ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರವಾದ ಮುಸ್ಲೀಂ ಯುವಕರು..
ಹುಟ್ಟಿದಾಗ ಬೆತ್ತಲೆ, ಸಾಯುವಾಗ ಬೆತ್ತಲೆ ಈ ನಡುವೆ ಭರಿ ಕತ್ತಲೆ,
ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೋ
ಕುಲವೇ ಡೋಹರನ? ಕುಲವೇ ಮಾದಾರನ?
ಕುಲವೇ ದೂರ್ವಾಸನ? ಕುಲವೇ ವ್ಯಾಸನ?
ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಳ್ಪಡೆ ನಡೆಯುವರು ತ್ರಿಲೋಕದಲ್ಲಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ
ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಹಿಂದೂ ವಿಧಿ-ವಿಧಾನದಂತೆ ಮುಸ್ಲಿಂ ಸಂಘಟನೆಯ ಹ್ಯೋಮನಿಟಿರಿಯನ್ ರಿಲೀಫ್ ಸೊಸೈಟಿಯ ಕಾರ್ಯಕರ್ತರು ನೆರವೇರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ವಿಕಾಸನಗರದ ೮೫ ವರ್ಷದ ವೃದ್ದ ಸಾವನ್ನಪ್ಪಿದ ದುರ್ದೈವಿ. ವಿಠ್ಠಲರಾವ್ ಮಹೇಂದ್ರಕರ್ ೮೫ ಕೆಲದಿನಗಳಿಂದ ಅಸ್ವಸ್ಥರಾಗಿದ್ದರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ನಿನ್ನೆ ಸಾಯಂಕಾಲ ಸಾವನ್ನಪ್ಪಿದ್ದರು. ಅವರ ಮಗ ಗಿಣಗೇರಿಯ ಅಲ್ಟ್ರಾಟೆಕ್ ಕಾರ್ಖನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೂ ಕೂಡ ಉಸಿರಾಟದ ತೋಂದರೆಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದೆ ಬಾರದ ಕಾರಣಕ್ಕೆಕೊಪ್ಪಳದ ಜಮಾತೇ ಇಸ್ಲಾಂಮೀ ಹಿಂದ್‌ನ ಸಂಘಟನೆಯ ಹ್ಯುಮಾನೇಟಿರಿಯನ್ ರಿಲಿಪ್ ಸೊಸೈಟಿಯ ಕಾರ್ಯಕರ್ತರು ಅಂತ್ಯಕ್ರಿಯೆ ನೆರವೇರಿಸಿದರು.
ದಾವಣಗೆರೆಯಿಂದ ಬಂದಿದ್ದ ಅವರ ಸಂಬಂದಿಯ ಸಮ್ಮುಖದಲ್ಲಿಹಿಂದೂ ಪದ್ದತಿಯಂತೆ ಗವಿಮಠದ ಹಿಂಭಾಗದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಅಂಬುಲೆನ್ಸ ಚಾಲಕ ವಿಕಾಸ ನಗರದಿಂದ ಸ್ಮಶಾನಕ್ಕೆ ಮೃತ ದೇಹ ತರಲು ೧೨ ಸಾವಿರ ಬೇಡಿಕೆ ಇಟ್ಟಿದ್ದಾನೆ. ರಾತ್ರಿ ವೇಳೆ ಕೊಡಲು ದುಡ್ಡಿಲ್ಲದ ಕುಟುಂಬಸ್ಥರು ೮ ಸಾವಿರ ಕೊಟ್ಟು ಬೆಳಿಗ್ಗೆ ೪ ಸಾವಿರ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಒಂದೆಡೆ ಅಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದರೆ ಮಾನವೀಯತೆ ಮೆರೆದ ಮುಸ್ಲಿಂ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.ಇದರಲ್ಲಿ ಜಮಾತ್ ನ ಅಧ್ಯಕ್ಷ ರಾದ ಸಯ್ಯದ್ ಹಿದಯತ್ ಅಲಿ.ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್ .ಅಸ್ಗರ್ ಖಾನ್. ಗೌಸ್ ಪಟೇಲ್.ಸಜೀದ್ ಹುಸೇನ್.ರಹಮತ್ ಹುಸೈನ್. ಮಹಮ್ಮದ್ ಅಖೀಲ್ ಎಸ್.ಐ.ಓ ಸದಸ್ಯ ಭಾಗವಹಿದ್ದರು.
ವರದಿ – ಸಂಪಾದಕೀಯ