ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ, ಡಾ: ಚಂದ್ರ ಶೇಖರ್ ಪಾಟೀಲರ ನುಡಿ ನಮನ ಕಾರ್ಯಕ್ರಮ ನಡೆಯಿತು….
ದಿನಾಂಕ 11-01-2022 ರಂದು ಕೊಪ್ಪಳ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅಧ್ಯಕ್ಷತೆ ವಹಿಸಿದ್ದರು. ಅನೇಕ ಸಾಹಿತಿಗಳು ವಿವಿಧ ಸಂಘಟಕರು ಭಾಗವಹಿಸಿ ಮಾತನಾಡಿದರು. “ಕೆಲವರು ಬದುಕ್ಕಿದ್ದರು ಸತ್ತಂತೆ. ಇನ್ನೂ ಕೆಲವರು ಸತ್ತರೂ ಬದುಕಿರುತ್ತಾರೆ”. ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಕಾರ್ಪೊರೇಟ್ ಕೋಮುವಾದಿ ಸರ್ವಾಧಿಕಾರಿಗಳು, ದೇಶವನ್ನು ಅಪಾಯದ ಹಂಚಿಗೆ ತಳ್ಳುತ್ತಿದ್ದಾರೆ.ಆರ್ಥಿಕ ಬಿಕ್ಕಟ್ಟು, ಬೆಲೆ ಹೇರಿಕೆಯಿಂದ ಬಹುಸಂಖ್ಯಾತ ದುಡಿಯುವ ಜನರು ತೀವ್ರ ಬಡತನದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಶೇಕಡಾ 50 ರಷ್ಟು ಜನರಿಗೆ ದಿನದ ಊಟದ ಸಮಸ್ಯೆಯೇ ಅತಿ ಮುಖ್ಯವಾಗಿದೆ. ಜನರ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿರುವ ಕೇಂದ್ರ ರಾಜ್ಯ ಸರ್ಕಾರಗಳು, ಕೋಮುವಾದದ ವಿಷವನ್ನು ಹರಡಿ ಜನರ ಐಕ್ಯತೆಯನ್ನು ಛಿದ್ರಗೊಳಿಸಿ ತನ್ನ ಅಧಿಕಾರವನ್ನು ಗಟ್ಟಿಗೊಳಿಸಿಕ್ಕೊಳ್ಳುತ್ತಿವೆ. ಸಾಮಾನ್ಯ ಜನರಿಗೆ ಮಾತ್ರ ಕೋವಿಡ್ ನಿರ್ಬಂಧ ಹೇರಿದ ಸರ್ಕಾರ, 5 ರಾಜ್ಯಗಳ ಚುನಾವಣೆ ಘೋಷಣೆಗೆ ಹಸಿರು ನಿಶಾನೆ ತೋರಿರುವುದು ಖಂಡನೀಯ. ದುಡಿಯುವ ಜನರು ಗುಂಪು ಗೂಡಿದರೆ ಮಾತ್ರ ಸೋಂಕು ಹರಡುತ್ತದೆಯೇ? ಚುನಾವಣೆಯಲ್ಲಿ ಲಕ್ಷಾಂತರ ಜನರು ಸೇರಿದರೆ ಸೋಂಕು ಹರಡುವದಿಲ್ಲವೆ.? ಚುನಾವಣಾ ಆಯೋಗ ದ ನಿರ್ಬಂಧ ದಾಖಲಾತಿಗೆ ಸೀಮಿತ ಎನ್ನುವುದು ಅನೇಕ ಚುನಾವಣೆಗಳಲ್ಲಿ ಜಗಜ್ಜಾಹೀರಾಗಿದೆ. ಕೋವಿಡ್ ಸೋಂಕಿನ ನೆಪದಲ್ಲಿ ಜನರನ್ನು ಕಟ್ಟಿ ಹಾಕುವ ರಾಜಕೀಯ ನಡೆಯುವುದಿಲ್ಲ. ಕರ್ನಾಟಕದಲ್ಲಿ ಸಚಿವ ಅಶ್ವತ್ಥ ನಾರಾಯಣ ಮತ್ತು ಸಂಸದ ಡಿ. ಕೆ. ಸುರೇಶ್ ಮಧ್ಯದಲ್ಲಿ ನಡೆದ ಗಂಡುಸ್ಥಾನದ ರಾಜಕೀಯ ಮಹಿಳಾ ಸಮುದಾಯವನ್ನು ಅವಮಾನಿಸುತ್ತಿದೆ. ಮಹಿಳೆಯರು ಗಂಡಿಗೆ ಸಮನಾಳಲ್ಲ ಎನ್ನುವ ರಾಜಕೀಯ ತಾರತಮ್ಯ ವನ್ನು ಖಂಡಿಸಿ ಹೋರಾಡಬೇಕಾಗಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಚಂಪಾರಂತಹ ನಾಯಕರ ಅವಶ್ಯಕತೆ ಅತ್ಯಂತ ಅವಶ್ಯಕ.ದುರಂತವೆಂದರೆ ದೇಶದಲ್ಲಿ ಇಂತವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿ ಯುವ ಜನರು ಚಂದ್ರ ಶೇಖರ್ ಪಾಟೀಲರ ಆಶಯಗಳನ್ನು ಮುಂದುವರಿಸಬೇಕಾಗಿದೆ. ಯುವ ಸಾಹಿತಿಗಳು ಮತ್ತು ಬರಹಗಾರರು ನೂರಾರು ಚಂಪಾರನ್ನು ತಯಾರು ಮಾಡುವ ದೃಢ ಸಂಕಲ್ಪ ಮಾಡಬೇಕಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿಗಳು ಚಂಪಾರವರ ಬಹುಮುಖಗಳ ವಿಚಾರಗಳನ್ನು ಹಂಚಿಕೊಂಡರು.ಎ.ಎಂ.ಮದರಿ,ಕೆ.ಬಿ.ಬ್ಯಾಳಿ,ಮಹಾಂತೇಶ ಮಲ್ಲನಗೌಡ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಡಿ. ಹೆಚ್. ಪೂಜಾರ, ಈಶ್ವರ ಹತ್ತಿ ಇತರರು ಮಾತನಾಡಿದರು ಪ್ರಕಟಣೆ/ಕರೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೊಪ್ಪಳ.
ವರದಿ – ಸಂಪಾದಕೀಯ