ಸದನದಲ್ಲೇ ಹೆಣ್ಣು ಮಕ್ಕಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದು ಎಷ್ಟು ಸರಿ?: ಖಿದ್ಮಾ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್…

Spread the love

ಸದನದಲ್ಲೇ ಹೆಣ್ಣು ಮಕ್ಕಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದು ಎಷ್ಟು ಸರಿ?: ಖಿದ್ಮಾ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್…

ಹೆಣ್ಣನ್ನು ಭೂತಾಯಿ, ದೇವತೆ ಎಂದು ಪೂಜಿಸುವ ಈ ನಾಡಿನಲ್ಲಿ  ಅಧಿಕಾರಿಯೊಬ್ಬರು ಸದನದಲ್ಲಿ ರೇಪ್ ತಡೆಯಲು ಆಗದಿದ್ದರೆ ಮಲಗಿ ಎಂಜಾಯ್ ಮಾಡಬೇಕು ಎಂಬ ಹೇಳಿಕೆ ನೀಡಿ ಹೆಣ್ಣಿನ ರಕ್ಷಣೆ ವಿಷಯ ಬಂದಾಗ ಇಂತಹದ್ದೊಂದು ಮಾತು ಅವರಿಂದ ಬಂದಿರುವುದು ವಿಷಾಧನೀಯ. ಇಂತಹ ಅಧಿಕಾರಿಗಳ ನಿರ್ಲಕ್ಷದಿಂದಲೇ ಸಮಾಜದಲ್ಲಿ ಹೆಣ್ಣಿನ ಶೋಷಣೆ ಹೆಚ್ಚಾಗುತ್ತಿದೆ. ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಚಾರಗಳನ್ನು ತಡೆಯಲು ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಳ್ಳುವುದರೊಂದಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಅಂತಹವರಿಗೆ ಜೊತೆ ನೀಡಿ  ಪ್ರೋತ್ಸಾಹಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ವಿರೋಧಿಸದೆ ಕಣ್ಮುಚ್ಚಿ ಮಲಗುವ ಇಂತಹ ಜನರು ತಮ್ಮ ಕುಟುಂಬದ ವಿಷಯ ಬಂದಾಗ ಇದೇ ಧೋರಣೆ ತೋರುವರೇ??!! ಸರ್ಕಾರವನ್ನೇ ನಂಬಿ ಕೊಂಡಿರುವ ಸಮಾಜಕ್ಕೆ ಇಂತಹ ಅಸಡ್ಡೆ ಅಧಿಕಾರಿಗಳ ಅಗತ್ಯವಾದರೂ ನಮಗಿದೆಯೇ..!? ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಇವರು ಪ್ರಶ್ನಿಸಿದ್ದಾರೆ.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *