ಪ್ರಥಮ ಜಿಲ್ಲಾ ಚುಟುಕು ಸಮ್ಮೇಳನ ೨೯-೩೦ ರಂದು ಸಸ್ತಾಪೂರ ಯಲ್ಲಾಲಿಂಗ ಮಠದಲ್ಲಿ.

Spread the love

ಪ್ರಥಮ ಜಿಲ್ಲಾ ಚುಟುಕು ಸಮ್ಮೇಳನ ೨೯೩೦ ರಂದು ಸಸ್ತಾಪೂರ ಯಲ್ಲಾಲಿಂಗ ಮಠದಲ್ಲಿ.

ಹುಮನಾಬಾದ/ಬಸವಕಲ್ಯಾಣ : ಸಸ್ತಾಪೂರದ ಯಲ್ಲಾಲಿಂಗ ಮಠದಲ್ಲಿ ಯಲ್ಲಾಲಿಂಗೇಶ್ವರರ ೩೬ ನೇ ಪುಣ್ಯ ಸ್ಮರಣೆ ಮತ್ತು ಮಹಾದೇವಿತಾಯಿಯವರ೫೭ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸದ್ಗುರು ಯಲ್ಲಾಲಿಂಗ ಟ್ರಸ್ಟ ಆಶ್ರಯದಲ್ಲಿ ಜಿಲ್ಲಾ ಪ್ರಥಮ ಚುಟುಕು ಸಾ ಹಿತ್ಯ ಸಮ್ಮೇಳನವನ್ನು ಯುವ ಸಾಹಿತಿ,ಚುಟುಕು ಕವಿ ಡಾ.ಉಮೇಶ ಬಾಬು ಮಠದ( ಉಬಾಮ)  ಅವರ ಸವಾಧ್ಯಕ್ಷತೆಯಲ್ಲಿ ಜರುಗುವದೆಂದು ಸಾಹಿತಿ, ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಮತ್ತು ಜಿಲ್ಲಾ ಕಚುಸಾಪ ಅಧ್ಯಕ್ಷ ಸಂಗಮೇಶ ಜವಾದಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸರಳ ಸಮಾರಂಭ ಏರ್ಪಡಿಸಿ ಸಾಹಿತ್ಯಾಸಕ್ತರಿಗೆ,ಭಕ್ತಾದಿಗಳಿಗೆ ನಿರಾಸೆ ಆಗದೇ ರೀತಿಯಲ್ಲಿ ನಿಯಮ ಪಾಲಿಸಲಾಗುವದೆಂದು ಹೇಳಿದ್ದಾರೆ.  ಮೆರವಣಿಗೆ, ಸಮ್ಮೇಳನದ ಉದ್ಘಾಟನೆ, ಸಾಹಿತ್ಯ ಗೋಷ್ಠಿ,ಚುಟುಕು ಗೋಷ್ಠಿ, ಸಂವಾದ,ವಿಶೇಷ ಸನ್ಮಾನ,ವಿವಿಧ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭ ಜರುಗಲಿದೆಯೆಂದು ತಿಳಿಸಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ.ಉಬಾಮ ಪರಿಚಯ. ಉಬಾಮ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಉಮೇಶ ಬಾಬು ಮಠದ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಟಿ.ಕಲ್ಲಹಳ್ಳಿಯ ಬಸಯ್ಯ ಮತ್ತು ಏಕಾಂತಮ್ಮರ ಮಗನಾಗಿ ೧೯೮೪ ರಲ್ಲಿ ಜನಿಸಿ, ಎಂ.ಎ.,ಬಿಇಡಿ,ಪಿಜಿಸಿಟಿಸಿ,ಪಿಜಿಡಿಐಎಎಂ ಪದವೀಧರರು.ಸದ್ಯ ಬೀದರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ‌.ಇವರ ಸಾಹಿತ್ಯ ಆಸಕ್ತಿ ವಿದ್ಯಾರ್ಥಿದೆಸೆಯಿಂದಲೇ ಬಂದಿದೆ.ಕಾವ್ಯ,ಚುಟುಕು,ಲೇಖನ ಬಿಡಿಬಿಡಿ ಯಾಗಿ ಪ್ರಕಟಗೊಂಡಿವೆ.ವಸುಧೆಯೊಳಗಿನ ಆಭ ೯ಟ ೨೦೧೮ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಿಲ ಕೃತಿಗೆ ಪ್ರೋತ್ಸಹ ಧನ ಪಡೆದು ಪ್ರಕಟ.ಚಿಗುರೆಲೆಗಳು ಚುಟುಕು ಸಂಕಲನ,ಬೆವಸಿ ೯ ಬದುಕಿನ ಬರಹಗಳು ಗದ್ಯಲೇಖನ ಸಂಕಲನ, ಮಂಗಲಾರತಿ ಪದಗಳು ಇವರು ನಾಲ್ಕು ಪುಸ್ತಕಗ ಳನ್ನು ಹೊರತಂದಿದ್ದಾರೆ.ಇನ್ನು ಕನಕದಾಸರ ಕುರಿ ತ ಕಾವ್ಯ ಸಂಗ್ರಹ,ವೈಚಾರಿಕ ವಿಮರ್ಶೆ ಮತ್ತು ಚು ಟುಕು ಸಂಕಲನ ಪ್ರಕಟಣೆಗೆ ಸಿದ್ಧವಾಗಿವೆ. ಸ್ವ ಸಹಾಯ ಗುಂಪುಗಳನ್ನು ರಚಿಸಿ ಮಾರ್ಗದ ರ್ಶನ ಪ್ರೇರಣೆ ತನ್ನ ಸುತ್ತಮುತ್ತಲಿನ ಜನರಿಗೆ ಸ ಹಾಯ ಸಹಕಾರ ೨೦೦೦ದಿಂದಲೇ ನೀಡಿ ತಾವು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು.