‘ಪಾರಿ’ ಬಂಜಾರ ಚಲನಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ …….
ಬೆಂಗಳೂರ : ಎವಿಆರ್ ಕ್ರಿಯೇಶನ್ಸ್ ಬೆಂಗಳೂರ ಇವರ ‘ಪಾರಿ’ಬಂಜಾರ ಚಲನಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ. ಕೊರೋನಾ, ಲಾಕ್ಡೌನ್, ಅತಿಯಾದ ಮಳೆ ಸಂಕಷ್ಟಗಳ ಮಧ್ಯೆಯೂ ರಾಜಸ್ಥಾನ, ದೊಡ್ಡಬಳ್ಳಾಪೂರ, ಬಿಜಾಪೂರ, ಶಿಗ್ಗಾಂವ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ ದಾವಣಗೇರೆಯ ಭೂಮಿಕಾ ‘ಪಾರಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕಪಾರಿಯಾಗಿ ಯಶಸ್ವಿನಿ ಅಭಿನಯಿಸಿದ್ದಾರೆ. ಇದು ಲಂಬಾಣಿ ಹುಡುಗಿಯೊಬ್ಬಳ ಕಥೆ. ಮಾಡದ ತಪ್ಪಿಗೆ ಹಳ್ಳಿಯಿಂದ ಬಹಿಷ್ಕಾರಕ್ಕೆ ಒಳಗಾಗುತ್ತಾಳೆ. ತಂದೆ ತಾಯಿ ಕಳೆದುಕೊಂಡ ‘ಪಾರಿ’ ತಾತನ ಆಶ್ರಯದಲ್ಲಿ ಬೆಳೆದಿರುತ್ತಾಳೆ.ಚಿಕ್ಕಮ್ಮ ಹಾಗೂ ಕೆಲವು ವ್ಯಕ್ತಿಗಳ ಕುತಂತ್ರದಿಂದ ರಾಜಸ್ಥಾನಕ್ಕೆ ಮದುವೆಯಾಗಿ ಹೋಗುತ್ತಾಳೆ. ಗೊತ್ತಿಲ್ಲದ ಊರಿಗೆ ಹೋದ ‘ಪಾರಿ’ ಪಡುವ ಕಷ್ಟಗಳು, ದು:ಖಗಳು ಕಣ್ಣೀರು ತರಿಸುತ್ತವೆ. ಎದೆಗುಂದದೆ ಛಲದಿಂದ ಬದುಕುತ್ತಾಳೆ. ಅವಳ ಮಗ ವಿಶಾಲ್ ಬಾರ್ಡರ್‌ನಲ್ಲಿ ಬಿಎಸ್ ಎಫ್ ಅಧಿಕಾರಿಯಾಗಿ ಉಗ್ರಗಾಮಿಗಳ ಜೊತೆ ಹೋರಾಡುವ ದೃಶ್ಯಗಳು ಎದೆ ಝಲ್ಲೆನಿಸುತ್ತವೆ. ಚಿತ್ರವನ್ನು ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ. ಇಲ್ಲಿ ಬಂಜಾರ ಹೆಣ್ಣುಮಕ್ಕಳ ಬದುಕು, ಅವರು ಪಡುವ ಕಷ್ಟದ ಜೀವನ ಚಿತ್ರಣವಿದೆ ಎಂದು ನಿರ್ದೇಶಕ ಹೇಮಂತಕುಮಾರ್ ಹೇಳುತ್ತಾರೆ. ಪಾತ್ರವರ್ಗದಲ್ಲಿ ಡಾವಣಗೇರಿಯ ಭೂಮಿಕಾ, ಮಧು ಚವ್ಹಾಣ, ಮೋತಿಲಾಲ್ ರಾಥೋಡ್, ರಾಮಾನಾಯಕ್,ನಂದು, ಪರ್ಲರ್ ಮಹೇಶ್,ಗೀತಾ ನರಸಿಂಹಮೂರ್ತಿ, ಅಖಿಲೇಶ್, ಅಪೂರ್ವ, ರಫಿಕ್ ಮೊದಲಾದವರಿದ್ದಾರೆ. ನಿರ್ದೇಶಕ ಹೇಮಂತಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿ ನಾಯಕ ಅವರ ಸಾಹಿತ್ಯ, ಶ್ರೀನಿವಾಸ್, ರಂಜಿತ್ ಅವರ ಸಂಗೀತ, ಸಂಕಲನ ಗ್ರಾಫಿಕ್ಸ್ ವಿಶಾಲ್ ಚವ್ಹಾಣ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದ್ದು ,ಹಲವಾರು ಕಿರುಚಿತ್ರಗಳು, ಚಲನಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಹೇಮಂತಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು ಮಧು.ಚವ್ಹಾಣ ನಿರ್ಮಿಸಿದ್ದಾರೆ.
ವರದಿ– ಡಾ.ಪ್ರಭು ಗಂಜಿಹಾಳ–೯೪೪೮೭೭೫೩೪೬