ತಾವರಗೇರಾ ಪಟ್ಟಣದಲ್ಲಿಂದು ಶಬರಿಮಲೈಗೆ ತೆರಳುತ್ತಿರುವ ನೂರಾರು ಭಕ್ತರಿಗೆ ಇರುಮುಡಿ ಪೂಜೆ ಸರಳವಾಗಿ ಆಚರಿಸಲಾಯಿತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಶಬರಿಮಲೈಗೆ ತೆರಳುತ್ತಿರುವ ನೂರಾರು ಭಕ್ತರಿಗೆ ಇರುಮುಡಿ ಪೂಜೆ ಸರಳವಾಗಿ ಜರುಗಿತು. ನಾರಾಯಣಿ ಗುರುಸ್ವಾಮಿ (ಕಲಾಲ) ಇವರು ಇರುಮುಡಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷವು ಸಹ ನೂರಾರು ಭಕ್ತರು ಹರಕೆ ಹೊತ್ತು ಅಯ್ಯಪ್ಪ ಸ್ವಾಮಿ ಧರ್ಶನಕ್ಕೆ ತೆರಳುತ್ತಾರೆ.
ಇದೇ ರೀತಿ ಈ ವರ್ಷವು ಸಹ ತಾವರಗೇರಾ ಪಟ್ಟಣ ಹಾಗೂ ತಾವರಗೇರಾ ಹೋಬಳಿಯ ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ ತಮ್ಮ ಅನುಗುಣಕ್ಕೆ ತಕ್ಕಂತೆ (ಭಕ್ತಿಯ ಆಧಾರದಡಿಯಲ್ಲಿ) ಅಯ್ಯಪ್ಪ ಸ್ವಾಮಿಯ ಮಾಲೆ ಧರಸಿ, ಕಟ್ಟು/ನಿಟ್ಟಿನ ವೃತ್ತ ಆಚರಿಸುವುದು ವಿಶೇಷವಾಗಿದೆ. ತಾವರಗೇರಾ ಪಟ್ಟಣದಲ್ಲಿಂದು ಸಾರ್ವಜನಿಕರಾಗಿ ಈ ಇರುಮುಡಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಿ ಇರುಮುಡಿ ಪೂಜೆ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವುದು ವಿಶೇಷವಾಗಿದೆ. ಹದಿನೆಂಟು ಪ್ರಬಲವಾದ ಸಂಖ್ಯೆ. ಅಷ್ಟಾದಶ ಪುರಾಣಗಳು, ಭಗವದ್ಗೀತೆಯ ಅಷ್ಟಾದಶ ಅಧ್ಯಾಯಗಳ, ಅಷ್ಟಾದಶ ಧಾನ್ಯಗಳು, ಅಷ್ಟಾದಶ ವಿವಾದಪದಗಳು, ಅಷ್ಟಾದಶ ಉಪಚರಗಳು ಇತ್ಯಾದಿ ಶಾಸ್ತನ ಗುಡಿಗಿರುವ ಹಟಿನೆಂಟ್ಟು ಮೆಟ್ಟಲುಗಳ ಜೀವದ ಹದಿನೆಂಟ್ಟು ಆರೋಹಣ ಸ್ಥಾನಗಳು, ಶಾಸ್ತ ಪರಬ್ರಹ್ಮನಾದರೆ, ಯಾತ್ರಿಕ ಜೀವವಾದರೆ ಶಾಸ್ತನ ಬಲಗೈಯಲ್ಲಿರುವ ಚಿನ್ಮುದ್ರೆಯನ್ನು ಅನುಭವಿಸಿ, ಆನಂದವನ್ನು ಪಡೆಯಲು ಈ ಹದಿನೆಂಟ್ಟು ಮೆಟ್ಟಲುಗಳನ್ನು ಏರಿಹೋಗಬೇಕು. ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಲು ಎಲ್ಲರಿಗೂ ಅವಕಾಶ ಸಿಗುವ ಸಾದ್ಯತೆ ಈ ಬಾರಿಯೂ ಇಲ್ಲವಾಗಿದೆ. ಕೋವಿಡ್ ಕಾರಣದಿಂದ ಈ ಬಾರಿಯೂ ಶಬರಿಮಲೆ ಪ್ರವೇಶಕ್ಕೆ ಹಲವು ಷರತ್ತುಗಳಿದ್ದು, ಬಯಸಿದವರಿಗೆಲ್ಲ ದರ್ಶನ ಸಿಗುವುದು ಅನುಮಾನ ಮೂಡಿಸಿದೆ. ಮಂಡಲ ಪೂಜೆ ಮತ್ತು ಮಕರ ಜ್ಯೋತಿ ಸಂದರ್ಭ ಪ್ರತೀ ದಿನ 25 ಸಾವಿರ ಮಂದಿಗೆ ಅವಕಾಶವಿದೆ. ಆದರೆ ಆನ್ ಲೈನ್ ಬುಕಿಂಗ್ ಮಾಡಿದವರಿಗೆ ಮಾತ್ರ ದರ್ಶನ ಭಾಗ್ಯ ಪ್ರಾಪ್ತಿಯಾಗಲಿದೆ. ಹೀಗಾಗಿ ರಾಜ್ಯದ ಲಕ್ಷಾಂತರ ಭಜತ್ರು ಹಿಂದೇಟು ಹಾಕುವಂತಾಗಿದೆ. ಈ ಬಾರಿ ದರ್ಶನಕ್ಕೆ ಲಸಿಕೆಯ ಎರಡೂ ಡೋಸ್ ಪಡೆದ ಪ್ರಮಾಣಪತ್ರ ಅಥವಾ 48 ತಾಸು ಮುನ್ನ ಆರ್.ಟ. ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕಿದೆ. ಈ ರೀತಿ ಹತ್ತು ಹಲವು ಷರತ್ತುಗಳ ಮದ್ಯಯು ಇಂದು ತಾವರಗೇರಾ ಪಟ್ಟಣದಲ್ಲಿಂದು ಸರ್ಕಾರದ ಅಧಿನಿಯಮದ ಪ್ರಕಾರ ಸರಳವಾಗಿ ಇರುಮುಡಿ ಕಾರ್ಯಕ್ರಮವು ಜರುಗಿತು. ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳ ಈ ಶುಭ ಪಯಣವು ಶುಭವಾಗಿರಲೆಂದು ತಾವರಗೇರಾ ಪಟ್ಟಣದ ಗುರು/ಹಿರಿಯರು/ ಹಾಗೂ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ & ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶೂಭ ಹಾರೈಸಿದರು..
ವರದಿ – ಶ್ಯಾಮ್ ದಾಸನೂರು