ಐನಾಪುರ: ನಮ್ಮಸಮಾಜಕ್ಕೆ ರಾಜಕೀಯ ಅಧಿಕಾರ ಎಂಬುವದು ತುಂಬಾ ಅತ್ಯವಶ್ಯಕವಾಗಿದ್ದು ……
ಸಮಾಜದ ಜನರು ನಿಮ್ಮಗೆ ಅಧಿಕಾರವನ್ನು ಕೊಡುತ್ತಿದ್ದಾರೆ ಅದನ್ನು ಸದುಪಯೋಗ ಮಾಡಿ ಕೊಂಡು ಸಮಾಜದ ಜನರಿಗೆ ಸರಕಾರಿ ಸೌಲಭ್ಯ ಮುಟ್ಟಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅಥಣಿಯ ಖ್ಯಾತ ನ್ಯಾಯವಾದಿಗಳಾದ ರಾಜಕುಮಾರ ಪಾಂಡವ ಹೇಳಿದರು. ಅವರು ಐನಾಪುರ ಪಟ್ಟಣ ಹರಳಯ್ಯಾ ಸಮಾಜ ಮಂದಿರದಲ್ಲಿ ದಿ18ರಂದು ಭಾನುವಾರ ಅಥಣಿ ತಾಲುಕಾ ಶಿವಶರಣ ಹರಳಯ್ಯಾ ಪ್ರತಿಷ್ಠಾನದ ವತಿಯಿಂದ ಐನಾಪುರ ಪಟ್ಟಣ ಪಂಚಾಯತಗೆ ಸಮಾಜ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ ಪ್ರತಿಷ್ಠಾನ ವತಿಯಿಂದ ಸನ್ಮಾನ ಮಾಡುವ ಉದ್ದೇಶ ಏನೆಂದರೆ ಈ ಮಾನವ ಜನ್ಮದಲ್ಲಿ ಹುಟ್ಟು ಸಾವು ನಿಶ್ಚಿತ ಅದರ ನಡುವೆ ಇರುವ ಜೀವನದಲ್ಲಿ ಸಮಾಜ ಸಲುವಾಗಿ ಕೆಲಸಗಳನ್ನು ಮಾಡಿ ಸಮಾಜ ಏಳಿಗ್ಗೆ ಶ್ರಮಿಸ ಬೇಕು ಎಂದು ಹೇಳಿದರು. ಇನ್ನೊರ್ವ ಅತಿಥಿಗಳಾಗಿ ಹರಳಯ್ಯಾ ಸಮಾಜದ ಮುಖಂಡರಾದ ಶಿವಾನಂದ ಸೌದಾಗರ ಮಾತನಾಡಿ ಇ ಗೆಲುವು ತಮ್ಮ ಗೆಲುವಲ್ಲ ಚುನಾವಣೆಯಿಂದ ಆರಿಸಿ ಬರಲು ಸವಲತ್ತು ನೀಡಿರುವ ಬಾಬಾಸಾಹೇಬ ಅಂಬೇಡ್ಕರ ಗೆಲುವು. ಮೊದಲು ಪರಿಸ್ಥಿತಿ ಹೇಗಿತೆಂದರೆ ಒಂದು ಬಾವಿಯಿಂದ ನೀರು ಕುಡಿಯಬೇಕಾದರೆ ಯೋಚಿಸಬೇಕಾದ ದಿನವಿತ್ತು ಆದರೆ ಸಂವಿಧಾನ ಮತ್ತು ಸರಕಾರಗಳು ನಮ್ಮನು ರಕ್ಷಿಸುತ್ತಾ ಬಂದಿವೆ.ಆದರು ನಮ್ಮ ಮೇಲೆ ದಬ್ಬಾಳಿಕೆ ಅಸಶ್ಪ್ರತೆ ಆಗ ಆಗುತ್ತಿವೆ.ಅಂತಹುಗಳು ತಮ್ಮ ಕಣ್ಣಿಗೆ ಕಾಣಿದರೆ ಅದರ ವಿರುದ್ದ ಹೋರಾಟ ಮಾಡಿ ಮತ್ತು ತಮ್ಮ ಮಕ್ಕಳಿಗೆ ಹೋರಾಟ ಮನೋಭಾವ ಬೆಳಸಬೇಕು ಎಂದರು. ಹರಳಯ್ಯಾ ಸಮಾಜದ ವಾರ್ಡನಂ 9,ಧರೇಪ್ಪಾ ಹರಳೆ,ವಾರ್ಡನಂ 8 ರಾಜು ಹರಳೆ,ವಾರ್ಡನಂ12ರಿಂದ ಜಯಶ್ರೀ ಹರಳೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಪ್ರತಿಷ್ಠಾನದ ವತಿಯಿಂದ ಶಾಲು ಹೊದಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಹಾದೇವ ತಕ್ಕತರಾವ ,ವಿಜಯ ಹರಳೆ,ಪಪಂ ಮಾಜಿ ಅಧ್ಯಕ್ಷ ರಾದ ಮನಿಷಾ ಹರಳೆ,ಧರೇಪ್ಪಾ ಹರಳೆ ನಾಮದೇವ ಹರಳೆ,ಈಶ್ವರ ಹರಳೆ, ಸಂಜು ಹರಳೆ, ಸೇರಿದಂತೆ ಅನೇಕರು ಉಪಸ್ಥಿತರಿದರು.
ವರದಿ – ಸೋಮನಾಥ ಹೆಚ್ ಎಮ್