ರಸ್ತೆ ಗುಡಿಸುವ ಪೌರ ಕಾರ್ಮಿಕರ ಬದುಕೇ ಧೂಳು!

Spread the love

ರಸ್ತೆ ಗುಡಿಸುವ ಪೌರ ಕಾರ್ಮಿಕರ ಬದುಕೇ ಧೂಳು!

ಬೆಳಗಿನ ವಾಕಿಂಗ್ ಅಥವಾ ಜಾಗಿಂಗ್ ಮಾಡುವಾಗ, ಇನ್ನಾವುದೋ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ಫಳಫಳಿಸುವ ರಸ್ತೆ ನೋಡಿದರೆ ನಮ್ಮ ಕಣ್ಣುಗಳು ಕೂಡ ಅರಳುತ್ತವೆ. ಅದೇ ಗಲೀಜು ಗಲೀಜಾಗಿದ್ದರೆ? ರಸ್ತೆ ಗುಡಿಸುವವರ ಮೇಲೆ ಬೈಗುಳಗಳ ಸುರಿಮಳೆ ಪ್ರಾರಂಭವಾಗಿಬಿಡುತ್ತದೆ. ಬರೀ ದುಡ್ಡಿಗಾಗಿ ಆಸೆ ಪಡ್ತಾರೆ, ಮೈಬಗ್ಗಿಸಿ ಕೆಲಸ ಮಾಡಲ್ಲ ಎಂಬಿತ್ಯಾದಿ ಮಾತುಗಳು ನಮ್ಮ ಬಾಯಿಂದಲೇ ಬರುತ್ತವೆ. ಆದರೆ, ಪೊರಕೆ ಹಿಡಿದು  ಕಸವನ್ನು ತುಂಬಿ ರಸ್ತೆಗೆ ಅಂದ ತರುವ ಪೌರಕಾರ್ಮಿಕರ ಜೀವನಕ್ರಮದ ಬಗ್ಗೆ ಯಾರಾದರೂ ಯೋಚಿಸಿದ್ದೀರಾ?  ರಸ್ತೆಗಳನ್ನು ಸ್ವಚ್ಛವಾಗಿಡುವ, ಕೊಳಕು ಗಲೀಜು ಅಸಹ್ಯ ಎಂಬ ಪದಗಳೇ ಗೊತ್ತಿಲ್ಲದಂತೆ ಎಲ್ಲವನ್ನೂ ಸಮಾಧಾನದಿಂದಲೇ ಕ್ಲೀನ್ ಮಾಡುವ ಅವರ ಬದುಕು ಮಾತ್ರ… ಶೊಚನೀಯ! ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸುರಕ್ಷಾ ಕವಚ, ಉಸಿರಾಟಕ್ಕೆ ಮಾಸ್ಕ್, ಕೈಗವಸು, ಪ್ಲಾಸ್ಟಿಕ್ ಕಾಲು ಚೀಲ, ಬೂಟ್ ಗಳು ಇಲ್ಲದೆ ಸುರಕ್ಷಿತವಲ್ಲದ ಅದೆಷ್ಟೋ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ 1,500ರಿಂದ 2,000 ರು.ವರೆಗೆ ವೇತನ ಪಡೆಯುವ ಇವರೆಲ್ಲ ಈ ಸಂಬಳ ಸಾಲದೆ ಹೊತ್ತಿನ ಕೂಳಿಗೂ ಪರದಾಡುತ್ತಿರುವುದು ಮಾತ್ರ ನಿಜಕ್ಕೂ ವಿಪರ್ಯಾಸದ ಸಂಗತಿ. ಶಿಕ್ಷಣ ವಂಚಿತ ಮಕ್ಕಳು : ತಮಗೆ ಬರುವ ಆದಾಯದಲ್ಲಿ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿ ಇರುವಾಗ, ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವುದಾದರು ಹೇಗೆ? ಈ ಪ್ರಶ್ನೆಗೆ ಅವರಲ್ಲಿ ಉತ್ತರವೇ ಇಲ್ಲ. ಶಿಕ್ಷಣ ಕೊಡಿಸುವ ಆಸೆ ಇದ್ದರೂ ಅವರ ಕೈಯಲ್ಲಿ ಆಗುತ್ತಿಲ್ಲ. ಅಲ್ಲದೆ, ಪೌರ ಕಾರ್ಮಿಕರಾಗಿ ಕೆಲಸಮಾಡುವ ಬಹುತೇಕರು ಅನರಕ್ಷಸ್ಥ ರಾಗಿರುವುದು ಇದಕ್ಕೆ ಕಾರಣವೆಂದರೆ ತಪ್ಪಾಗಲಾರದು.ಈ ಕಾರಣದಿಂದಾಗಿ ಪೌರ ಕಾರ್ಮಿಕರ ಮಕ್ಕಳೂ ಗತ್ಯಂತರವಿಲ್ಲದೆ ಪೌರಕಾರ್ಮಿಕ ರಾಗಿಯೇ ಮುಂದುವರೆಯುತ್ತಿದ್ದಾರೆ. ಶಿಕ್ಷಣ, ಸಾಮಾಜಿಕ ಸಮಾನತೆ ಇವರಿಗೆ ಗಗನ ಕುಸುಮ. ಅನಾರೋಗ್ಯ : ಪೌರಕಾರ್ಮಿಕರು ನಿತ್ಯವೂ ದುರ್ವಾಸನೆಯ, ಸುರಕ್ಷಿತವಲ್ಲದ ಹಾಗೂ ಕೊಳೆತು ನಾರುವ ಸ್ಥಳಗಳಲ್ಲಿಯೇ ಕೆಲಸಮಾಡುತ್ತಾರೆ.  ಪುರಸಭೆ ಇಂದ ಅವರಿಗೆ ಸಮವಸ್ತ್ರವನ್ನು ನೀಡಿಲ್ಲ ಎಂಬ ಮಾತು ಕೇಳಿ ಬರುತ್ತೀದೆ. ಹಿರಿಯ ಅಧಿಕಾರಿಗಳನ್ನು ಇವರು ಬಾಯಿ ಬಿಟ್ಟು ಕೇಳುವಂತೆಯೂ ಇಲ್ಲ, ಅಧಿಕಾರಿಗಳೇ ತಿಳಿದು ಕೊಡುವದೂ ಇಲ್ಲ. ಇದರಿಂದಾಗಿ ಬಹುತೇಕ ಪೌರಕಾರ್ಮಿಕರು ಯಾವುದೇ ಸಮವಸ್ತ್ರ  ಧರಿಸದೇ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧ ಅಧಿಕಾರಿ ಗಮನ ಹರಿಸಬೇಕು..ಪುರಸಭೆ ಇಂದ ಟೆಂಡರ್ ಕರೆದ ಪೌರ ಕಾರ್ಮಿಕರು ಸುಮಾರು ಮೂರು -ನಾಲ್ಕು ತಿಂಗಳು ಕಳೆದರೂ ಸಂಬಳ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೌರ ಕಾರ್ಮಿಕರಿಗೆ ಮೀಸಲಿಟ್ಟಿರುವ ವೇತನದ ಅದಷ್ಟು ಬೇಗ ನೀಡಬೇಕು . ನೀಡದಿದ್ದರೆ ಟೆಂಡರ್ ಕರೆದ ಪೌರ ಕಾರ್ಮಿಕರ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ ಆದ್ದರಿಂದ ಮುಖ್ಯಾಧಿಕಾರಿ ಗಮನಿಸಿ….

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *