ಕಾರ್ಮಿಕ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಅಸಂಘಟಿತ ಕಾರ್ಮಿಕರು ಒಗ್ಗೂಡಿ ಹೋರಾಡಿ-ಎಂ.ಗಂಗಾಧರ …
ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ-ಟಿಯುಸಿಐ ವತಿಯಿಂದ ದಿನಾಂಕ : 07.01.2022ರಂದು ಲಕ್ಷ್ಮೀಕ್ಯಾಪ್(ರೌಡಕುಂದಾ)ನ ಸಿಂಧೂರು ಲಕ್ಷ್ಮಣ ಹಮಾಲರ ಸಂಘದ ಸದಸ್ಯರಾದ 32 ಜನರಿಗೆ ಹಮಾಲಿ ಕಾರ್ಮಿಕರ ಲೈಸೆನ್ಸ್ ವಿತರಣೆ ಮಾಡಿ ಮಾತನಾಡಿದ ಶ್ರಮಜೀವಿ ಹಮಾಲರ ಸಂಘದ ಗೌರವಾಧ್ಯಕ್ಷರಾದ, ಎಂ.ಗಂಗಾಧರ, ಕಾರ್ಮಿಕ ವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಅಸಂಘಟಿತ ಕಾರ್ಮಿಕರೆಲ್ಲರೂ ಒಗ್ಗೂಡಿ ಹೋರಾಡಲು ಕರೆ ನೀಡಿದರು. ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಪಢೆಯಲು ಹಾಗೂ ಅಸಂಖ್ಯಾತ ಕಾರ್ಮಿಕರು ತಮ್ಮ ರಕ್ತ ಹರಿಸಿ ಪಡೆದ 44 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ಕೇವಲ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಸದರಿ 4 ಕಾರ್ಮಿಕ ಸಂಹಿತೆಗಳ ವಿರುದ್ಧ ಸಿಂದೂರು ಲಕ್ಷ್ಮಣ ಹಮಾಲಿ ಸಂಘದ ಕಾರ್ಮಿಕರು ಅಖಿಲಭಾರತ ಕಾರ್ಮಿಕರ ಮುಷ್ಕರಗಳು ನಡೆದಾಗ, ಎಲ್ಲರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಕೋವಿಡ್ 3 ನೇ ಅಲೆ ಹೆಸರಿನಲ್ಲಿ ರಾಜ್ಯ ಸರಕಾರ ವಾರದ ಕರ್ಪ್ಯೂ ಮತ್ತು ಲಾಕ್ ಡೌನ್ ವಿಧಿಸಿದ್ದು ಬಡ ಹಾಗೂ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದು ಅವರ ಜೀವನಗಳನ್ನು ಸಂಕಷ್ಟಕ್ಕೆ ತಳ್ಳಿದ್ದು, ಪೂರ್ವಾಪರ ಯೋಚಿಸದೆ, ಮನಸಿಗೆ ಬಂದಂತೆ ಬಿಜೆಪಿ ಸರಕಾರ ರಾಜ್ಯಭಾರ ಮಾಡುವುದನ್ನು ಕೈಬಿಟ್ಟು ಕೊರೋನ ಪರಿಹಾರವಾಗಿ ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ಪರಿಹಾರ ಧನವನ್ನು ಕೂಡಲೇ ಘೋಷಣೆ ಮಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಶ್ರಮಜೀವಿ ಹಮಾಲರ ಸಂಘ ಟಿಯುಸಿಐ ಸಿಂಧನೂರು ಅಧ್ಯಕ್ಷರಾದ, ಮಾಬುಸಾಬ ಬೆಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ, ನಾಗಪ್ಪ ಉಮಲೂಟಿ, ಕಾರ್ಯದರ್ಶಿಯಾದ, ಹೆಚ್.ಆರ್.ಹೊಸಮನಿ, ಖಜಾಂಚಿಯಾದ, ತಿಮ್ಮಣ್ಣ ಯಾದವ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಕ್ಷ್ಮೀಕ್ಯಾಂಪ್(ರೌಡಕುಂದಾ)ನ ಸಿಂಧೂರು ಲಕ್ಷ್ಮಣ ಹಮಾಲಿ ಸಂಘದ ಅಧ್ಯಕ್ಷರಾದ, ಮಹಾದೇವಪ್ಪಗೌಡ, ಉಪಾಧ್ಯಕ್ಷರಾದ, ಖಾಸೀಂಸಾಬ, ಹೊನ್ನೂರುಸಾಬ, ಕಾರ್ಯದರ್ಶಿ ಜೀಲಾನಿಸಾಬ, ರಾಮಣ್ಣ, ಚಿದಾನಂದ, ಸೀತಾನಂದ, ಬ್ರಹ್ಮ, ಸುಭಾನ್, ಬಾಕ್ಲಿ, ಅನ್ವರ್ ಪಾಶಾ, ಶಬ್ಬಿರ್, ಖಾಜಾ ಹುಸೇನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಹೆಚ್.ಆರ್.ಹೊಸಮನಿ ನೆರವೇರಿಸಿದರು. ಮಹಾದೇವಪ್ಪಗೌಡ ಅಧ್ಯಕ್ಷರು ಸಿಂಧೂರು ಲಕ್ಷ್ಮಣ ಹಮಾಲರ ಸಂಘ-ಲಕ್ಷ್ಮೀಕ್ಯಾಂಪ್(ರೌಡಕುಂದ) ಸಿಂಧನೂರು.
ವರದಿ – ಉಪ-ಸಂಪಾದಕೀಯ