ಜಾತಿ ಭೂತ ಓಡಿಸುವ ಮನೊಭಾವ ನಮ್ಮದಾಗಲಿ….
ಜಾತಿಯ ಜನರು ಹುಟ್ಟಿದರಿಗ
ಜಗದಗಲಾಗಿಹರು ಈ ಜನರಿಗ
ಜಾತಿಯ ಮತದೊಳಗ
ನೀತಿ ಗುಣ ಮರೆತಾರಿಗ
ಜಾತಿಗೊಬ್ಬ ಗುರು ಹುಟ್ಟಿದರಿಗ
ಜಾತಿಯಹೆಸರೇಳಿ ಸಮಾಜ ಕೆಡಿಸಿದರಿಗ
ಒಂದೇಎನ್ನುವ ಸಮಾಜದೊಳಗ
ಜಾತಿಯ ಗುರುಗಳುಹುಟ್ಟಿ ಬೇರೆ ಮಾಡಿದರಿಗ
ಜಾತಿಯೆಂದು ಸೈನಿಕ ಆಗಲಿಲ್ಲ
ದೇಶದಜನರಿಗಾಗಿ ಸೈನಿಕ ಆಗಿದನಲ್ಲ
ಜಾತಿಯೆಂದು ಯುದ್ಧ ಮಾಡಲಿಲ್ಲ
ದೇಶದ ಜನರೆ ಒಂದುಜಾತಿ ಎಂದನಲ್ಲ
ಜಾತಿಯೆಂದು ಕೆಕೆ ಹೊಡೆಯುವರು
ಜಾತಿ ವ್ಯಕ್ತಿಯ ಜಯಂತಿ ಮಾಡುವರು
ಜಾತಿಎಂದು ಜನರು ಪ್ರೀತಿ ಮರೆತರು
ಜಾತಿಯೆಂದು ನೂರಾರು ಸಮಾಜ ಮಾಡಿಹರು
ಜಾತಿಯ ಜನಹುಟ್ಟಿ ಜಗ ಸಿಡಿಸಿದರು
ಪ್ರೀತಿ-ನೀತಿ ಹರಿಯಲಿಲ್ಲ ಇವರು
ಜಾತಿಒಳಗಬಿದ್ದು ಕೋತಿಗಳಾಗಿಹರು
ಜಾತಿ ಯಾವುದಾದರೇನು ಒಬ್ಬನೇ ದೇವರು
ನಾರಿನಾಳ ಮಾರುತೇಶ್ವರ ದೇವರು
ಮೌನೇಶ ಇಟಗಿ.. ತಾ..ಕುಷ್ಟಗಿ.. ಜಿಲ್ಲಾ..ಕೊಪ್ಪಳ