* `ರಾಜನೂ ರಾಣಿಯೂ’ಚಿತ್ರದ ಚಿತ್ರೀಕರಣ ಮುಕ್ತಾಯ *   

Spread the love

* `ರಾಜನೂ ರಾಣಿಯೂಚಿತ್ರದ ಚಿತ್ರೀಕರಣ ಮುಕ್ತಾಯ *   

ನರಗುಂದ : ಶ್ರೀ ಆದಿಶಕ್ತಿ ಕ್ರಿಯೇಷನ್ಸ್ ನರಗುಂದ   ಬ್ಯಾನರ್ ಅಡಿಯಲ್ಲಿ ಪೂಜ್ಯ ಡಾ.ಜಯದೇವ ಗುರುಗಳು ಇವರ ಆಶೀರ್ವಾದದೊಂದಿಗೆ ‘ರಾಜನೂ ರಾಣಿಯೂ’  ಕನ್ನಡ ಚಲನಚಿತ್ರದ ಎರಡನೆ ಹಂತದ ಚಿತ್ರೀಕರಣ ನರಗುಂದ ,ಸವದತ್ತಿ ತಾಲೂಕಿನ ಹಿರೇಕುಂಬಿ,ಮುನವಳ್ಳಿ, ಎಕ್ಕೇರಿ, ವರವಿ ಸಿದ್ದೇಶ್ವರ ದೇವಸ್ಥಾನ,  ಸವದತ್ತಿ, ಸುತ್ತ ಮುತ್ತ ಭರದಿಂದ ಸಾಗಿ ಇದೀಗ ಮಾತಿನ ಭಾಗದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದೆ. ನಿರ್ದೇಶಕ ರಾಜು ಆಚಾರ್ಯ ಮಾತನಾಡಿ, `ರಾಜನೂ ರಾಣಿಯೂ ಚಿತ್ರದಲ್ಲಿ  ನಮ್ಮ ಭಾಗದ ಕಲಾವಿದರು ತಂತ್ರಜ್ಞರಿಗೆ ಅವಕಾಶ ನೀಡಲಾಗಿದ್ದು, ಸಂಪೂರ್ಣ ಉತ್ತರ ಕರ್ನಾಟಕದ ಸಂಭಾಷಣೆ ಚಿತ್ರದಲ್ಲಿ ಇದೆ. ಕನ್ನಡ ಮತ್ತು ಗ್ರಾಮೀಣ ಸಂಸ್ಕೃತಿ ಚಿತ್ರದಲ್ಲಿ ಮೂಡಿಬರಲಿದ್ದು ಇದೀಗ ಚಿತ್ರೀಕರಣ ಸತತವಾಗಿ ನಡೆಸಿ ಮುಗಿಸಿದ್ದು ಮಾತಿನ ಭಾಗ ಮುಕ್ತಾಯವಾಗಿದೆ. ಒಂದಿಷ್ಟು ಪ್ಯಾಚವರ್ಕ ಏನಾದರೂ ಇದ್ದಲ್ಲಿ  ಹಾಡಿನ ಚಿತ್ರೀಕರಣದ ವೇಳೆ ಅದನ್ನೂ ಪೂರ್ಣ ಮಾಡುತ್ತೇವೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣವನ್ನು ನರಗುಂದ, ಗಜೇಂದ್ರಗಡ, ಕಾಲಕಾಲೇಶ್ವರ ಸುತ್ತಮುತ್ತ  ನಡೆಸುತ್ತೇವೆ ಎಂದರು. ಬೆಳಗಾವಿಯ ಅಮೋಲ್ ದೇಸಾಯಿ ನಾಯಕನಾಗಿ, ಜ್ಯೋತಿ ನಾಯಕಿಯಾಗಿ, ಸಾಗರ್ ಜೋಷಿ, ಮೌನೇಶ ಸಿ. ಬಡಿಗೇರ, ಶಿವಾನಂದ ತಾರಿಹಾಳ, ಪ್ರತಿಭಾ ವಕ್ಕುಂದ, ಗೋಪಾಲ ಪಾಸಲಕರ, ಆರ್. ನವೀನಕುಮಾರ್, ಮಂಜು ರಂಗನಾಥ, ಶಿವರಾಜ್ ಕುರಗುಂದ, ಶ್ರೀನಿವಾಸ ಇನಾಮದಾರ, ಕು. ಶ್ರೇಯಾ ಪತ್ತಾರ, ಪ್ರವೀಣ ಬಡಿಗೇರ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಉದಯಗೌಡ.ಕೆ,(ಬೆಂಗಳೂರ), ಸಹಾಯಕರು ನಿತಿನ್ ನಾಗರಾಳ , ಸಂಕಲನ ಪ್ರವೀಣ, ಚಿದಾನಂದ್,ಅಭಿಷೇಕ್ ಬಡಿಗೇರ, ಸಾಹಿತ್ಯ , ಸಂಗೀತ ಕೆ. ಎಮ್. ಇಂದ್ರ, ಶಬ್ದಗ್ರಹಣ ರಾಜೇಶ್, ಸಹಾಯಕ  ನಿರ್ದೇಶನ ನಂದೀಶ್ ನಾವಳ್ಳಿಮಠ,ಸಹ ನಿರ್ದೇಶನ ಮೌನೇಶ್ ಬಡಿಗೇರ ಗದಗ, ಶ್ರೀನಿವಾಸ ಇನಾಮದಾರ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಗಿ ಅವರದಿದೆ ನಿರ್ಮಾಣ ನಿರ್ವಹಣೆ ರಾಹುಲ್ ಅಂಬಿಗೇರ್, ಮೌನೇಶ ಪತ್ತಾರ ಹಾಗೂ ಧೀರಜ್ ಕೋಟೆಕರ್ , ವಿನಾಯಕ ಪವಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕತೆ, ಸಂಭಾಷಣೆ ನಿರ್ದೇಶನ ರಾಜು ಆಚಾರ್ಯ ಅವರದಿದೆ. ವರದಿ:  ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬

Leave a Reply

Your email address will not be published. Required fields are marked *