ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಕುರಿತು ಸೂಕ್ತ ಕಾನೂನು ಕ್ರಮ ಜರಗಿಸಲು ಒತ್ತಾಯ.
ಕೋಲಾರದ ಶ್ರೀನಿವಾಸಪುರದಲ್ಲಿ ಕ್ರೈಸ್ತರ ಧಾರ್ಮಿಕ ಪುಸ್ತಕಗಳಿಗೆ ಬೆಂಕಿ ಹಚ್ಚಿರುವ ಘಟನೆಯನ್ನು ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ ಬಲವಾಗಿ ಖಂಡಿಸುತ್ತದೆ. ಕಳೆದ ೧೨ ತಿಂಗಳಲ್ಲಿ ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸತತ ೩೮ ದಾಳಿಗಳಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ತಾನು ನಂಬಿರುವ ಧರ್ಮವನ್ನು ಪ್ರಚಾರ, ಪ್ರಸಾರ, ಬೋಧನೆ ಮಾಡುವುದರ ಜತೆಗೆ ಅವುಗಳನ್ನು ಅನುಸರಿಸುವ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕನ್ನು ನಮ್ಮ ದೇಶದ ಸಂವಿಧಾನವೇ ನೀಡಿದೆ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯ ಅಗತ್ಯವು ಈ ರಾಜ್ಯಕ್ಕೆ ಖಂಡಿತವಾಗಿಯೂ ಇಲ್ಲ. ಬಲವಂತದ ಧಾರ್ಮಿಕ ಮತಾಂತರವಾಗಿದೆ ಎಂಬುವುದಕ್ಕೆ ಸರಕಾರದ ಬಳಿ ಯಾವ ಅಧಿಕೃತ ದಾಖಲೆಗಳಿವೆ ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕು. ಪ್ರಸ್ತುತ ಮಸೂದೆಯು ರಾಜ್ಯದ ವಿವಿಧ ಧಾರ್ಮಿಕ ಮತ್ತು ಸಂಸ್ಕೃತಿಗಳ ಮಧ್ಯೆ ಇರುವ ಸಾಮರಸ್ಯವನ್ನು ಬುಡಮೇಲುಗೊಳಿಸುವುದಲ್ಲದೆ ಈ ರಾಜ್ಯದ ಸೌಹಾರ್ದ ಪರಂಪರೆಗೂ ಅಪಾಯಕಾರಿ. ಈ ಮಸೂದೆಯು ಕೋಮುವಾದಿ ಗೂಂಡಾಗಳಿಗೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಸರಕಾರವೇ ಮುಕ್ತ ಪರವಾನಗಿ ನೀಡಿದಂತಾಗುತ್ತದೆ. ಅಭಿವೃಧಿಯನ್ನು ಬಿಟ್ಟು ಕೇವಲ ದ್ವೇಷದ ರಾಜಕಾರಣ ಮಾಡುತ್ತಿರುವ ಯು.ಪಿ ಮಾಡೆಲ್ ನಮಗೆ ಬೇಡ. ಆದ್ದರಿಂದ ಸಂವಿಧಾನ ವಿರೋಧಿಯಾದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಸರಕಾರವು ಕೈಬಿಡಬೇಕು. ಆದುದರಿಂದ ಈ ನಿಟ್ಟಿನಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾಲಿಡಾರಿಟಿ ಕರ್ನಾಟಕ ಬಲವಾಗಿ ವಿನಂತಿಸುತ್ತದೆ. ಬೇಡಿಕೆಗಳು:ಸರ್ಕಾರವು ಸಂವಿಧಾನ ವಿರೋಧಿಯಾದ ಮತಾಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವುದನ್ನು ಕೈಬಿಡಬೇಕು. ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದ್ದು ಸರಕಾರವು ಸೂಕ್ತ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ದಾಳಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭರವಸೆಯನ್ನು ಕೊಡಬೇಕು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತ ದಾಳಿ ನಡೆಸುವ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಲಿಡಾರಿಟಿ ಈ ಮೂಲಕ ಒತ್ತಾಯಿಸುತ್ತದೆ. ಈ ಸಂಧರ್ಬದಲ್ಲಿ ಸೋಲಿಡಾರಿಟಿ ಸಂಘಟನೆಯ ಸ್ಥಳಿಯ ಅಧ್ಯಕ್ಷರಾದ ಮಹ್ಮದ್ ಮಜೀದ್, ಎಮ್.ಡಿ.ಬಾಬು. ಶ್ಯಾಮೀದ್ ಮರಕಟ್. ಇಲ್ಲಿಯಾಜ್ ನಾಲಬಂದ. ನಬೀ ಪಾನವಾಲೇ.ರಾಜಾಸಾಬ. ಸಲಿಂ ಮನಿಯಾರ.ಇನ್ನೂ ಹಲವಾರು ಜನ ಇದ್ದರು,
ವರದಿ – ಸೋಮನಾಥ ಹೆಚ್ ಎಮ್