ಕಲಬುರಗಿಯಲ್ಲಿ ಅಭಿಮಾನಿ ಪ್ರಕಾಶನ ಪ್ರಶಸ್ತಿಯನ್ನು ಶ್ರೀ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಪಡೆದ ತಾವರಗೇರಾ ಹಿರಿಯ ಪತ್ರಕರ್ತರು ವಿ. ಆರ್ ತಾಳಿಕೋಟಿ….
ಕಲಬುರಗಿಯಲ್ಲಿ ನೆಡದ 36 ನೇ ಪತ್ರಕರ್ತರ ಸಮ್ಮೇಳನದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾದ ಹಿರಿಯ ಪತ್ರಕರ್ತರಾದ ವಿ. ಆರ್ ತಾಳಿಕೋಟಿ ಅವರಿಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿಯನ್ನು ಶ್ರೀ ಮಾನ್ಯ ಮುಖ್ಯಮಂತ್ರಿಯವರಿಂದ ಪಡೆದಿರುವುದು. ಇಡೀ ಕೊಪ್ಪಳ ಜಿಲ್ಲೆಯ ಪತ್ರಕರ್ತರು ಸಂತಸದ ವಿಚಾರ. ಹಲವಾರು ವರ್ಷಗಳಿಂದ ಪತ್ರಿಕರಂಗದಲ್ಲಿ ಅತ್ಯ ಅಮೂಲ್ಯ ಸೇವೆ ಸಲ್ಲಿಸುತ್ತ ಬಂದಿರುವುದು ಹಾಗೆ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವುದು ಹಾಗೆ ವಿಜಯವಾಣಿ ಪತ್ರಕರ್ತರಾಗಿ ಹಿಂದಿಗೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಏನೇ ಆಗಲಿ ಮುಂದಿನ ದಿನಗಳಲ್ಲಿ ಪತ್ರಿಕಾರಂಗದಲ್ಲಿ ಇನ್ನಷ್ಟು ಪ್ರಶಸ್ತಿಗಳು ಅವರಿಗೆ ಸಿಗಲಿ ಎನ್ನುವದು ಪತ್ರಿಕೆ ಆಶಯ.ಕಲಬುರ್ಗಿ ನಗರದಲ್ಲಿ 36ನೇ ಪತ್ರಕರ್ತರ ಸಮ್ಮೇಳನ ಜರುಗಿತು.ನಗರದ ಅಪ್ಪನ ಕೆರೆ ಹತ್ತಿರದ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾ ಭವನದಲ್ಲಿ ಕಳೆದ ಎರಡು ದಿನಗಳಿಂದ ಕಾರ್ಯನಿರತ ಪತ್ರಕರ್ತರ ರಾಜ್ಯಾದ್ಯಕ್ಷ ಶಿವಾನಂದ ತಗಡೂರ ಇವರ ಅಧ್ಯಕ್ಷತೆಯಲ್ಲಿ ಜರಗುತ್ತಿರುವ ಸಮ್ಮೇಳನದಲ್ಲಿ ಇಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿ ಡಾ, ಶರಣಬಸವಪ್ಪ ಅಪ್ಪ ರವರ ದಿವ್ಯ ಸಾನಿದ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ಪತ್ರಿಕಾ ಭವನದ ಮೊದಲ ಮಹಡಿ ಉದ್ಘಾಟಿಸಿದರು. ವೇದಿಕೆ ಮೇಲೆ ಕೇಂದ್ರ ಸಚಿವ ಭಗವಂತ ಖೂಭಾ,ಸಂಸದ ಡಾ,ಉಮೇಶ ಜಾಧವ, ಕೈಗಾರಿಕಾ ಸಚಿವ ಮುರಗೇಶ ನಿರಾಣಿ, ಶಾಸಕರಾದ ದತ್ತಾತ್ರೇಯ ರೇವೂರ, ಅಜೇಯಸಿಂಗ ಧರ್ಮಸಿಂಗ, ಸಿಭಾಷ ಗುತ್ತೆದಾರ, ಅರಣ್ಯ ನಿಗಮದ ಅದ್ಯಕ್ಷೆ ತಾರಾ ಅನೂರಾಧಾ ಉಪಸ್ಥಿತರಿದ್ದರು. ರಾಜ್ಯ ಪತ್ರಕರ್ತರ ಸಂಘದ ಅದ್ಯಕ್ಷ ಶಿವಾನಂದ ತಗಡೂರ ಗಣ್ಯರಿಗೆ ಸತ್ಕರಿಸಿ ಅಭಿನಂದಿಸಿದರು. ನಂತರ ಮುಖ್ಯಮಂತ್ರಿಗಳು ಸ್ಮರಣ ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಬುನಾದಿಯಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಅನನ್ಯ ಕೈ ಬರಹ ಮೂಲಕ ಪ್ರಾರಂಭಿಸಿದ ಭಕ್ತಿ ತುಡಿತ ಮೌಲ್ಯಲಿತ ತತ್ವಗಳ ಬುನಾದಿ ಇಂದಿಗೂ ಆದರ್ಶವಾಗಿದೆ, ಇಂದಿನ ಪತ್ರಕರ್ತರು ಅಂತಕರಣದೊಂದಿಗೆ ಸಮಾಜವಳತಿಗಾಗಿ ಕಾರ್ಯನಿರ್ವಹಿಸಿದಲ್ಲಿ ದೊಡ್ಡ ಬದಲಾವಣೆ ಕಾಣಬಹುದು, ಪತ್ರಿಕರಗಳ ಜಿವಂತಿಗಾಗಿ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ವದಗಿಸಲಾಗುವದು, ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವೆ ಅವಿನಾಭವ ಸಂಭಂದ ಇದೆ ಅದನ್ನು ಕಾಪಾಡಿಕೊಂಡು ಹೋಗೋಣ, ಪತ್ರಕರ್ತರಲ್ಲಿ ಒಗ್ಗಟ್ಟು ಬಹಳ ಮುಖ್ಯವಾಗಿದೆ ಎಂದರು. ರಾಜ್ಯ ಪತ್ರಕರ್ತರ ಉಪಾಧ್ಯಕ್ಷ ಪುಂಡಲೀಕ ಭಾಳೋಜಿ, ಮತ್ತಿಕೇರಿ ಜಯರಾಮ, ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ, ಸಂಜೀವ ಕುಲಕರ್ಣಿ, ಬಂಗ್ಲೆ ಮಲ್ಲಿಕಾರ್ಜುನ, ಡಾ, ಕೆ ಉಮೇಶ್ವರ ಹಾಗೂ ಕಲಬುರ್ಗಿ ಪತ್ರಕರ್ತರ ಸಂಘದ ಅದ್ಯಕ್ಷ ಭವಾನಿ ಠಾಕೂರ ಹಾಗೂ ಸದಸ್ಯರು ಉಪಸ್ಥಿತರಿರು ಇದ್ದರು.
ವರದಿ – ಉಪ-ಸಂಪಾದಕೀಯ