ಕರುಣೆಗೆ ಹೆಸರಾದ ಸಿಂಧನೂರಿನ ಜನತೆಯ ಘನತೆ ಎತ್ತಿ ಹಿಡಿಯುತ್ತಿರುವ  ಕಾರುಣ್ಯ ಆಶ್ರಮ- ವೀರೇಶಗೌಡ ನಟೇಕಲ್ …

Spread the love

ಕರುಣೆಗೆ ಹೆಸರಾದ ಸಿಂಧನೂರಿನ ಜನತೆಯ ಘನತೆ ಎತ್ತಿ ಹಿಡಿಯುತ್ತಿರುವ  ಕಾರುಣ್ಯ ಆಶ್ರಮ- ವೀರೇಶಗೌಡ ನಟೇಕಲ್..…

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ  ಸಿದ್ದಲಿಂಗೇಶ್ವರ ಇಂಡಿಯನ್ ಗ್ಯಾಸ್ ನ ಸಿಬ್ಬಂದಿಗಳಾದ ಎಂ.ನಾಗರಾಜ್. ಎಂ. ರವಿ. ಯಮನೂರ ಇವರುಗಳ ಹುಟ್ಟುಹಬ್ಬವನ್ನು ಆಶ್ರಮಕ್ಕೆ ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರಿಗೆ ಹಣ್ಣುಹಂಪಲುಗಳನ್ನು ವಿತರಿಸಿ ನಟೇಕಲ್ ವೀರೇಶಗೌಡರ ಅಪಾರ ಕುಟುಂಬದ ಉಪಸ್ಥಿತಿಯಲ್ಲಿ  ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ ಮಾತನಾಡಿದ ಸಿದ್ದಲಿಂಗೇಶ್ವರ ಇಂಡಿಯನ್ ಗ್ಯಾಸ್ ನ ಮಾಲಿಕರಾದ ವೀರೇಶಗೌಡ ನಟೇಕಲ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಮೂವರು ನಮ್ಮ ಮನೆ ಮಕ್ಕಳಿದ್ದಂತೆ ಇವರು ತಿಂಗಳಿಗೆ ಎರಡು ಮೂರು ಸಾವಿರ ಗಳ ದುಡಿಮೆಯಲ್ಲಿ ಜೀವನ ಮಾಡುತ್ತಾ ಇರುವ ಇವರ ನಿರ್ಧಾರ ಇಂತಹ ನೊಂದು-ಬೆಂದ ಜೀವಿಗಳಿಗೆ ತಮ್ಮ ಹಸಿವನ್ನು ಅರಗಿಸಿಕೊಂಡು ಇವರಿಗೆಲ್ಲಾ ಹಸಿವು ನೀಗಿಸುವ ಕೆಲಸ ಮಾಡುತ್ತಿರುವುದು ನಮ್ಮ ಕುಟುಂಬಕ್ಕೆ ಅಪಾರ ಗೌರವವನ್ನು ತಂದುಕೊಟ್ಟಿದೆ. ನಮ್ಮ ಗ್ಯಾಸ್ ಕಂಪನಿಯಲ್ಲಿ ಸುಮಾರು 45 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ದುಡಿಮೆಯಿಂದ ಅವರ ಶ್ರದ್ಧೆ ನಿಯತ್ತು ಇಂದು ಸಿಂಧನೂರು ತಾಲೂಕಿನಾದ್ಯಂತ ನಮ್ಮ ಗ್ಯಾಸ್ ಕಂಪನಿಯು ಹೆಸರುವಾಸಿಯಾಗಿದೆ. ನಾವು ಮಾಲೀಕರ ಆಗಿದ್ದೇವೆ ಅಷ್ಟೇ ಗ್ಯಾಸ್ ಕಂಪನಿಯ ಸಂಪೂರ್ಣ ಜವಾಬ್ದಾರಿ  ಇವರ ಮೇಲಿದೆ. ನಮ್ಮ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಕೂಡ ನಮ್ಮ ಮನೆಯ ಸದಸ್ಯರು ಅದೇ ರೀತಿ ಅವರೆಲ್ಲರೂ ಕೂಡ ನಂಬಿಕೆಯನ್ನು ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ಕರುಣಿಗೆ ಹೆಸರಾದ ನಮ್ಮ ಸಿಂಧನೂರಿನಲ್ಲಿ ಕಾರುಣ್ಯ ಆಶ್ರಮವು ಜನತೆಯ ಘನತೆಯನ್ನು ಎತ್ತಿ ಹಿಡಿಯುತ್ತಿದೆ. ಇಂತಹ ಸೇವೆ ಮಾಡುತ್ತಿರುವ ಹರೇಟನೂರು ಹಿರೇಮಠದ ಚನ್ನಬಸವಸ್ವಾಮಿ ಅವರ ಕುಟುಂಬ ಒಳಬಳ್ಳಾರಿಯ ಲಿಂಗೈಕ್ಯ ಶ್ರೀ ಚನ್ನಬಸವ ಮಹಾಶಿವಯೋಗಿಗಳ ಆಶೀರ್ವಾದದಿಂದ ಮತ್ತು ಸಿಂಧನೂರಿನ ಎಲ್ಲಾ ದಾನಿಗಳ ಸಹಾಯ ಸೇವೆಯಿಂದ ಲಿಂಗೈಕ್ಯ ಶ್ರೀ ತಾತನವರ ಆಶೀರ್ವಾದದಿಂದ ಈ ನೊಂದು-ಬೆಂದ ಜೀವಿಗಳ ಸೇವೆ ಮಾಡುತ್ತಿರುವ ಇವರಿಗೆ ನಮ್ಮ ಕುಟುಂಬದಿಂದ ನಿರಂತರವಾಗಿ ಸಹಾಯ ಸೇವೆ ದೊರೆಯುತ್ತದೆ. ಅದೇ ರೀತಿ ನಾನು ಕೂಡ  ನಮ್ಮ ಸಂಸ್ಥೆಯಿಂದ ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ನ್ನು ವಿತರಿಸುತ್ತಿದ್ದೇನೆ. ಮುಂದಿನ ದಿನಮಾನಗಳಲ್ಲಿ ಆಶ್ರಮಕ್ಕೆ ಸ್ವಂತ ನಿವೇಶನ ದೊರಕಿದಾಗ ನಮ್ಮ ಗ್ಯಾಸ್ ಕಂಪನಿಯಿಂದ ದೊಡ್ಡಮಟ್ಟದ ಸೇವೆ ದೊರೆಯುತ್ತದೆ. ಇಂದಿನ ಸಮಾಜದಲ್ಲಿ ಹಿರಿಯ ನಾಗರಿಕರಿಗೆ ನಾವೆಲ್ಲಾ ಗೌರವ ಕೊಟ್ಟು ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದಾಗ ಮಾತ್ರ ಮಾನವ ಜನ್ಮಕ್ಕೆ ಒಂದು ಅರ್ಥ ಸಮಾಜದಲ್ಲಿನ ಎಲ್ಲರೂ ಅರಿತುಕೊಂಡು ಇಂತಹ ಆಶ್ರಮಗಳಿಗೆ ತಂದೆ-ತಾಯಿಗಳನ್ನು ತಳ್ಳಬಾರದು ಈ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡು ಪಡೆಯುವ ಅನಾಥ ಜೀವಿಗಳ ಸಂಖ್ಯೆ ಇಷ್ಟೇ ಇರಬೇಕು ಎನ್ನುವುದು ನನ್ನ ಆಸೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುವ ಇವರೆಲ್ಲರಿಗೂ ಕೂಡ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಆಶ್ರಮದ ಕಾರುಣ್ಯ ಕುಟುಂಬದ ಕೂಸುಗಳ ಆಶೀರ್ವಾದ ಜೊತೆಗೆ ನಮ್ಮೆಲ್ಲರ ಆಶೀರ್ವಾದ ಇವರ ಮೇಲಿರುತ್ತದೆ. ಎಂದು ಮಾತನಾಡಿ ಆಶ್ರಮದಲ್ಲಿ ನಿರಂತರ ಕರ್ತವ್ಯ ನಿರ್ವಹಿಸುತ್ತಿರುವ ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರ ಧರ್ಮ ಪತ್ನಿಯಾದ ಸುಜಾತ ಹಿರೇಮಠ ಇವರುಗಳಿಗೆ ಗೊರೆಬಾಳದ ನಟೇಕಲ್ ಕುಟುಂಬ ಹಾಗೂ ಸಿದ್ದಲಿಂಗೇಶ್ವರ ಇಂಡೇನ್ ಗ್ಯಾಸ್ ಕಂಪನಿ ವತಿಯಿಂದ ಸನ್ಮಾನಿಸಿ ಗೌರವ ಸಲ್ಲಿಸಿ ಹಣ್ಣು ಹಂಪಲುಗಳನ್ನು  ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಟೇಕಲ್ ಕುಟುಂಬದ ಹಿರಿಯರಾದ ಶ್ರೀ ಶಿವನಗೌಡ ನಟೇಕಲ್ ಗೊರೇಬಾಳ. ಶ್ರೀಮತಿ ಸುಮಾ ವೀರೇಶಗೌಡ ನಟೇಕಲ್. ಶ್ರೀಮತಿ ಸುಹಾಸಿನಿ ಸಿದ್ದಲಿಂಗೇಶ್ವರಗೌಡ ನಟೇಕಲ್. ಸಿದ್ದಲಿಂಗೇಶ್ವರ ಗೌಡ ನಟೇಕಲ್. ಕರಿ ಬಸಯ್ಯಸ್ವಾಮಿ ವ್ಯವಸ್ಥಾಪಕರು ಸಿದ್ದಲಿಂಗೇಶ್ವರ ಇಂಡಿಯನ್ ಗ್ಯಾಸ್. ಸಂತೋಷ್ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್. ನಾಗೇಶ ಸ್ವಾಮಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಕಾರುಣ್ಯ ಆಶ್ರಮ. ಗೀತಾ ಕುಲಕರ್ಣಿ ವ್ಯವಸ್ಥಾಪಕರು ಕಾರುಣ್ಯ ಆಶ್ರಮ. ಹಾಗೂ ಸಿದ್ದಲಿಂಗೇಶ್ವರ ಇಂಡಿಯನ್ ಗ್ಯಾಸ್ ಕಂಪನಿಯ  ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ನಂತರ ಶ್ರೀಮತಿ ಸುಮಾ ವೀರೇಶಗೌಡ ನಟೇಕಲ್. ವೀರೇಶಗೌಡ ನಟೇಕಲ್. ಈ ದಂಪತಿಗಳಿಗೆ ಶ್ರೀಮಠ ಸೇವಾಟ್ರಸ್ಟ್ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *