ಕೂಡ್ಲಿಗಿ:ಕಲೆ ನನಗೆ ಎಲ್ಲವನ್ನು ನೀಡಿದೆ,ಆತ್ಮಹತ್ಯೆ ಮಹಾಪಾಪ-ಜ್ಯೋಗತಿ ಮಂಜಮ್ಮ,,,,
ವಿಜಯನಗರ ಜಿಲ್ಲೆ ಕೂಡ್ಲಿಗಿ,ತಾಲೂಕು ಕಲಾವಿದರ ನಾಡಾಗಿದ್ದು ನಮ್ಮಂತಹ ಸಾವಿರಾರು ಕಲಾವಿದರಿದ್ದಾರೆ. ಬೆಳಕಿಗೆ ಬರುತ್ತಿಲ್ಲ ಅವರಿಗೆ ಸೂಕ್ತ ಅವಕಾಶ ವೇದಿಕೆ ಸಿಗುತ್ತಿಲ್ಲ,ಈ ಕಾರಣಕ್ಕೆ ಅವರು ಎಲೆಮರೆಯ ಕಾಯಿಗಳಾಗಿದ್ದಾರೆ ತಾಲೂಕು ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು. ಜಾನಪದ ಅಕಾಡೆಮಿ ಅಧ್ಯಕ್ಷೆ,ರಾಜ್ಯೋತ್ಸವ ಪ್ರಶಸ್ತಿ ವಿಚೇತೆ ಕಲಾವಿದೆ ಜ್ಯೋಗತಿ ಮಂಜಮ್ಮರವರು ನುಡಿದರು.ಅವರು ಪಟ್ಟಣದ ಮಹಾತ್ಮ ಗಾಂದೀಜಿ ರಾಷ್ಟ್ರೀಯ ಹುತಾತ್ಮ ಸ್ಮಾರಕದ ಆವರಣದಲ್ಲಿ,ಕಾರ್ಯಕ್ರಮವೊಂದರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ಯುವಕರು ಚಟುಗಳಿಗೆ ದಾಸರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಯುವಪೀಳಿಗೆ ಆತ್ಮ ಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತೀವ್ರ ಆತಂಕ ವ್ಯೆಕ್ತಪಡಸಿದರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕಿದೆ ಸಂಸ್ಕಾರ ಹೊಂದದಿರುವುದೇ ಅವರು ದಾರಿತಪ್ಪಲು ಕಾರಣ,ಯಾರೂ ಕೂಡ ತಾವು ನಡೆದು ಬಂದ ಹಿಂದಿನ ದಾರಿಯನ್ನ ಮರೆಯಬಾರದು. ನಡೆದು ಬಂದ ದಾರಿ ಮರೆತರೆ ಜೀವನದಲ್ಲಿ ದಾರಿಕಾಣದೇ,ದಾರಿ ತಪ್ಪಿದ ಮಗನಾಗಿ ತೀವ್ರ ಪಶ್ಚಾತ್ತಾಪ ಪಡುವುದು ಖಂಡಿತ. ಹಸಿವು ಬಡತನ ಶ್ರಮ ಜೀವನವನ್ನು ಕಲಿಸುತ್ತದೆ ಕಲೆ ಎಲ್ಲವನ್ನೂ ಕೊಡುತ್ತದೆ,ಜಾತಿ ಮಥ ಪಂಥ ಲಿಂಗ ತಾರತಮ್ಯ ಶೋಷಣೆಗಳನ್ನು ಮೀರಿ ನಿಲ್ಲುವ ಶಕ್ತಿ ನಿಜವಾದ ಕಲಾವಿದಿಗೆ ಇರುತ್ತದೆ. ಸದಾ ಒಳ್ಳೆಯದನ್ನೇ ಯೋಚಿಸಬೇಕು ಹಾಗೂ ಒಳ್ಳೆಯದನ್ನೇ ಮಾಡಬೇಕು ಹಾಗಿದ್ದಲ್ಲಿ ಒಳ್ಳೆದೇ ಆಗುತ್ತದೆ.ಯಾವುದಕ್ಕೂ ಎದೆಗುಂದಬಾರದು ಸಹನೆಯಿಂದ ಬುದ್ದಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು,”ಶ್ರಮವಿಲ್ಲದ ನಿರೀಕ್ಷೆ ಭಿಕ್ಷೆ” ಶ್ರಮ ಪಡದೇ ಯಾವುದನ್ನೂ ನಿರೀಕ್ಷಿಸಬಾರದು ಅದು ಭಿಕ್ಷೆ”.ನಿಜವಾದ ಕಲಾವಿದರು ನಾಡಿನ ಸಾಸ್ಕೃತಿಕ ಸರದಾರರು ಅವರೆಂದೂ ಬಡವರಲ್ಲ,ಸರ್ಕಾರ ಕಲಾವಿದರನ್ನ ಗುರುತಸಿ ಸತ್ಕರಿಸಬೇಕಿದೆ ಇಲಾಖೆಗಳು ಕರ್ಥವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.ಗಣ್ಯಮಾನ್ಯರು ನಾಗರೀಕರು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428