ಮೈ ರಾಡ ಸಂಸ್ಥೆಯಲ್ಲಿ ಕಾರ್ಯಕರ್ತನಾಗಿ೧೯ ಹಳ್ಳಿಗ ಳಲ್ಲಿ೬೮ ಸ್ವ ಸಹಾಯ ಸಂಘ ಸ್ಥಾಪಿಸಿದ ಕೀರ್ತಿ ಇ ವರಿಗಿದೆ. ಚಿತ್ರದುರ್ಗದಲ್ಲಿ ೨೦೦೫ರಿಂದ ನಿರ್ಮಲ ನಗರ ಯೋಜನೆಯಲ್ಲಿ, ಎಚ್.ಐ.ಇ.ಏಡ್ಸ,ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ ಸವಾಲು,ಜಲಾಯನ ಅಭಿವೃದ್ಧಿ ಇಲಾಖೆ,ಶೋಷಿತ,ದುರ್ಬಲ ಸಮುದಾ ಯಗಳ ಅಪಾಯದ ಅಂಚಿನಲ್ಲಿರುವವರಿಗೆ ಆಶ್ರ ಯ ವದಗಿಸಿದ್ದಾರೆ.ಆರೋಗ್ಯ ತರಬೇತಿ,ಚೈತನ್ಯ ಹಣಕಾಸು ಸಂಸ್ಥೆಯ ಮೂಲಕ ನಾಲ್ಕು ಕೋಟಿ ಮೀರಿ ಸಾಲ ಕೊಡಿಸಿದ್ದಾರೆ.ಉಚಿತ ಆರೋಗ್ಯ ತರಬೇತಿ,ಡೇಟ್ ಚಾರಿಟೇಬಲ್ ಸೊಸೈಟಿ ಇಂತಹ ಹಲವಾರು ಸಂಸ್ಥೆ ಮೂಲಕ ಜನಸಾಮಾನ್ಯರ ಜೀ ವನಕ್ಕೆ ಸಹಾಯ ಹಸ್ತನೀಡಿದ್ದಾರೆ.ಸಾಹಿತ್ಯಿಕ ಸಂಘ ಸಂಸ್ಥೆಗಳಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬೆ,ಕಸಾಪ,ರಂಗ  ಸೌರಭ ಕಲಾ ಸಂಘ,ಚಿನ್ಮೂಲಾದ್ರಿ ಸಾಹಿತ್ಯ ವೇದಿ ಕೆ,ಶ್ರೀಕಲ್ಲೇಶ್ವರ ವಿದ್ಯಾ ಸಂಸ್ಥೆ,ಪರಿಪೂರ್ಣ ಚಾರಿಟೆಬಲ್ ಟ್ರಸ್ಟದಲ್ಲಿ ಹಾಗೂ  ಹುಮನಾಬಾದ ತಾಲೂಕಾ ಕರುನಾಡು ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿ ಬೀದರ ಜಿಲ್ಲೆಯಾದ್ಯಂ  ತ ಚಿರಪರಿಚಿತ ಸಾಹಿತ್ಯ ಸಂಘಟನೆಗಾರ. ಇವರು ಅನೇಕ ಕವಿಗೋಷ್ಠಿ, ವಿಚಾರ ಸಂಕಿರಣ,ಉಪನ್ಯಾಸ ಕೊಟ್ಟಿದ್ದಾರೆ.ಉತ್ತಮ ಸಂ ಪನ್ಮೂಲ ವ್ಯಕ್ತಿ,ಪರಣಿತ ತರಬೇತುದಾರ, ನೆಹರು ಪ್ರಶಸ್ತಿ,ಬಸವ ಜ್ಯೋತಿ,ಸುವರ್ಣ ಕರ್ನಾಟಕ ಸೇವಾ,ಕರ್ನಾಟಕ ಭೂಷಣ, ಸಮಾಜ ಮುಖಿ,ಸಮಾಜ ಸೇವಾ ರತ್ನ, ಧರಿ ನಾಡುಸಿರಿಗನ್ನಡ,ಕನ್ನಡಾಂಬೆ ಸಾಹಿತ್ಯ ಸಿರಿ,ಜಿಲ್ಲಾ ಯುವ ಪ್ರಶಸ್ತಿ,ಮಹಾತ್ಮ ಗಾಂಧಿ ಸದ್ಬಾವನಾ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯದಿಂದ ಕನಕದಾಸರ ಕೀರ್ತನೆಗಳಲ್ಲಿ ವೈಚಾರಿಕ ಪ್ರಜ್ಞೆ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಗೌರವ ಹೊಂದಿದ್ದಾರೆ.ತಮ್ಮ ಪತ್ನಿ ವಿಜಯಕುಮಾರಿ, ಶಾರ್ವರಿ ಸಿದ್ಧಾರ್ಥ ಇಬ್ಬರು ಮಕ್ಕಳು ಚಿಕ್ಕ ಚೊಕ್ಕ ಕುಟುಂಬದಲ್ಲಿ ಕ್ರೀಯಾಶೀಲತೆ, ಸರಳ, ಸಜ್ಜ ನ, ದುಡಿಯುವ ಹಂಬಲ,ಸಾಹಿತ್ಯ,ಸಮಾಜದ ಕಡೆ ತುಡಿತ ಮನೋಬಲಕ್ಕೆ ಜಿಲ್ಲಾ ಚುಟುಕು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಲಾಗಿದೆ ಎಂದು ಸಾಹಿತಿ, ಪತ್ರಕರ್ತ ಸಂಗಮೇಶ ಎನ್ ಜವಾದಿಯವರು ತಿಳಿಸಿದ್ದಾರೆ.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *