ಭಾರತೀಯ ಸೈನ್ಯದಲ್ಲಿ ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸುವ ಸಂದರ್ಭದಲ್ಲಿ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ  ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ……

Spread the love

ಭಾರತೀಯ ಸೈನ್ಯದಲ್ಲಿ ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸುವ ಸಂದರ್ಭದಲ್ಲಿ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ  ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ……

ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ನಾಗರಾಜ ಅವರು ಭಾರತೀಯ ಸೈನ್ಯದಲ್ಲಿ ಸುಮಾರು 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸುವ ಸಂದರ್ಭದಲ್ಲಿ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ  ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವಸ್ವಾಮಿ ಹಿರೇಮಠ ಅವರು ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದರು. ನಂತರ ಅವರಿಗೆ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ಆಶ್ರಮದ ವತಿಯಿಂದ ನಾಗರಾಜ ತುರ್ವಿಹಾಳ ಹಾಗೂ ಇನ್ನೊಬ್ಬ ಯೋಧರಾದ ವಿವೇಕಾನಂದ ಸವದತ್ತಿ ಅವರಿಗೆ ಸನ್ಮಾನಿಸಿ ಗೌರವಿಸಿ ಸೆಲ್ಯೂಟ್ ಮಾಡುವುದರ ಮೂಲಕ ಅಭಿನಂದನೆಗಳನ್ನು ಅರ್ಪಿಸಿದರು.  ಈ ಸಮಯದಲ್ಲಿ ಮಾತನಾಡಿದ ಯೋಧರಾದ ನಾಗರಾಜ ತುರುವಿಹಾಳ ನಾನು ದೇಶದ ಗಡಿಯಲ್ಲಿ ಇದ್ದಾಗ ಕಾರುಣ್ಯ ಆಶ್ರಮದ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ಸೇವೆಯನ್ನು ತಿಳಿದುಕೊಳ್ಳುತ್ತಾ ನನ್ನೆಲ್ಲಾ ಸಹೋದರಿಗೆ ಈ ಕಾರುಣ್ಯ ಆಶ್ರಮದ ಬಗ್ಗೆ ಮಾತನಾಡುತ್ತಿದ್ದೆ. ಆದುದರಿಂದ ಇಂದು ನಾನು ಈ ಕುಟುಂಬಕ್ಕೆ ಆಗಮಿಸಿದಾಗ ಎಲ್ಲ ಹಿರಿಯ ಜೀವಿಗಳು ಹಾಗೂ ವಯಸ್ಕರ ಬುದ್ಧಿಮಾಂದ್ಯ ರನ್ನು ನೋಡಿ ಇವರೆಲ್ಲ ಯೋಗಕ್ಷೇಮ ವಿಚಾರಿಸಿದಾಗ ನಾವು ಮಾಡುತ್ತಿರುವ ಸೇವೆಗಿಂತ ಇದು ಹೆಚ್ಚಿನ ಸೇವೆ ಎಂದೆನಿಸಿತು. ಇಂತಹ ಒಂದು ಸೇವೆಯನ್ನು ನನ್ನ ಹುಟ್ಟಿದ ಸ್ಥಳದಲ್ಲಿ ನಾನು ನೋಡುತ್ತಿರುವುದು ಬಹಳ ಹೆಮ್ಮೆಯೆನಿಸುತ್ತದೆ. ಇನ್ನು ಮುಂದೆ ನಾನು ಈ ಆಶ್ರಮದ ಜೊತೆ  ಯಾವಾಗಲೂ ನಿಂತುಕೊಳ್ಳುತ್ತೇನೆ. ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಇನ್ನೊರ್ವ ಯೋಧರಾದ ವಿವೇಕಾನಂದ ಸವದತ್ತಿ. ಓಂಕಾರ ಅಧ್ಯಕ್ಷರುರೈತ ಮತ್ತು ಸೈನಿಕರ ಅಭಿಮಾನಿ ಬಳಗ. ಅಮರ್ ವೀರಯೋಧ ಟೀಮಯೋಧ ಘಟಕ ತುರುವಿಹಾಳ. ವೀರೇಶ್.ಮರಿಬಸವ ಲಿಂಗರಾಜ. ಇನ್ನಿತರರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *