ಕನ್ನಡ ಸುಧೆಯೊಳ್ ಲೀನಾ…..
ಅಜಿಲರೆಂಬ ಅರಸರಿವರು
ತುಳುನಾಡಿನ ಮನೆತನದವರು
ವೇಣುಾರಿಂದ ಅಳದಂಗಡಿಯುದ್ದಕು
ಕರುನಾಡಲಿ ಮೆರೆದಿಹರು |
ಇವರಾಳ್ವಿಕೆಯಾ ಸಂಸ್ಥಾನಕದುವೆ
ಪುಂಜಳಿಯೆಂಬ ಹೆಸರಿತ್ತು
ಸಾಳುವ ವಂಶಜರೆಂಬಿವರು
ಜೈನಧಮ೯ವನವಲಂಭಿಸಿಹರು |
ನಾಲ್ಕನೇ ವೀರತಿಮ್ಮರಾಜರಸನು
ವೇಣುಾರಿನ ಗೊಮ್ಮಟ ಸ್ಥಾಪನೆ
ಗೈದಿಹನು ರಾಣಿಯರಿಬ್ಬರು
ಚೈತ್ಯಾಲಯವನು ಕಟ್ಟಿಹರು |
ಅಳದಂಗಡಿಯೊಳು ಅರಮನೆ
ಜೈನಬಸದಿ, ಅಧ೯ನಾರೀಶ್ವರ
ಸೋಮನಾಥ ದೇಗುಲಗಳವು
ತಲೆಯೆತ್ತಿ ಇಂದಿಗೂ ಮೆರೆದಿಹುದು |
ವೇಣುಾರಿನ ಅಜಿಲರ ಅರಮನೆ
ಏಳುಪ್ಪರಿಗೆಯ ಹೊಂದಿತ್ತು
ಅಲ್ಲಿನ ಕಲ್ಲಿನಾನೆಯ ಕುರುಹದು
ಇತಿಹಾಸವನು ಹೇಳುವುದು |
ಹೈದರನ ಕಾಲಕೆ ಅಜಿಲರ
ಆಳ್ವಿಕೆ ಕೊನೆಯಾದರು ಸಹ
ಅಳದಂಗಡಿ-ಬಂಗಾಡಿಗಳಲಿ
ಅಜಿಲರ ವಂಶಜಹಿರೆಂಬುದು
ಕರುನಾಡ ಹೆಮ್ಮೆಗೆ ಸಾಕ್ಷಿಯದು || ✍ ಡಾ” ಸುಧಾ ಜೋಷಿ – 94482 33119 ಚಿತ್ರ: ಲೀಲಾ