ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರದ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳರವರು ನೆರವೇರಿಸಿದರು….
ಇಂದು ಗಂಗಾವತಿಯ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ 73ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರದ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳರವರು ನೆರವೇರಿಸಿದರು. ವಿಶ್ವದ ಶ್ರೇಷ್ಠ ಸಂವಿಧಾನ ವಾದ ಭಾರತದ ಸಂವಿಧಾನ ರಕ್ಷಣೆಗಾಗಿ ನಾವುಗಳೆಲ್ಲ ಕಟಿಬದ್ಧರಾಗಿ ನಿಲ್ಲಬೇಕು ಎಂದು ಕರೆಕೊಟ್ಟರು. ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ಮಾತನಾಡಿ- ರಕ್ತವನ್ನು ಕೊಟ್ಟಾದರೂ ಸಂವಿಧಾನವನ್ನು ರಕ್ಷಣೆ ಮಾಡಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಿದ್ಧರಿದ್ದಾರೆ ಎಂದರು. ಕನಕಗಿರಿ ಕ್ಷೇತ್ರದ ಸಂಚಾಲಕರಾದ ರಮೇಶ್ ಕೋಟಿ ಮಾತನಾಡಿ ಶುಭಾಶಯಗಳನ್ನು ಕೋರಿದರು. ಪರಶುರಾಮ್ ಒಡೆಯರು, ಪ್ರಕಾಶ್ B.ವಕೀಲರು, ರೇಣುಕ ಬಸವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹನುಮೇಶ್ ನಾಯಕ್. ಭೋಗೇಶ್. ಬಸವರಾಜ್ ನಾಯಕ್. ಅಯ್ಯಮ್ಮ ,ನೀಲಮ್ಮ ಇಂಜಿನಿಯರ್ ಮಣಿಕಂಠ, ವಿರುಪಣ್ಣ ,ಬಸ್ಸಮ್ಮ, ಚಂದ್ರಶೇಖರ ವಗ್ಗ, ಚಂದ್ರಶೇಖರ ನಿಸರ್ಗ, ಮಹೇಶ್. ಹನುಮೇಶ್. ಲಕ್ಷ್ಮಣ್. ಸಂಗಮೇಶ್. ವೀರೇಶ್. ರಾಘವೇಂದ್ರ. ಚನ್ನಬಸವ ಜೆಕಿನ, ಯಲಬುರ್ಗಾ ತಾಲೂಕು ಸಂಚಾಲಕರಾದ ಲೋಹಿತ್, ಶಿವರಾಜ್ ಪೂಜಾರಿ, ದೊಡ್ಡಬಸಪ್ಪ ,ಮಹಿಬೂಬ್, ಗರಿಬನ , ಕಿಶೋರ್ ಸಿಂಧೆ, ಬಂದೆ ಸಾಬ್. ಇತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ – ಸಂಪಾದಕೀಯ