ರಾಜು ಬಿ.ಆರ್. ಗೆ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ…..
ಕೊಪ್ಪಳ, ಜ. ೨೫: ನಗರದ ಖಾಸಗಿ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರ, ಉಪನ್ಯಾಸಕ ರಾಜು ಬಿ. ಆರ್. ಅವರಿಗೆ ಪತ್ರಿಕೋದ್ಯಮ ಸೇವೆ ಗುರುತಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬಿಜಾಪುರ ಜಿಲ್ಲೆಯಿಂದ ಕೊಡಮಾಡುವ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಿ. ಗೊಮಡಬಾಳ ಅವರು ತಿಳಿಸಿದ್ದಾರೆ. ಜನೇವರಿ ೩೦ ರಂದು ಸಂಜೆ ೫.೩೦ಕ್ಕೆ ಮುದ್ದೆಬಿಹಾಳ ನಗರದಲ್ಲಿ ಎಸ್.ವಿ. ಪ್ರೌಢ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ. ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ. ಎನ್. ನಟರಾಜ, ಯುವ ಸಂಘಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ. ಎಸ್. ಬಾಲಾಜಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಯುವ ಸಂಘಗಳ ಒಕ್ಕೂಟದ ಬಿಜಾಪುರ ಜಿಲ್ಲಾ ಅಧ್ಯಕ್ಷ ಪುಂಡಲೀಕ ಮುರಾಳ ಮುಂತಾದವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಜ್ಯದ ೩೩ ಜನ ಸಾಧಕರಿಗೆ ಮತ್ತು ೨ ಸಂಘಟನೆಗಳಿಗೆ ಪ್ರಶಸ್ತಿ ನೀಡುವರು. ಪರಿಚಯ : ರಾಜು ಬಿ. ಆರ್. ತಂದೆ ದಿ.ರಾಮಚಂದ್ರ ಬಿ. ಅವರ ಹುಟ್ಟೂರು ರಾಯಚೂರು. ಸ್ಪಿಲ್ ಕಾಲೇಜ್ ಜರ್ನಲಿಸಂ ಪದವಿ ಕಾಲೇಜಿನಲ್ಲಿ ಪದವಿ (೨೦೦೭) (ರಾಯಚೂರಿನ ಪ್ರತಿಷ್ಠಿತ ಸುದ್ದಿಮೂಲ ಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ ಅವರ ಕಾಲೇಜು) ಮತ್ತು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ (೨೦೦೯) ಪಡೆದು. ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಕೊಪ್ಪಳ ಜಿಲ್ಲಾ ವರದಿಗಾರರಾಗಿ, ಗಂಗಾವತಿ, ಬಳ್ಳಾರಿ, ಕೊಪ್ಪಳ, ಅಳವಂಡಿ, ಗುಲ್ಬರ್ಗಾದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಸಿದ್ದಾರೆ. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ವಿಭಾಗದ ಬಿಓಇ ಅಧ್ಯಕ್ಷ, ಸದಸ್ಯನಾಗಿ ಸೇವೆ ಮಾಡಿದ್ದಾರೆ. ಹವ್ಯಾಸಿ ವಿಡಿಯೋಗ್ರಾಫಿ, ಫೋಟೊಗ್ರಾಫಿಯಾಗಿರುವ ಅವರು ಉಜರೆ, ತಿರುಪತಿ, ಧಾರವಾಡ, ಮೈಸೂರು, ಶಿವಮೊಗ್ಗ ಪತ್ರಿಕೋದ್ಯಮ ಪದವಿ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಸಂಶೋಧನಾ ವಿಚಾರ ಸಂಕಿರಣಗಳಲ್ಲಿ ವಿವಿಧ ವಿಷಯಗಳ ಮಂಡನೆ ಮಾಡಿದ್ದಾರೆ. ಸುದ್ದಿ ವಾಹನಿ, ಮನರಂಜನೆ ವಾಹಿನಿಗಳಿಗೆ ನೀಡುವ ಟಿ.ಆರ್.ಪಿ ಸಂಸ್ಥೆ ಟಾಮ್ ಮೀಡಿಯಾ ರೀಸರ್ಚನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ವರದಿ – ಉಪ-ಸಂಪಾದಕೀಯ