ಡ್ರಗ್ಸ್ ಜಾಗೃತಿಗಾಗಿ ವಿಧಾನಸೌಧ ದಿಂದ ಅಪ್ಪು ಸ್ಮಾರಕದವರೆಗೆ 21 ಕಿ ಮೀ ಓಟ- ಡಾ.ಮೋಹನ್ ಕುಮಾರ್ ದಾನಪ್ಪ…..

Spread the love

ಡ್ರಗ್ಸ್ ಜಾಗೃತಿಗಾಗಿ ವಿಧಾನಸೌಧ ದಿಂದ ಅಪ್ಪು ಸ್ಮಾರಕದವರೆಗೆ 21 ಕಿ ಮೀ ಓಟಡಾ.ಮೋಹನ್ ಕುಮಾರ್ ದಾನಪ್ಪ…..

ಬೆಂಗಳೂರು: ಜ26: 73 ನೇ ಗಣರಾಜ್ಯೋತ್ಸವದ ದಿನದಂದು ಇತ್ತೀಚಿಗೆ ನಿಧನರಾದ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಡ್ರಗ್ಸ್ ಜಾಗೃತಿ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಕಂಪ್ಲಿಯ ಡಾ.ಮೋಹನ್ ಕುಮಾರ್ ದಾನಪ್ಪನವರು ವಿಧಾನಸೌಧದಿಂದ ಪುನೀತ್ ರಾಜ್ ಕುಮಾರ್ ಸ್ಮಾರಕದವರೆಗೂ 21 ಕಿಲೋ ಮೀಟರ್ ಓಟವನ್ನ ಪೂರ್ಣಗೊಳಿಸಿ ಜಾಗೃತಿ ಮೂಡಿಸಿದರು! ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ವಿಧಾನ ಸೌಧ, ಕೆ.ಆರ್.ವೃತ್ತ, ಕಾರ್ಪೊರೇಷನ್ ವೃತ್ತ, ಕೆ.ಆರ್.ಮಾರ್ಕೆಟ್, ಕೆಂಗೇರಿ, ಮೈಸೂರು ರೋಡ್, ಮಾರ್ಗವಾಗಿ ಪುನೀತ್ ಸ್ಮಾರಕಕ್ಕೆ ತಲುಪಿ ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ “ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ, ಆರೋಗ್ಯಕ್ಕೆ ಮಾರಕ ದೇಶವನ್ನೇ ಡ್ರಗ್ಸ್ ನಿಂದ ನಿರ್ಮೂಲನೆ ಮಾಡಬೇಕೆಂದು ಹೇಳುವುದಕ್ಕಿಂತ ತಮ್ಮ ತಮ್ಮ ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸುವಂತೆ ಕರೆ ನೀಡಿದರು, ಈ ಹಿಂದೆಯೂ ಆಗಸ್ಟ್ 15 ರಂದು ಧ್ವಜ ಹಿಡಿದುಕೊಂಡು 10 ಕಿಲೋ ಮೀಟರ್ ಓಟದಲ್ಲಿ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಗೊಂಡಿದ್ದರು, ಡ್ರಗ್ಸ್ ಜಾಗೃತಿಗಾಗಿ ನಡೆಸಿದ 21 ಕಿಲೋ ಮೀಟರ್ ಓಟವನ್ನ ಎರಡೂವರೆ ಗಂಟೆಗಳಲ್ಲಿ ಪೂರ್ಣಗೊಳಿಸಿದರು, ಸದರಿ ಈ ಓಟದಲ್ಲಿ ಭಾರತೀಯ ದಲಿತ ಪ್ಯಾಂಥರ್ ನ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಪ್ಪ ಗಚ್ಚಿನಮನೆ ಪಾಲ್ಗೊಂಡಿದ್ದರು,

ವರದಿ – ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *