ಹಾರಕೂಡ ಶ್ರೀಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಹುಮನಾಬಾದ…..

Spread the love

ಹಾರಕೂಡ ಶ್ರೀಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಹುಮನಾಬಾದ…..

ಕಲ್ಯಾಣ ಕರ್ನಾಟಕದ ಭಾವೈಕ್ಯ ಮಠವೆಂದೇ ಸುಪ್ರಸಿದ್ಧ ಪಡೆದ,ಬಡವರ – ನೊಂದವರ ಆಶ್ರಯದಾತ ಮಠ. ದಾಸೋಹ ,ಧಾರ್ಮಿಕ, ಸಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನ ಸೇವೆ ಗೈಯುತ್ತಿರುವ ಈ ಭಾಗದ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಹಾರಕೂಡ ಮಠವು ಒಂದು. ಬಸವಾದಿ ಶರಣರ ಸಮಾನತೆಯ ಕ್ರಾಂತಿಯ ಕಹಳೆಯನ್ನೂದಿದ ಐತಿಹಾಸಿಕ ಪುಣ್ಯ ಭೂಮಿ ಶ್ರೀಮಠವಾಗಿದೆ. ಹಾರಕೂಡ ಸಂಸ್ಥಾನ ಹಿರೇಮಠವು ಈ ನಾಡಿನಲ್ಲಿ ಅತ್ಯಂತ ವೈಚಾರಿಕೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀಮಠವು ಹಗಲಿರುಳು ಶ್ರಮಿತ್ತಾ, ಮೌಲ್ಯಾಧಾರಿತ ವಿಚಾರಗಳು ಜನಸಾಮಾನ್ಯರಿಗೆ ತಲುಪಿಸುತ್ತಾ,ಅವರ ಉನ್ನತಿಗೆ ದುಡಿಯುತ್ತೀದೆ. ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ಅತ್ಯಂತ ಶ್ರದ್ಧೆಯಿಂದ ಮುಂದುವರಿಸುವ ದಿಸೆಯಲ್ಲಿ ಸಮಸ್ತ ಶರಣ ಬಳಗದ ಮೌಲಿಕ ವೈಜ್ಞಾನಿಕ ಚಿಂತನೆಗಳ ಗ್ರಂಥಗಳನ್ನು ಹಿರೇಮಠ ಸಂಸ್ಥಾನ ಮಠದಿಂದ ನಿರಂತರವಾಗಿ ಪ್ರಕಟಿಸುತ್ತ ಸಾಗಿದೆ.ಶ್ರೀಮಠದ ಈಗಿನ ಶ್ರೇಯಸ್ಸಿಗೆ ಕಾರಣಿಕರ್ತರು ಅಂದರೆ ಪೂಜ್ಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿಗಳು ಎಂದು ಹೆಮ್ಮೆಯಿಂದ ಹೇಳಲು ಸಂತೋಷ ಎನಿಸುತ್ತದೆ. ಹೀಗೆ ಧರ್ಮ,ಸಾಹಿತ್ಯ, ಜ್ಞಾನ ಹಾಗೂ ಸಾಂಸ್ಕೃತಿಕ ಉನ್ನತಿಗೆ ಶ್ರಮಿಸುತ್ತಿರುವ ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ತ್ರಿವಿಧ ದಾಸೋಹಿ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರ ನಿಸ್ವಾರ್ಥ ಸೇವಾ ಕಾರ್ಯ ಬಹಳ ದೊಡ್ಡದು.ತರುವಾಯ ಶ್ರೀಮಠವು ಯಶಸ್ವಿ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಾ  ಈ ನಾಡಿನಲ್ಲಿ ಬೆಳಗುತ್ತೀದೆ. ಈ ಎಲ್ಲಾ ಬೆಳವಣಿಗೆಗೆ ಹಿಂದೆ ಇಂದಿನ ಪೂಜ್ಯರಾದ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರವರ ಅವಿರತ ಶ್ರಮ, ತ್ಯಾಗವಿದೆ.ಆದಕಾರಣ ಶ್ರೀಗಳ ಪ್ರಸ್ತುತ ಸಮಾಜಿಕ ಕಳಕಳಿ ಹಾಗೂ ಧಾರ್ಮಿಕ ನಿಸ್ವಾರ್ಥ ಸೇವಾ ಕೈಂಕರ್ಯಗಳು ಗುರುತಿಸಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಘಟಕದ ವತಿಯಿಂದ ಚನ್ನವೀರ ಶಿವಾಚಾರ್ಯರ ಪೂಜ್ಯರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸಾಹಿತಿ, ಪತ್ರಕರ್ತ, ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಸನ್ಮಾನಿಸಿ ಗೌರವಿಸಿದಾರೆ. ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ದಯಾನಂದ ಕಾಂಬ್ಳೆ,ತಿಪ್ಪಣ್ಣಾ ಶರ್ಮಾ, ಚಂದ್ರಶೇಖರ ನಾರಾಯಣಪೇಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ –  ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *