ಜುಮಲಾಪೂರ ಗ್ರಾಮಕ್ಕೆ ಬೆಳ್ಳಂಬೆಳಗ್ಗೆ ಬೇಟಿ ನಿಡಿ ಜೆ ಜೆ ಎಮ್. ಕಾಮಗಾರಿಯನ್ನು ಶಿಘ್ರಗತಿಯಲ್ಲಿ ಉತ್ತಮ ಗುಣಮಟ್ಟದಿಂದ ಮಾಡಿ ಮುಗಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ. ಕುಷ್ಟಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ Aee ಶ್ರೀ ಶಾಮಣ್ಣ ಬಾಂಬೆ ನಾರಿನಾಳ…..
ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮಕ್ಕೆ ಬೆಳ್ಳಂಬೆಳಗ್ಗೆ ದಿಢೀರನೆ ಬೇಟಿ ನಿಡಿದ ಕುಷ್ಟಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ( Aee) ಶ್ರೀ ಶಾಮಣ್ಣ ಬಾಂಬೆ ಯವರು. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಶಿಘ್ರಗತಿಯಲ್ಲಿ ಮಾಡಿ ಮುಗಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ತದನಂತರ ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರ್ವಜನಿಕರ ಸಹಬಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಿದರು. ನಂತರ ಗ್ರಾಮದ ಸಾರ್ವಜನಿಕರಿಗೆ ಈ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಮಾಡುವದು ಕಂಡರೆ ಕೂಡಲೆ ಬಂದ್ ಮಾಡಿಸಿ. ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ. ಕೇವಲ ಇದು ಸರ್ಕಾರದ ನೌಕರರ ಕೆಲಸ ಎಂಬ ಭಾವನೆ ಜನರಲ್ಲಿ ಬೇಡ ಇದು ನಮ್ಮ ಊರಿನ ಕೆಲಸ ನಮ್ಮ ಮನೆ ಕೆಲಸ ಎಂದು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ ಎಂದರು. ಹಾಗೆ ಪ್ರತಿಯೊಬ್ಬ ನಾಗರಿಕರು ಈ ಯೋಜನೆಗೆ ವಂತಿಗೆ ಹಣ ತುಂಬಬೇಕು. ಕೆವಲ ಇದು ಸರ್ಕಾರ ಯೋಜನೆ ಅನ್ನುವದಕ್ಕಿಂಥ ಇದು ನಮ್ಮ ಕೆಲಸ ಎನ್ನುವ ಭಾವನೆ ನಿಮ್ಮದಾಗಲಿ ಎಂದರು.
ವರದಿ – ಉಪ-ಸಂಪಾದಕೀಯ