ತಾವರಗೇರಾ ಪಟ್ಟಣವು ವಿಕೆಂಡ್ ಕರ್ಪ್ಯೂ ನಿಮಿತ್ಯ ಜನರಿಗೆ ರಕ್ಷ ಕವಚವಾಗಿ ನಿಂತ ಪೊಲೀಸ್ ಪಡೆ ಹಾಗೂ ಪಟ್ಟಣ ಪಂಚಾಯತಿಯ ಅಧಿಕಾರಿಗಳು….
ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ವಾರಂತ್ಯದ ಕರ್ಪ್ಯೂಗೆ (ಲಾಕಡೌನ್) ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು ಬೆಳಗಿನ ಜಾವೆಯಿಂದ ತಲ್ಲಣ ವಾಗಿರುವ ದೃಶ್ಯ ಕಂಡು ಬಂತು. ರಸ್ತೆಗೆ ಇಳಿದ ಸಾರ್ವಜನಿಕರಿಗೆ ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡಿ. ಸರ್ಕಾರ ನಿಡಿರುವ ಈ ಲಾಕಡೌನ್ ನಮಗಾಗಿ ಅಲ್ಲಾ ನಮ್ಮೆಲ್ಲರ ಓಳಿತುಗಾಗಿ ಹಾಗಾಗಿ ಈ ಫಾಲನೆ ಪ್ರತಿಯೊಬ್ಬರು ಫಾಲಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಕಳಿಸಿದರು. ಆದರೇ ಇಂದು ಬೆಳಂ ಬೆಳಗ್ಗೆ ತಾವರಗೇರಾ ಪಟ್ಟಣದ ಠಾಣೆಯ ಪಿ.ಎಸ್.ಐ. ವೈಶಾಲಿ ಝಳಕಿಯವರು ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿಗಳ ತಂಡದೊಂದಿಗೆ ತಾವರಗೇರಾ ಪಟ್ಟಣದ ಮುಖ್ಯ ರಸ್ತೆಯಾದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಬಂದು ತಮ್ಮ ಪೊಲೀಸ್ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ಧಳದ ಜೊತೆಗೆ ಬಂದು ಸಾರ್ವಜನಿಕರೆ ಮನೆ ಬಿಟ್ಟು ಆಚೆ/ಇಚೆ ಬರಬೇಡಿ ಅಂತಾ ತಿಳಿ ಹೇಳಿ ಕಳುಹಿಸಿ ಕೊಟ್ಟರು, ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಹಾಗೂ ಗ್ರಹ ರಕ್ಷಕ ಧಳದವರು ಕಟ್ಟು ನಿಟ್ಟಿನ ಕ್ರಮದಿಂದ ಇಂದು ತಾವರಗೇರಾ ಪಟ್ಟಣ ವಾರಾಂತ್ಯ ಕರ್ಪ್ಯೂಗೆ ಮೋದಲನೆ ದಿನವೇ ತಲ್ಲಣ ವಾತಾವರಣದಲ್ಲಿದಿದ್ದು ಕಂಡು ಬಂತು.
ವಿಶೇಷವಾಗಿ ತಾವರಗೇರಾ ಪಟ್ಟಣದ ಬುದ್ದಿ ಜೀವಿಗಳು, ತಮ್ಮ ತಮ್ಮ ಕುಟುಂಬವಲ್ಲದೆ, ತಾವು ಇರುವ ಗಲ್ಲಿ ಗಲ್ಲಿಯಲ್ಲೂ ಈ ಓಮಿಕ್ರಾನ ವಿರುದ್ದ ನಾವುಗಳೆ ಹೋರಾಟ ಮಾಡಬೇಕು. ಈಗಾಗಲೆ ಈ ಓಮಿಕ್ರಾನ ಮೋದಲನೇಯ ಅಲೇ ಹಾಗೂ ಎರಡನೇಯ ಅಲೇಗೆ ಜನ ತತ್ತರಿಸಿದ್ದಾರೆ, ಪುನಃಹ ಈ ಮೂರನೇಯ ಅಲೇಯ ಅಬ್ಬರ ಹೇಳಬಾರದ ಸ್ಥೀತಿಯಲ್ಲಿ ಕಾಣುತ್ತಿದ್ದೆವೆ. ಆದಾಗ್ಯೂ ಈ ಮೂರನೇ ಅಲೇಯು ಮಕ್ಕಳ ಮೇಲೆ ದುಷ್ಫರಿಣಾಮ ಬೀರುವ ಸದ್ಯತೆ ಇದೆ, ಹಾಗಾಗಿ ಮಕ್ಕಳನ್ನ ಜಾಗೃತಿಯಿಂದ ನೋಡಿಕೊಳ್ಳಬೇಕು, ಆಗಾಗ ನಮ್ಮೈ ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳಬೇಕು, ಒಟ್ಟಿನಲ್ಲಿ ಜಾಗೃತಿಯೆ ನಮ್ಮ ಅಸ್ತ್ರ, ಜಾಗೃತಿ ಇಲ್ಲದಿದ್ದರೆ ನಾವುಗಳು ಈ (ಓಮಿಕ್ರಾನ) ಕರೋನದ ರೋಗಕ್ಕೆ ತುತ್ತಾಗುತ್ತೇವೆ ಎಂಬ ಜಾಗೃತಿಯ ಮಾತುಗಳು ಗಲ್ಲಿ ಗಲ್ಲಿಯಲ್ಲಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್ ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ಹೆಮ್ಮೇಯಿಂದ ಹೇಳಬೇಕು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ಧಳದ ಕಾರ್ಯ ಶ್ಲಾಘನೀಯವಾದದ್ದು, ತಮ್ಮ ಜೀವನ ಹಂಗ್ಗು ತೋರೆದು ಸಾರ್ವಜನೀಕರ ಹೀತಕ್ಕಾಗಿ ಸೇವೆ ಸಲ್ಲಿಸುವವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.”ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ, ಕೊವಿಡ್ ನಿಯಮ ಪಾಲಿಸಿರಿ. ನಿಮ್ಮ ಅನುಕರಣೆ ಇತರರಿಗೆ ಮಾದರಿಯಾಗಲಿ.
ವರದಿ – ಶ್ಯಾಮ ದಾಸನೂರ