ಜುಮಲಾಪೂರ ಪ್ರೌಢಶಾಲೆಯಲ್ಲಿ ಸರಳವಾಗಿ 73 ನೇ ಗಣರಾಜ್ಯೋತ್ಸವ ಸರ್ಕಾರಿ ….

Spread the love

ಜುಮಲಾಪೂರ ಪ್ರೌಢಶಾಲೆಯಲ್ಲಿ ಸರಳವಾಗಿ 73 ನೇ ಗಣರಾಜ್ಯೋತ್ಸವ ಸರ್ಕಾರಿ ….

 

ಸರಕಾರಿ ಪ್ರೌಢಶಾಲೆ ಜುಮಲಾಪುರ ಇಲ್ಲಿ ಇಂದು 73ನೇ ಗಣರಾಜ್ಯೋತ್ಸವ ಆಚರಿಸಲಾಯಿತು..ಮುಖ್ಯಗುರುಗಳಾದ ಶ್ರೀ ಸೋಮನಗೌಡ ಪಾಟೀಲ್ ರಾಷ್ಟ್ರಧ್ವಜ ಆರೋಹಣ ನೆರವೇರಿಸಿದರು ಹಾಗೂ ರಾಷ್ಟ್ರ ಪ್ರೇಮವು ನಮ್ಮೆಲ್ಲರ ಆದ್ಯ ಗುರಿಯಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಶಾಲೆಗೆ 100 ಊಟದ ತಟ್ಟೆಗಳನ್ನು ದೇಣಿಗೆಯಾಗಿ ನೀಡಿದ ದಾನಿಗಳಾದ ಶ್ರೀಮತಿ ಚನ್ನಮಲ್ಲಮ್ಮ ಶರಣಗೌಡ ಗೊರೆಬಾಳ (ಮುಖ್ಯ ಅಡುಗೆಯವರು) ಇವರನ್ನು ಶಾಲೆ ವತಿಯಿಂದ ಹಾಗೂ ಗ್ರಾಮದ ಪರವಾಗಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ವರ್ಷದ ಎಸೆಸೆಲ್ಸಿ ಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಇದಕ್ಕೂ ಮೊದಲು ಧ್ವಜ ವಂದನೆಯನ್ನು ಶ್ರೀ ಹಂಪಯ್ಯ ಶಿಕ್ಷಕರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ್ ಕೊರ್ಲಿ, ಶ್ರೀ ರಾಮಣ್ಣ ಹಡಗಲಿ , ಶ್ರೀ ಮಹದೇವಪ್ಪ ಗಂಗಾಮತ, ಶ್ರೀ ಹನುಮಂತಪ್ಪ ಚನ್ನದಾಸರ ಸೇರಿದಂತೆ ಅನೇಕ ಗಣ್ಯರು  ಭಾಗವಹಿಸಿದ್ದರು. ಶ್ರೀಮತಿ ಅಕ್ಕಮ್ಮ ಶಿಕ್ಷಕಿ ಉಪನ್ಯಾಸ ನೀಡಿದರು.ಹಳೆಯ ವಿದ್ಯಾರ್ಥಿಗಳ ಪರವಾಗಿ ಶ್ರೀ ಚಂದ್ರಶೇಖರ್ ಮೇರೆ ಕೋರ್ ಮಾತನಾಡಿದರು. ಊರಿನ ಗಣ್ಯರು ಹಳೆಯ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಚಿದಾನಂದಪ್ಪ ಶಿಕ್ಷಕರು ನಿರ್ವಹಿಸಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *