ಗ್ಯಾಸ್ ಸಾಗಾಣಿಕೆ ವೆಚ್ಚವನ್ನು ದುಬಾರಿ ಪಡೆದಿರುವ ಗ್ಯಾಸ್ ಏಜೆನ್ಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೋಮವಾರಪೇಟೆ ಆಹಾರ ನಿರೀಕ್ಷಕರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿ ನಲ್ಲಿರುವ ಶ್ರೀ ಗಜಾನನ ಗ್ಯಾಸ್ (ಎಚ್ ಪಿ ಗ್ಯಾಸ್ ) ಹಾಗೂ ಶನಿವಾರಸಂತೆ ಹೋಬಳಿ ಭಾರತ್ ಗ್ಯಾಸ್ ಈ 2 ಗ್ಯಾಸ್ ಏಜೆನ್ಸಿಯವರು ಊರು ಊರುಗಳಿಗೆ ಅವರ ವಾಹನಗಳಲ್ಲಿ ಗ್ಯಾಸ್ ತಂದು ಕೊಡುವ ವ್ಯವಸ್ಥೆ ಇರುತ್ತದೆ ಈ ವ್ಯವಸ್ಥೆಗೆ ದುಬಾರಿ ವೆಚ್ಚ ತೆಗೆದುಕೊಳ್ಳುತ್ತಿದ್ದಾರೆ . ಸರ್ಕಾರದ ಆದೇಶದಂತೆ 5 ಕಿಲೋ ಮೀಟರ್ ವರೆಗೆ ಉಚಿತವಾಗಿ ಮನೆ ಮನೆಗೆ ಗ್ಯಾಸ್ ವಿತರಣೆ ಮಾಡಬೇಕು .5ಕಿಲೋಮೀಟರ ನಂತರ 1 ಕಿಲೋಮೀಟರ್ ಗೆ 1.70 ದಂತೆ ತೆಗೆದುಕೊಳ್ಳಬೇಕೆಂದು ಆದೇಶವಿದ್ದರೂ ಇದನ್ನು ಗಾಳಿಗೆ ತೂರಿರುತ್ತಾರೆ ಗ್ಯಾಸ್ ಏಜೆನ್ಸಿಯವರು . ಸೋಮವಾರಪೇಟೆಯ ಶ್ರೀ ಗಜಾನನ ಗ್ಯಾಸ್ ನವರು (ಎಚ್ ಪಿ ಗ್ಯಾಸ್ ಸೋಮವಾರಪೇಟೆ) ಇವರು 10 ಕಿಲೋ ಮೀಟರ್ ಗಳಿಗೆ ಸಾಗಾಣಿಕೆ ವೆಚ್ಚ 70 ರೂ ವನ್ನು ತೆಗೆದುಕೊಳ್ಳುತ್ತಿದ್ದಾರೆ..ಹಾಗೂ ಶನಿವಾರಸಂತೆಯ ಭಾರತ್ ಗ್ಯಾಸ್ ನವರು 10 ಕಿಲೋಮೀಟರ್ ಗೆ ಸಾಗಾಣಿಕೆ ವೆಚ್ಚವನ್ನು 80 ರೂ ಗಳನ್ನು ಪಡೆಯುತ್ತಿದ್ದಾರೆ .2ಗ್ಯಾಸ್ ಏಜೆನ್ಸಿಯವರು ಸೋಮವಾರಪೇಟೆ ಮತ್ತು ಶನಿವಾರಸಂತೆ ಯವರು ದುಬಾರಿ ವೆಚ್ಚದಲ್ಲಿ ಪಡೆಯುತ್ತಿದ್ದರೆಂದು ಸಾರ್ವಜನಿಕರು ಮಾಹಿತಿ ಕರವೇ ಕಾರ್ಯಕರ್ತರಿಗೆ ನೀಡುತ್ತಾರೆ ಇದರ ಅನ್ವಯ ಗ್ಯಾಸ್ ಏಜೆನ್ಸಿಯವರ ದುಬಾರಿ ಸಾಗಾಣಿಕೆ ವೆಚ್ಚವನ್ನು ಕಡಿವಾಣ ಹಾಕಬೇಕೆಂದು ಸೋಮವಾರಪೇಟೆ ತಾಲ್ಲೂಕು ಆಹಾರ ನಿರೀಕ್ಷಕರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು..ಈ ಸಂದರ್ಭದಲ್ಲಿ ಈ ಮನವಿಯನ್ನು ಸೋಮವಾರಪೇಟೆ ತಾಲ್ಲೂಕು ತಹಸೀಲ್ದಾರ ಕಚೇರಿಯಲ್ಲಿರುವ ಶಿರಸ್ತೇದಾರರು ಆಗಿರುವ ಚಂದ್ರಹಾಸ ಅವರ ಹತ್ತಿರ ಮನವಿ ಸಲ್ಲಿಸಲಾಯಿತು .. ಆಹಾರ ನಿರೀಕ್ಷಕರು 1ವೇಳೆ ಕ್ರಮ ಕೈಗೊಳ್ಳದೆ ಹೋದರೆ ಕರವೇ ಕಾರ್ಯಕರ್ತರಿಂದ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಆಹಾರ ನಿರೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ಗ್ಯಾಸ್ ಅಂಗಡಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಕಾರ್ಯಕರ್ತರು ತಿಳಿದಿರುತ್ತೇವೆ. ಈ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಹಾಗೂ ರಕ್ಷಿತ್ . ಶರತ್ .ಸುಬ್ಬಣ್ಣ . ರಮೇಶ್ .ಮೋಹನ್ ಇನ್ನಿತರರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು…ಇನ್ನು ಸೋಮವಾರಪೇಟೆ ತಾಲ್ಲೂಕಿ ನಲ್ಲಿರುವ ಯಾವುದಾದರೂ ಗ್ಯಾಸ್ ಏಜೆನ್ಸಿಯವರು ಸಾಗಣೆ ವೆಚ್ಚ ಜಾಸ್ತಿ ತೆಗೆದುಕೊಳ್ಳುತ್ತಿದ್ದಾರೆ ಕರವೇ ಕಾರ್ಯಕರ್ತರು ಗೆ ಫೋನ್ ಮಾಡಬಹುದು. ಕರವೇ ಫ್ರಾನ್ಸಿಸ್ ಡಿಸೋಜಾ ಅವರ ಫೋನ್ ನಂಬರ್ 9449255831ಹಾಗೂ 9686095831
ವರದಿ – ಮಹೇಶ ಶರ್ಮಾ