ಸ್ವಚ್ಛತೆ ಅರಿವು ಮೂಡಿಸಲು ಬೀದಿಬದಿ ನಾಟಕ ಪ್ರದರ್ಶನ…..
ಸಿರುಗುಪ್ಪ : ನಗರದ ಆದೋನಿ ರಸ್ತೆಯ ಹಳೇ ಸಾಯಿಬಾಬಾ ಚಿತ್ರಮಂದಿರದ ಹತ್ತಿರದ ಬಯಲು ಜಾಗದಲ್ಲಿ ನಗರಸಭೆಯ ವತಿಯಿಂದ ಅರುಂದತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಮೂಲಕ ಬೀದಿಬದಿ ನಾಟಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ನಗರದ ಸ್ವಚ್ಛತೆಯ ಹಾಗೂ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಾಗೃತಿ ನಾಟಕ ಪ್ರದರ್ಶನದಲ್ಲಿ ಪ್ರತಿಯೊಬ್ಬ ನಾಗರೀಕರು ತಮ್ಮ ಮನೆಗಳಿಂದ ಘನತ್ಯಾಜ್ಯ ವಿಲೇವಾರಿ ವಾಹನಗಳಿಗೆ ಕಸ ವಿಲೇವಾರಿ ಮಾಡುವ ಮುನ್ನ ಹಸಿಕಸ, ಒಣಕಸ, ಹಾಗೂ ಅಪಾಯಕಾರಿ ವಸ್ತುಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದು, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ನೀರಿನ ಆಕರಗಳನ್ನು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸಂರಕ್ಷಿಸುವುದರ ಬಗ್ಗೆ ಅರುಂದತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಸುಮಾ ಅವರ ತಂಡದಿ೦ದ ಪ್ರದರ್ಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ನಗರಸಭೆ ನೈರ್ಮಲ್ಯ ಮೇಸ್ತ್ರಿ ಶ್ರೀನಿವಾಸುಲು, ವಾಹಿನಿ ಅಭಿವೃದ್ದಿ ಸಂಸ್ಥೆಯ ಸಂಯೋಜಕಿ ಪಾರ್ವತಿ, ಅರುಂದತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಕಲಾ ತಂಡದವರಾದ ಸುಮಾ, ಮಹಾಂತೇಶ್, ಆಶಾ, ನಾಗರಾಜ, ಪಂಪ, ಶೇಖರ್, ಸುಕನ್ಯಾ, ಸೇರಿಂದ೦ತೆ ಸಾರ್ವಜನಿಕರು ಇದ್ದರು.
ವರದಿ – ಉಪ-ಸಂಪಾದಕೀಯ