ಯಲಬುರ್ಗಾ ತಾಲೂಕಿನ ಮುಧೋಳ ಗ್ರಂಥಾಲಯಕ್ಕೆ ಜಿ.ಪಂ ಸಿಇಒ ಭೇಟಿ…….
ಮುಧೋಳ ಗ್ರಾಮದ ಗ್ರಾಮ ಪಂಚಾಯತ ಗ್ರಂಥಾಲಯಕ್ಕೆ ಜಿ.ಪಂ ಸಿಇಒ ಫೌಜಿಯ ತರುನಮ್ ಅವರು ಭೇಟಿ ನೀಡಿ ಗ್ರಂಥಾಲಯವನ್ನು ವೀಕ್ಷಣೆ ಮಾಡಿದರು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯತ್ ‘ಗ್ರಂಥಾಲಯದಲ್ಲಿ ಸುಮಾರು ಒಂಬತ್ತು ಸಾವಿರ ಪುಸ್ತಕಗಳಿವೆ. ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಫೌಜಿಯ ತರುನಮ್ ಅವರು ಹೇಳಿದರು.ಮತ್ತು ಗ್ರಂಥಾಲಯವನ್ನು ವೀಕ್ಷಿಸಿ ಮಾತನಾಡಿದರು. ಗ್ರಂಥಾಲಯದಲ್ಲಿ ಪುಸ್ತಕಗಳ ಬಗ್ಗೆ ಶಾಲಾ ಮಕ್ಕಳಿಗೆ ಅವರ ಮನೋವಿಕಾಸಕ್ಕೆ ಪ್ರೇರಕ ವಾಗುವಂತಹ ಸಣ್ಣ ಸಣ್ಣ ಕಥೆಗಳನ್ನ ಕವನ ಕಾದಂಬರಿಹೀಗೆ ಹಲವಾರು ಮನೋರಂಜನಾತ್ಮಕವಾಗಿ ಗ್ರಂಥಾಲಯದ ಮೇಲ್ವಿಚಾರಕರ ಜಗನ್ನಾಥ್ ಅಕ್ಕಸಾಲಿಗರ ಅವರಿಗೆ ಮಾಹಿತಿ ತಿಳಿಸಿದರು ಅದಲ್ಲದೆ ಈ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯ ಆದಷ್ಟು ಬೇಗ ಪ್ರಾರಂಭಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಯಲಬುರ್ಗಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್. ಮುಧೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಶಿವಾನಂದ ಅರಬರ. ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ ಲಿಂಗಣ್ಣನವರು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಗ್ರಾಂ ಪಂ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ – ಹುಸೇನಬಾಷಾ ಮೋತೇಕಾನ್