ಯಲಬುರ್ಗಾ ಸಾರ್ವಜನಿಕ  ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ…..

Spread the love

ಯಲಬುರ್ಗಾ ಸಾರ್ವಜನಿಕ  ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ…..

ಯಲಬುರ್ಗಾ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ರಕ್ತ ಸಂಗ್ರಹಣಾ ಘಟಕದ ಕೊಠಡಿಗೆ  ಬೆಂಕಿ ಕಾಣಿಸಿ ಕೊಂಡಿದೆ ಆಸ್ಪತ್ರೆಯ ಬ್ಲಡ್ ಸಂಗ್ರಹ ವಿಭಾಗದಲ್ಲಿ ಸಾಯಂಕಾಲ 6 ಗಂಟೆಗೆ ತಾಂತ್ರಿಕ ಸಮಸ್ಯೆಯಿಂದ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಅಪಾಯ ಸಂಭವಿಸಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅಗ್ನಿ ಉರಿಯುತ್ತಿದ್ದಂತೆಯೇ ದಟ್ಟವಾದ ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿದೆ. ರಕ್ತ ಸಂಗ್ರಹಣಾ ಘಟಕದ ಕೊಠಡಿಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಎರಡು ಫ್ರಿಡ್ಜ್ ಗಳು ವಿದ್ಯುತ್ ಶಾರ್ಟ್ ನಿಂದ ಸುಟ್ಟು ಬಸ್ಮವಾಗಿದ್ದವು ಫ್ರಿಡ್ಜ್ ಸುಟ್ಟಿದ್ದು ಬಿಟ್ಟರೆ ಇನ್ನು ಯಾರಿಗೂ ಅವಗಡ ಸಂಭವಿಸಿಲ್ಲ. ಕೂಡಲೇ ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳು ವಿದ್ಯುತ್‌ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್‌ (ಡಿಪಿ) ಆಫ್‌ ಮಾಡಿದ್ದಾರೆ. ನಂತರ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ದಿಡೀರನೆ ಆಗಮಿಸಿದ ತಾಲೂಕಿನ ತಹಸೀಲ್ದಾರ್ ಶ್ರೀಶೈಲ್ ತಳವಾರ, ಅವರು ಹಾಗೂ ಪೋಲಿಸ್ ಇಲಾಖೆ ಸಿಪಿಐ-ಎಂ ನಾಗರೆಡ್ಡಿ. ಪಿಎಸ್ಐ ಶಿವಕುಮಾರ್ ಮುಗ್ಗಳ್ಳಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್. ಡಾ, ಸಂಗಣಬಸಪ್ಪ ಹೆಸ್ಕಾಂ ವಿಭಾಗದ ಎಂಜಿನಿಯರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆರಿಗೆ ವಿಭಾಗ ದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಹಾಗೂ ಬಾಣಂತಿಯರು ಆಸ್ಪತ್ರೆಯಲ್ಲಿ ಬೆಂಕಿ ಸಂಭವಿಸಿದ ಸುದ್ದಿ ಕೇಳಿ ತಕ್ಷಣವೇ ಗಾಬರಿಗೊಂಡು ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರಗಡೆ ಓಡೋಡಿ ಬಂದರು . ಆಸ್ಪತ್ರೆಯ ಮುಂಭಾಗದಲ್ಲಿ ಗರ್ಭಿಣಿ, ಬಾಣಂತಿಯರು ಕೆಲ ಹೊತ್ತು ಹೊರಗಡೆ ಬಂದು ವಿಶ್ರಾಂತಿ ಪಡೆದರು. ಬಳಿಕ ಎಲ್ಲಾ ರೋಗಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಅಂತ ತಿಳಿ ಹೇಳಿದಾಗ ಮರಳಿ ಒಳಗಡೆ ವಾರ್ಡ್‌ಗೆ ದಾಖಲಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯ್ತು.

ವರದಿ – ಹುಸೇನಭಾಷಾ ಮೊತೇಖಾನ್

Leave a Reply

Your email address will not be published. Required fields are marked *