ವಿಶ್ವ ದಾಖಲೆ ಪುಸ್ತಕದಲ್ಲಿ ಮೋಹನ್ ಕುಮಾರ್ ದಾನಪ್ಪ ಹೆಸರು ಸೇರ್ಪಡೆ!
ಬೆಂಗಳೂರು: ಡಿ:18, ಗುಜರಾತ್ ರಾಜ್ಯದ ಅಹಮದಬಾದ್ ನ ಸೈರನ್ಸ್ ಸ್ಪೋರ್ಟ್ಸ್ ಮತ್ತು ವೆಲ್ನೆಸ್ ಕ್ಲಬ್ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ಜಗತ್ತಿನಾದ್ಯಂತ ಹಮ್ಮಿಕೊಂಡ ಇಂಡಿಯನ್ ರನ್ನಿಂಗ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ರಾಷ್ಟ್ರ ಧ್ವಜವನ್ನ ಹಿಡಿದುಕೊಂಡು 10 ಕಿಲೋ ಮೀಟರ್ ಓಟವನ್ನ ಪೂರ್ಣಗೊಳಿಸಿ ವಿಶ್ವ ದಾಖಲೆ ಪುಸ್ತಕದಲ್ಲಿ ಹೆಸರು ಸೇರ್ಪಡೆಗೊಂಡಿರುವುದರ ಪ್ರಮಾಣ ಪತ್ರವನ್ನು ಹವ್ಯಾಸಿ ಓಟಗಾರ ಹಾಗೂ ಕರ್ನಾಟಕ ಹೈ ಕೋರ್ಟಿನ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ಪಡೆದಿರುತ್ತಾರೆ, ಈ ಕಾರ್ಯಕ್ರಮದಲ್ಲಿ ಸದರಿ ಸ್ಪರ್ಧೆಯು ರಾಷ್ಟ್ರಧ್ವಜವನ್ನ ಹಿಡಿದುಕೊಂಡು ಓಡುವುದಾಗಿದ್ದು ಸ್ಪರ್ಧೆಯಲ್ಲಿ 11610 ಸ್ಪರ್ಧಾಳುಗಳು ಭಾಗವಹಿಸಿದ್ದು ಬೃಹತ್ ಸ್ಪರ್ಧೆಯಾಗಿದ್ದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್(ವಿಶ್ವ ದಾಖಲೆ ಪುಸ್ತಕ)ಗೆ ಸೇರಿರುತ್ತದೆ! ಭಾಗವಹಿಸಿದ ಆ 11610 ಸ್ಪರ್ಧಾಳುಗಳಲ್ಲಿ ಕಂಪ್ಲಿಯ ಡಾ.ಮೋಹನ್ ಕುಮಾರ್ ದಾನಪ್ಪನವರು ಒಬ್ಬ ಸ್ಪರ್ಧಾಳಾಗಿದ್ದು ರಾಷ್ಟ್ರಧ್ವಜ ಹಿಡಿದು 10 ಕಿಲೋ ಮೀಟರ್ ಓಟವನ್ನ 55 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದು ಅಕ್ಟೋಬರ್ 11,2021 ರಂದು ವಿಶ್ವ ದಾಖಲೆಯ ಪುಸ್ತಕದಲ್ಲಿ ಇವರ ಹೆಸರು ಸೇರಿಸಿ ಪ್ರಮಾಣ ಪತ್ರವನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಅಧ್ಯಕ್ಷರು ಮತ್ತು ಸಿಈಓ ರವರಾದ ಸುಪ್ರೀಂ ಕೋರ್ಟಿನ ವಕೀಲರಾದ ಸಂತೋಷ್ ಶುಕ್ಲಾ ಪ್ರಮಾಣ ಪತ್ರವನ್ನು ನೀಡಿರುತ್ತಾರೆ, ಪ್ರಮಾಣ ಪತ್ರ ಪಡೆದ ಮೋಹನ್ ಕುಮಾರ್ ದಾನಪ್ಪನವರು ” ನಾನು ಓಟದಲ್ಲಿ ಹಲವಾರು ಪ್ರಶಸ್ತಿ / ಪ್ರಮಾಣ ಪತ್ರಗಳು ಪದಕಗಳನ್ನ ಪಡೆದಿರುತ್ತೇನೆ ಆದರೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನ ವತಿಯಿಂದ ಲಭಿಸಿದ ಪ್ರಮಾಣ ಪತ್ರವು ನನಗೆ ತುಂಬಾ ಸಂತಸ ತಂದಿದೆ ಇನ್ನಷ್ಟು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಲು ಸ್ಫೂರ್ತಿ ನೀಡಿದೆ, ಈ ರಂಗದಲ್ಲಿ ಇನ್ನಷ್ಟು ಶ್ರಮಿಸುವುದಾಗಿ ತಿಳಿಸಿದರು….
ವರದಿ – ಮಹೇಶ ಶರ್ಮಾ