ರಾಜ್ಯ ಸರ್ಕಾರ ಐ ಟಿ ಐ ಅತಿಥಿ ಬೋಧಕರ ಪರವಾಗಿ ನಿಲ್ಲಲಿ ಎಂದ ನೊಂದ ಅತಿಥಿ ಬೋಧಕರು …..

Spread the love

ರಾಜ್ಯ ಸರ್ಕಾರ ಟಿ ಅತಿಥಿ ಬೋಧಕರ ಪರವಾಗಿ ನಿಲ್ಲಲಿ ಎಂದ ನೊಂದ ಅತಿಥಿ ಬೋಧಕರು …..

ರಾಜ್ಯದಲ್ಲಿ ಸರ್ಕಾರಿ ಐಟಿಐ ಕಾಲೇಜುಗಳ 915 ಅತಿಥಿ ಬೋಧಕರು ಕಾರ್ಯನಿರ್ವಹಿಸುತ್ತಿದ್ದು ಇವರ ಸಮಸ್ಯೆಗಳನ್ನು ಅತಿಥಿ ಉಪನ್ಯಾಸಕರ ಸಮಸ್ಯೆ ಗಳಂತೆ ಸರಕಾರ ತಿಳಿದುಕೊಳ್ಳಬೇಕು ಹಾಗೂ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರ ಪರ ನಿಂತ ರಾಜ್ಯ ಸರ್ಕಾರ ಸರ್ಕಾರಿ ಐಟಿಐ ಕಾಲೇಜು ಅತಿಥಿ ಬೋಧಕರ ಪರವಾಗಿಯೂ ನಿಲ್ಲುವಂತೆ ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟದ ಸಮಿತಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತ್ರಿಕೆಗೆ ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಸಮಿತಿಯ ಸಂಚಾಲಕರು.ಶ್ರೀ ಮತಿ ನಾಗವೇಣಿ ಅವರು ರಾಜ್ಯ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 915 ಅತಿಥಿ ಬೋಧಕರು ಕಾರ್ಯನಿರ್ವಹಿಸುತ್ತಿದ್ದು ಇವರ ಸಮಸ್ಯೆಗಳು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಅಂತೆ ಭಿನ್ನವಾಗಿದೆ ಎಷ್ಟೋಬಾರಿ ಕರ್ನಾಟಕದ ಎಲ್ಲಾ ತಸಿಲ್ದಾರ್. ಜಿಲ್ಲಾಧಿಕಾರಿಗಳು. ಎಂ ಎಲ್ ಎ. ಎಂಎಲ್ಸಿ ಅವರಿಂದ ಹಿಡಿದು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೂ ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ ನಾರಾಯಣ್ ಅವರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೂ ಇನ್ನಿತರ ರಾಜಕೀಯ ಮುಖಂಡರಿಗೂ ನಮ್ಮ ಸಮಸ್ಯೆಗಳನ್ನು ಮನವಿ ಪತ್ರ ಕೊಡುವುದರ ಮೂಲಕ ಅವರ ಗಮನಕ್ಕೆ ತಂದಿರುತ್ತೇವೆ ಕಳೆದ ವರ್ಷ ಕೊರೋನ ಸಂದರ್ಭದಲ್ಲೂ ಸಹ ಕೆಲಸ ಮಾಡಿ ಸಂಬಳ ಇಲ್ಲದಿದ್ದರೂ ಐಟಿಐ ವಿದ್ಯಾರ್ಥಿಗಳಿಗೆ ONLNE ಮೂಲಕ ತರಗತಿ ಮಾಡಿರುತ್ತೇವೆ ಒಂದನೇ ಅಲೆ ಮತ್ತು ಎರಡನೇ ಅಲೆ ಯಲ್ಲಿ ದುಸ್ಥಿತಿಯಿಂದ ಜೀವನವನ್ನು ನಿರ್ಮಿಸುವಂತಹ ನಮ್ಮ ಅತಿಥಿ ಬೋಧಕರ ಮನವಿಯನ್ನು ಸ್ವೀಕರಿಸಿದ ಇದುವರೆಗೂ ಕೋವಿಡ್ ಪರಿಹಾರ ಸಹ ನೀಡಿರುವುದಿಲ್ಲ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಇಂದಲ್ಲ ನಾಳೆ ನಮ್ಮ ಸಚಿವರು ನಮ್ಮ ಪರವಾಗಿ ನಿಲ್ಲುವುದು ಎಂಬ ಮಹದಾಸೆಯಿಂದಲೇ ದಿನಗಳನ್ನು ದೂಡುತ್ತಿದ್ದೇವೆ. ಈಗ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚು ಮಾಡಲು ಯೋಚಿಸಿರುವ ಸಚಿವರಿಗೆ ನಾವು ವಿನಂತಿಸುವುದೇನೆಂದರೆ ಇವೆರಡು ಇಲಾಖೆ ಉಸ್ತುವಾರಿ ವಹಿಸಿರುವ ತಾವುಗಳು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬುವ ಧೋರಣೆಯನ್ನು ಬಿಟ್ಟು ಕೆಲವೇ ಗಂಟೆಗಳ ಉಪನ್ಯಾಸಕ ವ್ಯಕ್ತಿಗಿಂತ ಭಿನ್ನವಾದ ದಿನವಿಡಿ ದುಡಿಯುವ ಬೆರಳೆಣಿಕೆಯಷ್ಟು ಇರುವ ಅತಿಥಿ ಬೋಧಕರನ್ನು ಆದ್ಯತೆಗೆ ತೆಗೆದುಕೊಂಡು ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಹೆಚ್ಚಿಸಿದಂತೆ  ನಮಗೂ ಸಹ ಸಂಭಾವನೆಯನ್ನು ಹೆಚ್ಚಿಸಿ ಎಂದು ಈ ಮೂಲಕ ತಮ್ಮಲ್ಲಿ ನೊಂದ ಅತಿಥಿ ಬೋಧಕರು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ನೊಂದ ಅತಿಥಿ ಬೋಧಕರಾದ ಅನಿತಾ. ಪ್ರಭು ನವಿ. ರಾಕೇಶ್. ರಾಘವೇಂದ್ರ ದುಮ್ಮಾಳ. ಪ್ರವೀಣ.

ವರದಿ – ಹುಸೇನಭಾಷಾ ಮೊತೇಖಾನ್

Leave a Reply

Your email address will not be published. Required fields are marked *